ಬೆಂಗಳೂರು: ಎಸ್‍ಡಿಪಿಐ ಕಾಂಗ್ರೆಸ್ ಕೂಸು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ.
ಸರಣಿ ಟ್ವೀಟ್ ಮೂಲಕ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿಕಾರಿರುವ ಅವರು ತಾಕತ್ತಿದ್ದರೆ SDPIಯನ್ನ ಬಿಜೆಪಿ ನಿಷೇಧ ಮಾಡಲಿ ಅಂತ ಸವಾಲ್ ಹಾಕಿದ್ದಾರೆ.
Advertisement
ಟ್ವೀಟ್‍ನಲ್ಲಿ ಏನಿದೆ?
ಎಸ್‍ಡಿಪಿಐ ಕಾಂಗ್ರೆಸ್ ಕೂಸು ಎಂದಿರುವ ಪ್ರಹ್ಲಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ? ಮುಸ್ಲಿಮರ ಮತ ವಿಭಜಿಸಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿರುವ ಎಸ್‍ಡಿಪಿಐ ಕಾಂಗ್ರೆಸ್ ಕೂಸಾಗಲು ಸಾಧ್ಯವೆ? ಎಸ್‍ಡಿಪಿಐ ಮತ್ತು ಓವೈಸಿಯ AIMIM ಪಕ್ಷ BJPಯ ಬೀ ಟೀಂ ಎಂದು ದೇಶಕ್ಕೆ ಗೊತ್ತಿದೆ. ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
Advertisement
1
SDPI ಕಾಂಗ್ರೆಸ್ ಕೂಸು ಎಂದಿರುವ ಪ್ರಲ್ಹಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ?
ಮುಸ್ಲಿಮರನ್ನು ಪ್ರಚೋದಿಸಿ ಚುನಾವಣೆಯಲ್ಲಿ BJPಗೆ ಅನುಕೂಲ ಮಾಡಿಕೊಡುತ್ತಿರುವ SDPI ಕಾಂಗ್ರೆಸ್ ಕೂಸಾಗಲು ಸಾಧ್ಯವೆ?
SDPI ಮತ್ತು ಓವೈಸಿಯ AIMIM ಪಕ್ಷ BJPಯ ಬೀ ಟೀಂ ಎಂದು ದೇಶಕ್ಕೆ ಗೊತ್ತಿದೆ.
ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 29, 2022
ಪ್ರಹ್ಲಾದ್ ಜೋಶಿ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಸ್‍ಡಿಪಿಐ, ಓವೈಸಿಯ ಎಐಎಮ್‌ಐಎಮ್ ಹಾಗೂ ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ. RSS ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ ಎಸ್‍ಡಿಪಿಐ ಪಾತ್ರವೇನು.? ಓವೈಸಿಯ ರೋಲ್ ಏನು ಎಂದು ದೇಶಕ್ಕೆ ತಿಳಿಯಲಿ.
Advertisement
2
ಪ್ರಲ್ಹಾದ್ ಜೋಶಿಯವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು SDPI, ಓವೈಸಿಯ AIMIM ಹಾಗೂw ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ.
RSS ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ SDPI ಪಾತ್ರವೇನು? ಓವೈಸಿಯ ರೋಲ್ ಏನು ಎಂದು ದೇಶಕ್ಕೆ ತಿಳಿಯಲಿ.
ಈ ಸಂಘಟನೆಗಳಿಗೆ ನಾಗಪುರದ ಕನೆಕ್ಷನ್ ಇಲ್ಲದಿದ್ದರೆ ಈ ಕೂಡಲೇ SDPIನ್ನು ನಿಷೇಧಿಸಲಿ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 29, 2022
ಈ ಸಂಘಟನೆಗಳಿಗೆ ನಾಗಪುರದ ಕನೆಕ್ಷನ್ ಇಲ್ಲದಿದ್ದರೆ ಈ ಕೂಡಲೇ ಎಸ್‍ಡಿಪಿಐನ್ನು ನಿಷೇಧಿಸಲಿ. ಎಸ್‍ಡಿಪಿಐನಿಂದ ರಾಜಕೀಯ ಲಾಭ ಪಡೆಯುತ್ತಿರುವ ಬಿಜೆಪಿ ಅವರು ಎಸ್‍ಡಿಪಿಐ ಸಂಘಟನೆ ಕಾಂಗ್ರೆಸ್ ಕೂಸು ಎಂದು ಹಲುಬುವುದ್ಯಾಕೆ.? ಎಸ್‍ಡಿಪಿಐ ಸಂಘಟನೆಯ ಬಗ್ಗೆ ಕಾಂಗ್ರೆಸ್ಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸರ್ಕಾರವೇ ಇದೆ. ಎಸ್‍ಡಿಪಿಐ ಸಂಘಟನೆಯನ್ನು ನಿಷೇಧಿಸದಂತೆ ಬಿಜೆಪಿಯವರ ಕೈ ಕಟ್ಟಿ ಹಾಕಿರುವವರು ಯಾರು? ತಾಕತ್ತಿದ್ದರೆ ನಿಷೇಧಿಸಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: 4 ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ
Advertisement
3
SDPIನಿಂದ ರಾಜಕೀಯ ಲಾಭ ಪಡೆಯುತ್ತಿರುವ BJP ಯವರು SDPI ಸಂಘಟನೆ ಕಾಂಗ್ರೆಸ್ ಕೂಸು ಎಂದು ಹಲುಬುವುದ್ಯಾಕೆ?
SDPI ಸಂಘಟನೆಯ ಬಗ್ಗೆ ಕಾಂಗ್ರೆಸ್ಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ.
ಕೇಂದ್ರ ಹಾಗೂ ರಾಜ್ಯದಲ್ಲಿ BJPಯ ಸರ್ಕಾರವೇ ಇದೆ.
SDPI ಸಂಘಟನೆಯನ್ನು ನಿಷೇಧಿಸದಂತೆ BJPಯವರ ಕೈ ಕಟ್ಟಿ ಹಾಕಿರುವವರ‌್ಯಾರು? ತಾಕತ್ತಿದ್ದರೆ ನಿಷೇಧಿಸಲಿ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 29, 2022
ಎಸ್‍ಡಿಪಿಐ ಸಂಘಟನೆ ಬಿಜೆಪಿಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ. ಎಸ್‍ಡಿಪಿಐ ಸಂಘಟನೆ ನಿಷೇಧವಾಗುವುದು ಬಿಜೆಪಿಯವರಿಗೂ ಸುತಾರಾಂ ಇಷ್ಟವಿಲ್ಲ. ಈ ಸತ್ಯ ಜೋಶಿಯವರಿಗೂ ಗೊತ್ತಿದೆ. ಆದರೂ ಜೋಶಿಯವರು ಜನರ ಕಣ್ಣಿಗೆ ಮಣ್ಣೆರಚಲು ಎಸ್‍ಡಿಪಿಐನೊಂದಿಗೆ ಕಾಂಗ್ರೆಸ್‍ಗೆ ಸಂಬಂಧ ಕಲ್ಪಿಸುತ್ತಾರೆ. ಅಷ್ಟಕ್ಕೂ ಎಸ್‍ಡಿಪಿಐ ಸಂಘಟನೆಯಿಂದ ಕಾಂಗ್ರೆಸ್‍ಗೆ ಏನು ಲಾಭ ಜೋಶಿಯವರೆ.? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಸಿದ್ದರಾಮಯ್ಯಗೆ 1 ಪರ್ಸೆಂಟ್ ಅಷ್ಟೂ ಗೊತ್ತಿಲ್ಲ: ಎಸ್.ಟಿ.ಸೋಮಶೇಖರ್ ತಿರುಗೇಟು