ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಶಾಸಕ ದಿನೇಶ್ ಗುಂಡೂರಾವ್ ಸರ್ಕಾರವನ್ನು ಕೋಲ್ಡ್ ಬ್ಲೆಡ್ಡೆಡ್ ಹಂತಕ ಎಂದು ಹರಿಹಾಯ್ದಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: ಪ್ರತಿದಿನ ತೈಲಬೆಲೆ ಏರುತ್ತಲೇ ಇದೆ. ಕೇವಲ 13 ದಿನದ ಅವಧಿಯಲ್ಲಿ 8 ರೂ. ಏರಿಕೆಯಾಗಿದೆ. ಪ್ರತಿದಿನ ಪೈಸೆಗಳ ಲೆಕ್ಕದಲ್ಲಿ ತೈಲ ಬೆಲೆ ಏರಿಸುತ್ತಿರುವ ಕೇಂದ್ರ, ಜನರಿಗೆ ಒಂದೇ ಬಾರಿ ವಿಷ ಕೊಟ್ಟು ಸಾಯಿಸದೆ, ಒಂದೊಂದೆ ತೊಟ್ಟು ವಿಷ ಕೊಟ್ಟು ಸಾಯಿಸುವ ಪ್ರಯೋಗ ಮಾಡುತ್ತಿದೆ. ಕರುಣೆಯಿಲ್ಲದ ಈ ಸರ್ಕಾರ ಒಂದು ರೀತಿ ಕೋಲ್ಡ್ಬ್ಲಡೆಡ್ ಹಂತಕನಿದ್ದಂತೆ.
Advertisement
1
ಪ್ರತಿದಿನ ತೈಲಬೆಲೆ ಏರುತ್ತಲೇ ಇದೆ.
ಕೇವಲ 14ದಿನದ ಅವಧಿಯಲ್ಲಿ ₹8.40 ಏರಿಕೆಯಾಗಿದೆ.
ಪ್ರತಿದಿನ ಪೈಸೆಗಳ ಲೆಕ್ಕದಲ್ಲಿ ತೈಲ ಬೆಲೆ ಏರಿಸುತ್ತಿರುವ ಕೇಂದ್ರ, ಜನರಿಗೆ ಒಂದೇ ಬಾರಿ ವಿಷ ಕೊಟ್ಟು ಸಾಯಿಸದೆ, ಒಂದೊಂದೆ ತೊಟ್ಟು ವಿಷ ಕೊಟ್ಟು ಸಾಯಿಸುವ ಪ್ರಯೋಗ ಮಾಡುತ್ತಿದೆ. ಕರುಣೆಯಿಲ್ಲದ ಸರ್ಕಾರ ಒಂದು ರೀತಿ ಕೋಲ್ಡ್ಬ್ಲಡೆಡ್ ಹಂತಕನಿದ್ದಂತೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 4, 2022
ತೈಲ ಬೆಲೆ ನಿಯಂತ್ರಣ ನಮ್ಮ ಕೈಲಿಲ್ಲ ಎಂದು ಈಗ ಹೇಳುತ್ತಿರುವ ಕೇಂದ್ರ, ಕಳೆದ ನಾಲ್ಕೂವರೆ ತಿಂಗಳು ತೈಲ ಬೆಲೆ ಏರದೆ ತಟಸ್ಥವಾಗಿದ್ದು ಯಾಕೆ.? ಪಂಚರಾಜ್ಯ ಚುನಾವಣೆಯ ಕಾರಣಕ್ಕೆ ತೈಲ ಬೆಲೆ ಏರಿಕೆಯಾಗದಂತೆ ಕೇಂದ್ರ ನೋಡಿಕೊಂಡಿತ್ತು. ಈಗ ಚುನಾವಣೆ ಮುಗಿದಿದೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬಂತೆ ಈಗ ತೈಲಬೆಲೆಯನ್ನು ಏರಿಸುತ್ತಿದೆ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ
Advertisement
1
ತೈಲ ಬೆಲೆ ನಿಯಂತ್ರಣ ನಮ್ಮ ಕೈಲಿಲ್ಲ ಎಂದು ಈಗ ಹೇಳುತ್ತಿರುವ ಕೇಂದ್ರ, ಕಳೆದ ನಾಲ್ಕೂವರೆ ತಿಂಗಳು ತೈಲ ಬೆಲೆ ಏರದೆ ತಟಸ್ಥವಾಗಿದ್ದು ಯಾಕೆ?
ಪಂಚರಾಜ್ಯ ಚುನಾವಣೆಯ ಕಾರಣಕ್ಕೆ ತೈಲ ಬೆಲೆ ಏರಿಕೆಯಾಗದಂತೆ ಕೇಂದ್ರ ನೋಡಿಕೊಂಡಿತ್ತು.
ಈಗ ಚುನಾವಣೆ ಮುಗಿದಿದೆ.
ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬಂತೆ ಈಗ ತೈಲಬೆಲೆಯನ್ನು ಏರಿಸುತ್ತಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 4, 2022
Advertisement
ತೈಲಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೈಲ ಬಾಂಡ್ನ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಾರೆ. ತೈಲಬಾಂಡ್ಗೆ ಕೊಡಬೇಕಾಗಿರುವ ಸಾಲ 2 ಲಕ್ಷದ 20 ಸಾವಿರ ಕೋಟಿ. ಕಳೆದ 8 ವರ್ಷಗಳಲ್ಲಿ ಹೆಚ್ಚುವರಿ ಅಬಕಾರಿ ಸುಂಕದ ಮೂಲಕ ಕೇಂದ್ರ ವಸೂಲಿ ಮಾಡಿರುವುದು 26 ಲಕ್ಷ ಕೋಟಿಯಾಗಿದೆ. ಆ 26 ಲಕ್ಷ ಕೋಟಿ ಯಾರ ಉದ್ಧಾರಕ್ಕೆ ಖರ್ಚಾಯ್ತು.? ಇದನ್ನೂ ಓದಿ: ಜನರ ಗಮನ ಬೇರೆ ಕಡೆ ಸೆಳೆಯಲು ಬಿಜೆಪಿ ಪಿತೂರಿ ನಡೆಸಿದೆ: ಶ್ರೀನಿವಾಸ್ ಮಾನೆ
Advertisement
3
ತೈಲಬೆಲೆ ಏರಿಕೆ ಸಮರ್ಥಿಸಿಕೊಳ್ಳಲು ವಿತ್ತ ಸಚಿವೆ @nsitharaman ತೈಲ ಬಾಂಡ್ನ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಾರೆ.
ತೈಲಬಾಂಡ್ಗೆ ಕೊಡಬೇಕಾಗಿರುವ ಸಾಲ 2 ಲಕ್ಷದ 20 ಸಾವಿರ ಕೋಟಿ.
ಕಳೆದ 8 ವರ್ಷಗಳಲ್ಲಿ ಹೆಚ್ಚುವರಿ ಅಬಕಾರಿ ಸುಂಕದ ಮೂಲಕ ಕೇಂದ್ರ ವಸೂಲಿ ಮಾಡಿರುವುದು 26 ಲಕ್ಷ ಕೋಟಿ.
ಆ 26 ಲಕ್ಷ ಕೋಟಿ ಯಾರ ಉದ್ದಾರಕ್ಕೆ ಖರ್ಚಾಯ್ತು
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 4, 2022
ತೈಲದ ಮೇಲೆ ಮನಸ್ಸಿಗೆ ಬಂದಂತೆ ಅಬಕಾರಿ ಸುಂಕ ಏರಿಸಿರುವ ಕೇಂದ್ರ, ದೇಶದ ಜನರನ್ನು ಅಕ್ಷರಶಃ ದರೋಡೆ ಮಾಡುತ್ತಿದೆ. ತಲೆಯಲ್ಲಿ ಮೆದುಳಿಲ್ಲದ ಕೆಲ ಭಕ್ತ ಶಿಖಾಮಣಿಗಳು ಸಾಮಾಜಿಕ ಜಾಲತಾಣದಲ್ಲಿ ತೈಲ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಕೇಂದ್ರದ ಹಗಲು ದರೋಡೆಗೆ ಅಂಗೀಕಾರದ ಮುದ್ರೆ ಒತ್ತಿಸೋ ಪ್ರಯತ್ನ ಮಾಡುತ್ತಿದ್ದಾರೆ. ಇದು ದೇಶದ ದುರಂತ ಎಂದು ಟ್ವೀಟ್‍ನಲ್ಲಿ ಕಿಡಿಕಾರಿದ್ದಾರೆ.