ಬೆಂಗಳೂರು: ಹಬ್ಬದ ದಿನದಂದೆ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ಶಾಸಕ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮೂಲಕ ಹರಿಹಾಯ್ದರು.
ಟ್ವೀಟ್‍ನಲ್ಲಿ ಏನಿದೆ?: ಹೋಟೆಲ್‍ಗಳ ತಿಂಡಿ, ತಿನಿಸುಗಳ ದರ ಇಂದಿನಿಂದ ಮತ್ತೆ ಏರಿಕೆಯಾಗಿದೆ. ಅಡುಗೆ ಎಣ್ಣೆ, ವಾಣಿಜ್ಯ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಸತತವಾಗಿ ಏರಿಕೆಯಾದ ಪರಿಣಾಮ ಹೋಟೆಲ್ ಮಾಲೀಕರು ದರ ಏರಿಸುವುದು ಅನಿವಾರ್ಯವಾಗಿದೆ. ಗ್ರಾಹಕರು ಹೊಟ್ಟೆ ತುಂಬಿಸಿಕೊಳ್ಳಬೇಕಾದರೆ ದುಬಾರಿ ದರ ತೆರಲೇಬೇಕು. ದರ ಏರಿಕೆ ಡಬಲ್ ಇಂಜಿನ್ ಸರ್ಕಾರದ ಬಂಪರ್ ಕೊಡುಗೆ ಎಂದು ಕಿಡಿಕಾರಿದರು.
Advertisement
3
ಅಗತ್ಯ ವಸ್ತು,ಅಡುಗೆ ಎಣ್ಣೆ,FMCG ಸೇರಿದಂತೆ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.
ಜನ ಒಂದೊತ್ತಿನ ಊಟ ತಿನ್ನಲೂ ಖರ್ಚಿನ ಲೆಕ್ಕ ಹಾಕಬೇಕು
BJP ನಾಯಕರು ಬೆಲೆಯೇರಿಕೆಯ ಬಗ್ಗೆ ಎಂದಾದರೂ ಮಾತನಾಡಿದ್ದಾರೆಯೇ? ಪೆಟ್ರೋಲ್ ಬೆಲೆ ಲೀಟರ್‌ಗೆ ಐನೂರಾದರೂ ನಮ್ಮ ಓಟು ಮೋದಿಗೆ ಎನ್ನುವ ಮೂರ್ಖರ ಸಂತೆಯ BJPಯವರಿಗೆ ಜನರ ಕಷ್ಟ ಗೊತ್ತಿದೆಯೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 2, 2022
ಅವಿವಾಹಿತರು, ಉದ್ಯೋಗಿಗಳು, ವಲಸಿಗರು, ಕಾರ್ಮಿಕರು ಹಾಗೂ ಅಸಂಖ್ಯಾತ ಬಡವರಿಗೆ ಇಂದಿರಾ ಕ್ಯಾಂಟೀನ್‍ನಲ್ಲಿ ರಿಯಾಯಿತಿ ದರದಲ್ಲಿ ಊಟ ಸಿಗುತಿತ್ತು. ಈ ಸರ್ಕಾರ ಇಂದಿರಾ ಕ್ಯಾಂಟೀನ್‍ಗೆ ಅನುದಾನ ಕೂಡ ನಿಲ್ಲಿಸಿದೆ. ಇತ್ತ ಬೆಲೆಯೇರಿಕೆ ನಿಯಂತ್ರಣದ ಬಗ್ಗೆಯೂ ಯಾವುದೇ ಕ್ರಮವಿಲ್ಲ. ಇಂದಿರಾ ಕ್ಯಾಂಟೀನ್‍ಗೆ ಅನುದಾನ ಕೊಡಲು ಈ ಸರ್ಕಾರಕ್ಕೆ ದಾಡಿಯೇನು ಎಂದು ವಾಗ್ದಾಳಿ ನಡೆಸಿದರು.
Advertisement
4
ಬೆಲೆಯೇರಿಕೆಯ ಬಿಸಿ ಜನರನ್ನು ಸುಡುತ್ತಿದೆ.
ಕೊಳ್ಳೆ ಹೊಡೆದು ಶ್ರೀಮಂತರಾಗಿರುವ BJPಯವರಿಗೆ ಬೆಲೆಯೇರಿಕೆಯ ತಾಪ ತಟ್ಟದಿರಬಹುದು.
ಆದರೆ ಬಡವರ ಪಾಡೇನು?
BJPಯವರೆ, ಬೆಲೆಯೇರಿಕೆ ಇವತ್ತಿನ ನೈಜ ಸಮಸ್ಯೆ.
ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಬಿಟ್ಟು ಬೆಲೆಯೇರಿಕೆಯ ಬಗ್ಗೆ ಈಗಲಾದರೂ ಬಾಯಿ ಬಿಡಿ.
ನಿಮ್ಮ ಪಕ್ಷದ ಬಡವರ ಕಾಳಜಿ ಜನರಿಗೂ ತಿಳಿಯಲಿ
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 2, 2022
ಅಗತ್ಯ ವಸ್ತು, ಅಡುಗೆ ಎಣ್ಣೆ, ಎಫ್‍ಎಂಸಿಜಿ ಸೇರಿದಂತೆ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜನ ಒಂದೊತ್ತಿನ ಊಟ ತಿನ್ನಲೂ ಖರ್ಚಿನ ಲೆಕ್ಕ ಹಾಕಬೇಕು. ಬಿಜೆಪಿ ನಾಯಕರು ಬೆಲೆಯೇರಿಕೆಯ ಬಗ್ಗೆ ಎಂದಾದರೂ ಮಾತನಾಡಿದ್ದಾರೆಯೇ.? ಪೆಟ್ರೋಲ್ ಬೆಲೆ ಲೀಟರ್‌ಗೆ ಐನೂರಾದರೂ ನಮ್ಮ ವೋಟು ಮೋದಿಗೆ ಎನ್ನುವ ಮೂರ್ಖರ ಸಂತೆಯ ಬಿಜೆಪಿಯವರಿಗೆ ಜನರ ಕಷ್ಟ ಗೊತ್ತಿದೆಯೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಚ್‍ಡಿಕೆ ರಾಜಕೀಯ ಜೀವನವೇ ಒಂದು ಡ್ರಾಮಾ, ಅವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ: ಬಿಜೆಪಿ ಕಿಡಿ
Advertisement
ಬೆಲೆಯೇರಿಕೆಯ ಬಿಸಿ ಜನರನ್ನು ಸುಡುತ್ತಿದೆ. ಕೊಳ್ಳೆ ಹೊಡೆದು ಶ್ರೀಮಂತರಾಗಿರುವ ಬಿಜೆಪಿಯವರಿಗೆ ಬೆಲೆಯೇರಿಕೆಯ ತಾಪ ತಟ್ಟದಿರಬಹುದು. ಆದರೆ ಬಡವರ ಪಾಡೇನು.? ಬಿಜೆಪಿಯವರೆ, ಬೆಲೆಯೇರಿಕೆ ಇವತ್ತಿನ ನೈಜ ಸಮಸ್ಯೆ. ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಬಿಟ್ಟು ಬೆಲೆಯೇರಿಕೆಯ ಬಗ್ಗೆ ಈಗಲಾದರೂ ಬಾಯಿ ಬಿಡಿ. ನಿಮ್ಮ ಪಕ್ಷದ ಬಡವರ ಕಾಳಜಿ ಜನರಿಗೂ ತಿಳಿಯಲಿ ಎಂದು ಟೀಕಿಸಿದರು. ಇದನ್ನೂ ಓದಿ: ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ- ಎನ್‌ಐಎ ವರದಿಯಲ್ಲಿ ಸ್ಫೋಟಕ ಮಾಹಿತಿ