ಬೆಂಗಳೂರು: ವಿಧಾನ ಸೌಧ ವೆಸ್ಟ್ ಗೇಟ್ ಬಳಿ ಹಣ ಪತ್ತೆ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಪುಟಗೋಸಿ ಎಂಬ ಪದ ಬಳಸಬಾರದಿತ್ತು. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಆಗ ಹೇಳಿದ ಸಂದರ್ಭವನ್ನು ತಪ್ಪಾಗಿ ಆರ್ಥೈಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಮಾಚಿದೇವ ಮಡುವಾಳ ಜಾಗೃತಿ ಸಮಾರಂಭದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮೋದಿ ಅವರ ರಫೇಲ್ ಹಗರಣದ 30 ಸಾವಿರ ಕೋಟಿ ರೂ. ಬಗ್ಗೆ ಮಾತಾಡುವಾಗ 26 ಲಕ್ಷ ರೂ. ಬಗ್ಗೆ ಕೇಳಿದರು. ಆಗ ನಾನು ಪುಟಗೋಸಿ ಎಂಬ ಶಬ್ದ ಉಪಯೋಗಿಸಿದೆ. ಆ ಪದ ಬಳಸಬಾರದಿತ್ತು ಬಳಸಿದ್ದೇನೆ. ಆದರೆ ನಾನು ಬಳಸಿದ ಸಂದರ್ಭ ಬೇರೆ ಇತ್ತು ಅಷ್ಟೇ. ಅದನ್ನು ಮಾಧ್ಯಮಗಳು ತಪ್ಪಾಗಿ ಆರ್ಥೈಸಿದ್ದಾರೆ ಎಂದರು.
Advertisement
Advertisement
ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರು ಕಾನೂನು ಕ್ರಮ ನಡೆಯುತ್ತದೆ. ಪೊಲೀಸರು ನಿಸ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ. 10 ರೂ. ಅವ್ಯವಹಾರ ಆಗಿದ್ದರು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಮ್ಮವರು ಸೇರಿದಂತೆ ಯಾರೇ ತಪ್ಪು ಮಾಡಿದ್ರು ತನಿಖೆ ನಡೆಸಲಾಗುವುದು, ಅವರ ವಿರುದ್ಧ ಕಾನೂನು ಕ್ರಮ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದರು.
Advertisement
ರಫೇಲ್ ಒಪ್ಪಂದದ ಬಗ್ಗೆ ಅಂದು ನಾನು ಮಾತನಾಡುತ್ತಿದೆ. ಈ ಬಗ್ಗೆ ನಿರಂತರ ಹೋರಾಟ ನಡೆಸಿದರು ಮೋದಿ ಸರ್ಕಾರ ಜಂಟಿ ಸದನ ಸಮಿತಿ ರಚಿಸಲು ಅವಕಾಶ ನೀಡಿಲ್ಲ. ಅಂತಹ ವಿಚಾರದ ಬಗ್ಗೆ ಬಿಜೆಪಿ ಅವರು ಮಾತನಾಡದೆ ಈ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv