ಕೊಲಂಬೋ: ಶ್ರೀಲಂಕಾದ ನೂತನ ಪ್ರಧಾನ ಮಂತ್ರಿಯಾಗಿ ಹಿರಿಯ ರಾಜಕಾರಣಿ ಮತ್ತು ಮಾಜಿ ಗೃಹ ಸಚಿವ ದಿನೇಶ್ ಗುಣವರ್ಧನಾ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Advertisement
ರಾಜಕೀಯದಲ್ಲಿ ಧೀಮಂತ ವ್ಯಕ್ತಿ ಎಂದೇ ಖ್ಯಾತಿ ಪಡೆದಿರುವ 73 ವರ್ಷದ ಗುಣವರ್ಧನಾ ಅವರು ಈ ಹಿಂದೆ ವಿದೇಶಾಂಗ ಸಚಿವ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಏಪ್ರಿಲ್‍ನಲ್ಲಿ ಆಗಿನ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಗೃಹ ಸಚಿವರಾಗಿ ನೇಮಿಸಿದ್ದರು. ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಕೂಡ ಶುಕ್ರವಾರದಂದು ಹಿಂದಿನ ಸರ್ಕಾರದ ಸದಸ್ಯರನ್ನು ಒಳಗೊಂಡ ತಮ್ಮ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ಕಾರಿಗೆ ಅಲ್ಲ, ಅವರ ಮನೆಗೆ ಬೆಂಕಿ ಹಾಕಿಕೊಳ್ಳಬೇಕು – ಕಾಂಗ್ರೆಸ್‍ಗೆ ಆರಗ ತಿರುಗೇಟು
Advertisement
Advertisement
ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ದೇಶ ಬಿಟ್ಟು ಪಲಾಯನ ಮಾಡಿ, ನಂತರ ತಮ್ಮ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಗೋತಬಯ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ 73 ವರ್ಷದ ವಿಕ್ರಮಸಿಂಘೆ ಅವರು ದೇಶದ ಎಂಟನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಬ್ಯಾಗ್‍ನಲ್ಲಿ ಬಾಂಬ್ ಇದೆ ವಿಮಾನದಲ್ಲಿ ರಂಪಾಟ – ಬೆಚ್ಚಿಬಿದ್ದ ಸಹಪ್ರಯಾಣಿಕರು