ಮುಂಬೈ: ಅಂಡರ್-19 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರ ದಿನೇಶ್ ಬಣ ಸಿಡಿಸಿದ ಫಿನಿಶಿಂಗ್ ಶಾಟ್, 2011ರ ವಿಶ್ವಕಪ್‍ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಿಡಿಸಿದ ಸಿಕ್ಸರ್ ನೆನಪಿಸಿದೆ.
Advertisement
2011ರ ಏಕದಿನ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ನುವಾನ್ ಕುಲಶೇಖರ ಎಸೆದ 48ನೇ ಓವರ್‌ನ ಎಸೆತವನ್ನು ಧೋನಿ ಸಿಕ್ಸರ್‌ಗಟ್ಟಿ ಭಾರತಕ್ಕೆ 2ನೇ ಬಾರಿ ಏಕದಿನ ವಿಶ್ವಕಪ್ ಜಯಸಿಕೊಟ್ಟಿದ್ದರು. ಆ ಸುಂದರ ಕ್ಷಣವನ್ನು ನಿನ್ನೆ ನಡೆದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯ ಮತ್ತೊಮ್ಮೆ ನೆನಪಿಸಿದೆ. ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?
Advertisement
Advertisement
ಟೀಂ ಇಂಡಿಯಾ ವಿಶ್ವಕಪ್ ಗೆದ್ದು 11 ವರ್ಷಗಳ ಬಳಿಕ ನಿನ್ನೆ ಬಾಣ ಸಿಡಿಸಿದ ಫಿನಿಶಿಂಗ್ ಶಾಟ್ ಧೋನಿಯ ಐಕಾನಿಕ್ ಶಾಟ್‍ನಂತೆ ಕಂಡು ಬರಲು ಕಾರಣವಿದೆ. ಇಂಗ್ಲೆಂಡ್ ನೀಡಿದ 190 ರನ್‍ಗಳ ಗುರಿ ಬೆನ್ನಟ್ಟಲು ಹೊರಟ ಟೀಂ ಇಂಡಿಯಾ 176 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಬ್ಯಾಟಿಂಗ್‍ಗೆ ಆಗಮಿಸಿದ ದಿನೇಶ್ ಬಾಣ ಕೇವಲ 5 ಎಸೆತದಲ್ಲಿ 2 ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಟೀಂ ಇಂಡಿಯಾವನ್ನು 4 ವಿಕೆಟ್ ಮತ್ತು 14 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದ್ದರು. ಈ ಮೂಲಕ ಟೀಂ ಇಂಡಿಯಾಗೆ 5ನೇ ಅಂಡರ್-19 ವಿಶ್ವಕಪ್ ಮುತ್ತಿಕ್ಕುವ ಅವಕಾಶ ಮಾಡಿಕೊಟ್ಟರು. ಅಷ್ಟೇ ಅಲ್ಲದೆ ಧೋನಿ ಮತ್ತು ದಿನೇಶ್ ಬಣ ಇಬ್ಬರೂ ಕೂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ಗಳು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಇದನ್ನೂ ಓದಿ: ಕೈಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ
Advertisement
View this post on Instagram
ಬಣ ಸಿಡಿಸಿದ ಅಂತಿಮ ಸಿಕ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಧೋನಿ 2011 ವಿಶ್ವಕಪ್ ಹೀರೋ ಆದರೆ, 2022ರ ಅಂಡರ್-19 ಹೀರೋ ಆಗಿ ದಿನೇಶ್ ಬಣ ಕಾಣಿಸಿಕೊಂಡಿದ್ದಾರೆ. ಈ ಎರಡು ಐಕಾನಿಕ್ ಶಾಟ್‍ಗಳು ಅಜಾರಮರ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.