ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ವಿಶ್ವಕಪ್ ಮುನ್ನವೇ ಬೆಳಕಿಗೆ ಬಂದಿದ್ದು, ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿಶ್ವಕಪ್‍ಗೆ ತಂಡದ ನಾಯಕತ್ವವನ್ನು ಬದಲಾವಣೆ ಮಾಡುವ ನಿರ್ಧಾರ ಮಾಡಿದೆ.
2015 ರಿಂದಲೂ ಒಂದು ಏಕದಿನ ಪಂದ್ಯವನ್ನು ಆಡದ ಎಡಗೈ ವೇಗಿ ದಿಮುತ್ ಕರುಣಾರತ್ನೆ ಅವರನ್ನು ತಂಡದ ಕ್ಯಾಪ್ಟನ್ ಆಗಿ ನೇಮಕ ಮಾಡಿದೆ. 30 ವರ್ಷದ ಕರುಣಾರತ್ನೆ 60 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅಂತಿಮ ಏಕದಿನ ಪಂದ್ಯವನ್ನು 2015ರಲ್ಲಿ ಆಡಿದ್ದರು. ಈ ಮಾದರಿಯಲ್ಲಿ ಕರುಣರತ್ನೆ 17 ಏಕದಿನ ಪಂದ್ಯಗಳಿಂದ ಸರಾಸರಿ 15.83 ರಂತೆ 190 ರನ್ ಗಳನ್ನ ಮಾತ್ರ ಗಳಿಸಿದ್ದಾರೆ.
Advertisement
Advertisement
ಶ್ರೀಲಂಕಾ ಕ್ರಿಕೆಟ್‍ನಲ್ಲಿ ಫಿಕ್ಸಿಂಗ್ ಆರೋಪ ಕೇಳಿ ಬಂದ ಬಳಿಕ ನಿರಂತರವಾಗಿ ಮಂಡಳಿ ತಂಡದ ನಾಯಕತ್ವದ ಬದಲಾವಣೆಯಲ್ಲಿ ತೊಡಗಿದ್ದು, ಕಳೆದ ಕೆಲ ಸಮಯದಿಂದ ಮಾಲಿಂಗ ತಂಡದ ನಾಯಕತ್ವ ವಹಿಸಿದ್ದರು. ಆದರೆ ಕಳೆದ 14 ಪಂದ್ಯಗಳಲ್ಲಿ ಮಾಲಿಂಗ ನಾಯಕತ್ವದ ತಂಡ 13 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ತಂಡದ ನಾಯಕತ್ವದ ಬದಲಾವಣೆಯಿಂದ ಬೇಸರಗೊಂಡಿರುವ ಅನುಭವಿ ಆಟಗಾರ, ಮಾಜಿ ನಾಯಕ ಲಸಿತ್ ಮಾಲಿಂಗ ಆಟಗಾರರ ವಾಟ್ಸಾಪ್ ಗ್ರೂಪಿನಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ 15 ಆಟಗಾರರ ಪಟ್ಟಿ ಘೋಷಣೆ ಆಗಿದ್ದು, ಮಾಲಿಂಗ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಶ್ರೀಲಂಕಾ ಜೂನ್ 01 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
Advertisement
The National Selectors today appointed Dimuth Karunaratne as the ODI Captain of the Sri Lankan team.
He will lead the team during the #CWC19 READ: https://t.co/cdIoJM8skb pic.twitter.com/kke20qHsQu
— Sri Lanka Cricket (@OfficialSLC) April 17, 2019
Advertisement
ತಂಡ ಇಂತಿದೆ: ಏಂಜಲೊ ಮ್ಯಾಥ್ಯೂಸ್, ಅವಿಷ್ಕ ಫರ್ನಾಂಡೊ, ಲಾಹಿರು ತಿರಿಮನ್ನೆ, ದಿಮುತ್ ಕರುಣಾರತ್ನೆ, ಲಸಿತ್ ಮಾಲಿಂಗ, ಕುಶಾಲ್ ಪೆರೆರಾ, ಕುಶಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಜೀವನ್ ಮೆಂಡಿಸ್, ಮಲಿಂಡಾ ಸಿರಿವರ್ಧನ, ಜೆಫ್ರಿ ವಾಂಡಸ್ರ್ಸೆ, ನುವಾನ್ ಪ್ರದೀಪ್, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ತಿಸರಾ ಪೆರೆರಾ, ಇಸುರು ಉದಾನ.