ಹಿಂದಿ ಕಿರುತೆರೆಯ ನಟಿ, ಮಾಡೆಲ್ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧೆ ಡಿಂಪಿ ಗಂಗೂಲಿ ಇದೀಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದನ್ನು ಅವರು ಅಭಿಮಾನಿಗಳ ಜತೆ ಸೊಗಸಾಗಿ ಹಂಚಿಕೊಂಡಿದ್ದಾರೆ. ಎರಡೂ ಮಕ್ಕಳ ಜತೆ ತಾವಿರುವ ಫೋಟೋವನ್ನು ಹಾಕಿ, ಗರ್ಭದಲ್ಲಿರುವ ಮಗುವಿಗೆ, ದೊಡ್ಡ ಮಗು ಮುತ್ತಿಡುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದನ್ನೂ ಓದಿ : ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ
ಹದಿಮೂರು ವರ್ಷಗಳ ಹಿಂದೆ ರಾಹುಲ್ ಮಹಾಜನ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಡಿಂಪಿ. 2010ರಲ್ಲಿ ಆದ ಮದುವೆ ಅನ್ಯೋನ್ಯತೆ ತುಂಬಾ ದಿನಗಳ ಕಾಲ ಉಳಿಲಿಲ್ಲ. ರಾಹುಲ್ ಜತೆ ವಿಚ್ಛೇದನ ಮಾಡಿಕೊಂಡು ರೋಹಿತ್ ಜೊತೆ 2015ರಲ್ಲಿ ಡಿಂಪಿ ಮದುವೆಯಾದರು. ಮೊದಲು ಹೆಣ್ಣು ಮಗುವಿನ ತಾಯಿಯಾದರೆ, ನಂತರ ಈ ದಂಪತಿಗೆ ಗಂಡು ಮಗುವಾಯಿತು. ಮೂರನೇ ಮಗು ಈ ಕುಟುಂಬಕ್ಕೆ ಆಗಮಿಸುತ್ತಿದೆ. ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್
ಈ ಸಂದರ್ಭದಲ್ಲಿ ಅವರು ಸುದೀರ್ಘವಾಗಿ ಪತ್ರವೊಂದನ್ನೂ ಬರೆದು ಹಾಕಿದ್ದಾರೆ. ಈ ಮಕ್ಕಳು ನನ್ನ ಬಾಳಿಗೆ ದೇವರಂತೆ ಬಂದಿವೆ. ಕಷ್ಟ, ಸುಖ, ಅಳುವು, ನಗುವು ಎಲ್ಲವೂ ಒಂದು ರೀತಿಯಲ್ಲಿ ದೈವತ್ವದಂತೆ ಕಾಣುತ್ತಿವೆ. ಮಕ್ಕಳೊಂದಿಗೆ ಖುಷಿಯಾಗಿದ್ದೇನೆ. ಜನರು ಏನೇ ಅಂದರೂ, ಅದಕ್ಕೆ ತಲೆ ಕೆಡಿಸಿಕೊಳ್ಳದೇ ಮಕ್ಕಳೊಂದಿಗೆ ಚೆನ್ನಾಗಿ ಇದ್ದೇನೆ. ಮಕ್ಕಳೇ ನನಗೆ ಎಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.