ನಟಿ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಲಯಾಳಂ ಸ್ಟಾರ್ ನಟ ದಿಲೀಪ್ ಪ್ರಕರಣದ ತೀರ್ಪು ಇಂದು ಮಧ್ಯಾಹ್ನ 1.45ಕ್ಕೆ ಪ್ರಕಟವಾಗಲಿದೆ. ನಟಿ ಮೇಲಿನ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ದಿಲೀಪ್ ವಿರುದ್ಧ ಕೊಲೆ ಸಂಚು ಆರೋಪ ಹೊರಿಸಿದ್ದರು. ಇವತ್ತು ಈ ಪ್ರಕರಣದ ತೀರ್ಪು ಹೊರಡಿಸಲಿದೆ ಕೇರಳ ಹೈಕೋರ್ಟ್. ಇದನ್ನೂ ಓದಿ : ವಿಜಯ್ ದುನಿಯಾದಲ್ಲಿ ‘ಭೀಮ’ ಎಂಟ್ರಿ : ನಟಿ ಮಾಲಾಶ್ರೀ ಬಳಿ ಇತ್ತು ಭೀಮ ಟೈಟಲ್
ಕೇರಳ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಿಯಾದ್ ರೆಹಮಾನ್ ಇಂದು ತೀರ್ಪು ಪ್ರಕಟಿಸಲಿದ್ದು, ಕೇರಳ ಚಿತ್ರೋದ್ಯಮ ತೀರ್ಪಿಗಾಗಿ ಎದುರು ನೋಡುತ್ತಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪುನ್ನು ಕೂಡ ಕೇರಳ ಹೈಕೋರ್ಟ್ ಪ್ರಕಟಿಸಿತ್ತು. ಎರಡು ವಾರಗಳ ವಿಸ್ತ್ರತ ವಿಚಾರಣೆಯ ನಂತರ ನ್ಯಾಯಮೂರ್ತಿ ಗೋಪಿನಾಥ್ ನೇತೃತ್ವದ ಪೀಠ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ಇದನ್ನೂ ಓದಿ : ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ
ಮೊನ್ನೆಯಷ್ಟೇ ಆ ನಟಿಯ ತಮಗಾದ ಅನ್ಯಾಯದ ಕುರಿತು ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಪ್ರಕರಣದ ಕುರಿತು ಎಳೆ ಎಳೆಯಾಗಿ ಘಟನೆಗಳನ್ನು ಬಿಚ್ಚಿಟ್ಟಿದ್ದರು. ಅಂದಿನ ಪರಿಸ್ಥಿತಿಯನ್ನೂ ವಿವರಿಸಿದ್ದರು. ಈಗ ಆ ಪ್ರಕರಣವೆಲ್ಲ ಏನಾಗಲಿವೆ ಎನ್ನುವ ಕುತೂಹಲ ಹೆಚ್ಚಿದೆ. ಇದನ್ನೂ ಓದಿ : ಮಗನೊಂದಿಗೆ ನಿಖಿಲ್ ಕುಮಾರ್ ಸ್ವಾಮಿ ಜಾಲಿ ಟ್ರೀಪ್
ನಟಿಗೆ ಆದ ದೌರ್ಜನ್ಯದ ಕುರಿತಾಗಿ ಕೇರಳ ಚಿತ್ರೋದ್ಯಮ ವಿಷಾದ ವ್ಯಕ್ತ ಪಡಿಸಿತ್ತು. ನಟಿಯ ಬೆನ್ನಿಗೆ ನಿಂತು ಧೈರ್ಯ ತುಂಬಿತ್ತು. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನೂ ನೀಡಲಾಗಿತ್ತು. ಇವೆಲ್ಲ ಕಾರಣದಿಂದಾಗಿ ದಿಲೀಪ್ ಮೇಲಿನ ಪ್ರಕರಣ ಮಹತ್ವ ಪಡೆದುಕೊಂಡಿದೆ.