ಶ್ರೀನಗರ: ಲೋಕಸಭಾ ಚುನಾವಣೆಗೂ (Loksabha Election) ಮುನ್ನ ವಿವಿಧ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಆರ್ಟಿಕಲ್ 370 ರದ್ದಾದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ ಅವರು 6,400 ಮೌಲ್ಯದ 53 ಯೋಜನೆಗಳಿಗೆ ಚಾಲನೆ ನೀಡಿದರು. ಬಕ್ಷಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರಿಗೆ ನೇಮಕಾತಿ ಪತ್ರ ವಿತರಿಸಿದರು.
Upon reaching Srinagar a short while ago, had the opportunity to see the majestic Shankaracharya Hill from a distance. pic.twitter.com/9kEdq5OgjX
— Narendra Modi (@narendramodi) March 7, 2024
Advertisement
ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ (Narendra Modi), ಶ್ರೀನಗರದ ಅದ್ಭುತ ಜನರಲ್ಲಿ ಒಬ್ಬರಾಗಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ, ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ. ಇಂದು ಸಮರ್ಪಿಸಲಾಗುತ್ತಿರುವ ಅಭಿವೃದ್ಧಿ ಯೋಜನೆಗಳು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಉತ್ತೇಜನ ನೀಡುತ್ತವೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರ ಆದ್ಯತೆ ಎಂದರು.
Advertisement
#WATCH | Srinagar, J&K: Prime Minister Narendra Modi says "In the future, the success story of Jammu and Kashmir will be the center of attraction for the world…Lotus are seen everywhere in the lakes here. The logo of the Jammu & Kashmir Cricket Association formed 50 years ago,… pic.twitter.com/NBZVTQb72E
— ANI (@ANI) March 7, 2024
Advertisement
ಜಮ್ಮು ಮತ್ತು ಕಾಶ್ಮೀರದ (Jammu & Kashmir) ಜನರು ಪ್ರಯೋಜನಗಳಿಂದ ವಂಚಿತರಾದ ಯುಗವೂ ಇತ್ತು. ದೇಶದ ಇತರ ಭಾಗಗಳಲ್ಲಿ ಜಾರಿಗೊಳಿಸಲಾದ ಕಾನೂನನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೊಳಿಸಲು ಸಾಧ್ಯವಾಗದ ಯುಗವಿತ್ತು. ದೇಶಾದ್ಯಂತ ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಿದಾಗ, ಜಮ್ಮು ಮತ್ತು ಕಾಶ್ಮೀರದ ನಮ್ಮ ಸಹೋದರ-ಸಹೋದರಿಯರು ವಂಚಿತರಾಗಿದ್ದರು. ಈಗ ನೋಡಿ ಸಮಯ ಹೇಗೆ ಬದಲಾಗಿದೆ. ಕಾಂಗ್ರೆಸ್ ಕೇವಲ ಜಮ್ಮು ಮತ್ತು ಕಾಶ್ಮೀರದ ಜನರನ್ನು ಮಾತ್ರವಲ್ಲದೆ ಇಡೀ ದೇಶವನ್ನು 370 ನೇ ವಿಧಿಯ ಬಗ್ಗೆ ತಪ್ಪುದಾರಿಗೆಳೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Advertisement
ಇಂದು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ನನಗೆ ಅವಕಾಶ ಸಿಕ್ಕಿದೆ. ಅಭಿವೃದ್ಧಿಯ ಶಕ್ತಿ, ಪ್ರವಾಸೋದ್ಯಮ ಸಾಧ್ಯತೆಗಳು, ರೈತರ ಸಬಲೀಕರಣ ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಕರ ನಾಯಕತ್ವ ಹೆಚ್ಚಿಸಲಿದೆ. ಜಮ್ಮು ಮತ್ತು ಕಾಶ್ಮೀರ ಕೇವಲ ಒಂದು ಪ್ರದೇಶವಲ್ಲ, ಅದು ಭಾರತದ ಹಣೆಬರಹ. ವಿಕ್ಷಿತ್ ಜಮ್ಮು ಮತ್ತು ಕಾಶ್ಮೀರವು ವಿಕ್ಷಿತ್ ಭಾರತ್‌ನ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
#WATCH | Srinagar, J&K: Prime Minister Narendra Modi says "This freedom from restrictions has come after the removal of Article 370. For decades, for political gains, Congress and its allies misled the people of Jammu and Kashmir in the name of 370 and misled the country. Did J&K… pic.twitter.com/SKMmjHxgvT
— ANI (@ANI) March 7, 2024
ಕಾರ್ಯಕ್ರಮದಲ್ಲಿ 285 ಬ್ಲಾಕ್‌ಗಳಿಂದ 1 ಲಕ್ಷ ಜನರು ವಾಸ್ತವಿಕವಾಗಿ ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ನಾನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಹೊಸ ಜಮ್ಮು ಮತ್ತು ಕಾಶ್ಮೀರಕ್ಕೆ ಉಜ್ವಲ ಭವಿಷ್ಯವಿದೆ ಮತ್ತು ಸವಾಲುಗಳನ್ನು ಜಯಿಸುವ ಧೈರ್ಯವಿದೆ. ನಿಮ್ಮ ಸಂತೋಷದ ಮುಖಗಳನ್ನು ನೋಡಿ, ದೇಶಾದ್ಯಂತ 140 ಕೋಟಿ ಜನರು ಸಂತೃಪ್ತಿ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು
ಇದಕ್ಕೂ ಮುನ್ನ ಪ್ರಧಾನಿಯವರು ಹೊಸದಾಗಿ ನೇಮಕಗೊಂಡ ಸುಮಾರು 1,000 ಸರ್ಕಾರಿ ನೌಕರರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು ಮತ್ತು ಮಹಿಳಾ ಸಾಧಕರು, ರೈತರು ಮತ್ತು ಉದ್ಯಮಿಗಳು ಸೇರಿದಂತೆ ವಿವಿಧ ಕೇಂದ್ರ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.