ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಇಂದೋರ್ ವಿಶೇಷ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನಂತರ ಜಾಮೀನನ್ನು ಸಹ ನೀಡಿದೆ.
Advertisement
ಹೌದು, 2011ರಲ್ಲಿ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಪ್ರತಿಭಟನಾ ನಿರತ ಕಾರ್ಯಕರ್ತರೊಂದಿಗೆ ನಡೆದ ಸಂಘರ್ಷಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಗ್ವಿಜಯ್ ಸಿಂಗ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ ನ್ಯಾಯಾಲಯವು ಉಜ್ಜಯಿನಿ ಸಂಸದ ಪ್ರೇಮಚಂದ್ ಗುಡ್ಡು ಸೇರಿದಂತೆ ಎಲ್ಲಾ ಅಪರಾಧಿಗಳಿಗೆ ತಲಾ 25,000 ರೂ.ಗಳ ಶ್ಯೂರಿಟಿ ಮೇಲೆ ಜಾಮೀನು ನೀಡಿದೆ. ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ
Advertisement
ಈ ಕುರಿತಂತೆ ಮಾತನಾಡಿದ ಸರ್ಕಾರಿ ವಕೀಲ ವಿಮಲ್ ಕುಮಾರ್ ಮಿಶ್ರಾ, ಎಲ್ಲಾ ಆರೋಪಿಗಳಿಗೂ ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಲಾಗಿರುವುದರಿಂದ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.
Advertisement
Madhya Pradesh | Former CM Digvijay Singh sentenced to one year by Indore District Court in Ujjain assault case
“This is a 10-year-old case in which my name was not even in the FIR, but was added later under political pressure. I will appeal in the High Court” he said pic.twitter.com/Klaru6lCB8
— ANI MP/CG/Rajasthan (@ANI_MP_CG_RJ) March 26, 2022
Advertisement
ಮತ್ತೊಂದೆಡೆ ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಸಂಸದ ಪ್ರೇಮಚಂದ್ ಗುಡ್ಡು ಅವರು ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ಆದರೆ ಹೈಕೋರ್ಟ್‍ನಲ್ಲಿ ವಿಧಿಸಿರುವ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿದರು. ಇದನ್ನೂ ಓದಿ: ಬೆಂಗಳೂರು ರಸ್ತೆಗೆ ಹೆವಿ ವೆಹಿಕಲ್‍ಗಳೇ ಕಂಟಕ- ಭಾರೀ ಗಾತ್ರದ ವಾಹನಗಳಿಂದ ರೂಲ್ಸ್ ಬ್ರೇಕ್
ಇದು 10 ವರ್ಷಗಳ ಹಳೆಯ ಪ್ರಕರಣವಾಗಿದ್ದು, ಎಫ್‍ಐಆರ್‌ನಲ್ಲಿ ನನ್ನ ಹೆಸರಿಲ್ಲ. ಆದರೆ ರಾಜಕೀಯ ಒತ್ತಡದಿಂದ ನಂತರದಲ್ಲಿ ಹೆಸರನ್ನು ಸೇರಿಸಲಾಗಿದೆ. ನಾನು ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ದಿಗ್ವಿಜಯ್ ಸಿಂಗ್ ಅವರು ಕಿಡಿಕಾರಿದ್ದಾರೆ.
ಪೊಲೀಸರ ಪ್ರಕಾರ, 2011ರ ಜುಲೈ 17ರಂದು ಸಿಂಗ್ ಅವರ ಬೆಂಗಾವಲು ಪಡೆ ಉಜ್ಜಯಿನಿಯ ಜಿವಾಜಿಗಂಜ್ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಬಿಜೆವೈಎಂ ಕಾರ್ಯಕರ್ತರು ಕಪ್ಪು ಬಾವುಟವನ್ನು ತೋರಿಸಲು ಪ್ರಯತ್ನಿಸಿದರು. ಇದು ಘರ್ಷಣೆಗೆ ಕಾರಣವಾಯಿತು.