-ಬೆಂಗಳೂರಿನಲ್ಲಿ ರಾಜಕೀಯ ಹೈಡ್ರಾಮಾ
-ಪ್ರತಿಭಟನೆಗೆ ಡಿಕೆಶಿ ಸಾಥ್
ಬೆಂಗಳೂರು: ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾ ಕರ್ನಾಟಕದಲ್ಲಿ ಮುಂದುವರಿದಿದೆ. ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶದ ಶಾಸಕರು ತಂಗಿರುವ ರೆಸಾರ್ಟ್ ಮುಂದೆ ಧರಣಿಗೆ ಕುಳಿತಿದ್ದಾರೆ. ದಿಗ್ವಿಜಯ್ ಸಿಂಗ್ ನಡೆಸುತ್ತಿರುವ ಧರಣಿಗೆ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಥ್ ನೀಡಿದ್ದಾರೆ.
ಬಿಜೆಪಿ ಸುಪರ್ಧಿಯಲ್ಲಿ @INCMP ಶಾಸಕರು ಉಳಿದುಕೊಂಡಿರುವ ಯಲಹಂಕದ ರಮಡ ಹೋಟೆಲ್ ಗೆ ಕೆಪಿಸಿಸಿ ಅಧ್ಯಕ್ಷ @DKShivakumar, ಮಧ್ಯ ಪ್ರದೇಶ ಮಾಜಿ ಸಿಎಂ @digvijaya_28, ಮಾಜಿ ಸಚಿವ @krishnabgowda, @mlanaharis, @ArshadRizwan ಮತ್ತಿತರರು ಭೇಟಿ ನೀಡಿದ್ದಾರೆ. pic.twitter.com/u8xY54KTx4
— Karnataka Congress (@INCKarnataka) March 18, 2020
Advertisement
ಬೆಂಗಳೂರು ಹೊರವಲಯದಲ್ಲಿರುವ ರಮಾಡ ರೆಸಾರ್ಟ್ ಮುಂದೆ ಹೈ ಡ್ರಾಮಾ ನಡೆಯುತ್ತಿದೆ. ನಮ್ಮ ಶಾಸಕರನ್ನು ಬಲವಂತವಾಗಿ ಇರಿಸಲಾಗಿದೆ. ಅವರ ಭೇಟಿಗೆ ಅವಕಾಶ ಕಲ್ಪಿಸಬೇಕೆಂದು ದಿಗ್ವಿಜಯ್ ಸಿಂಗ್ ಪಟ್ಟು ಹಿಡಿದು ರೆಸಾರ್ಟ್ ಮುಂದಿನ ರಸ್ತೆಯಲ್ಲಿ ಕುಳಿತು ಧರಣಿಗೆ ಮುಂದಾಗಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಮನವಿಯಂತೆ ರಾಜ್ಯ ಸರ್ಕಾರ ಅವರಿಗೆ ಪೊಲೀಸ್ ಭದ್ರತೆಯನ್ನು ನೀಡಿದೆ.
Advertisement
.@INCMP ಶಾಸಕರನ್ನು ಭೇಟಿ ಮಾಡಲು ಬಂದಿರುವ ಮಾನ್ಯ @digvijaya_28 ಅವರನ್ನು ನಿಯೋಜಿತ ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಮಾಜಿ ಮಂತ್ರಿ @krishnabgowda ಶಾಸಕರುಗಳಾದ @mlanaharis@ArshadRizwan #ByrathiSuresh
ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು pic.twitter.com/gix7qan2Vn
— Karnataka Congress (@INCKarnataka) March 18, 2020
Advertisement
ಆರಂಭದಲ್ಲಿ ಪೊಲೀಸರು ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಧರಣಿ ಕೈ ಬಿಡುವಂತೆ ಮನವಿ ಮಾಡಿಕೊಂಡರು. ಪ್ರತಿಭಟನೆಯಿಂದ ಹಿಂದೆ ಸರಿಯಲು ಒಪ್ಪದಿದ್ದಾಗ ಪೊಲೀಸರು ದಿಗ್ವಿಜಯ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಸುಮಾರು 21 ಶಾಸಕರು ರೆಸಾರ್ಟ್ ನಲ್ಲಿದ್ದಾರೆ.