ನಟ ವಿಜಯ ರಾಘವೇಂದ್ರ (Vijaya Raghavendra) ಪತ್ನಿ ಸ್ಪಂದನಾ (Spandana) ನಿಧನಕ್ಕೆ ಅನೇಕ ಗಣ್ಯರು ಸಂತಾಪ (Condolence) ವ್ಯಕ್ತ ಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡ್ಯೂರಪ್ಪ, ಬಸವರಾಜ ಬೊಮ್ಮಾಯಿ, ನಟಿ-ಸಂಸದೆ ಸುಮಲತಾ ಅಂಬರೀಶ್, ನಟಿ ರಾಗಿಣಿ, ನಿರ್ದೇಶಕ ನಾಗಭರಣ್, ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.
Advertisement
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ‘ಕನ್ನಡದ ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ವಿಜಯ ರಾಘವೇಂದ್ರ ಮತ್ತು ಬಿ.ಕೆ. ಶಿವರಾಮ್ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ’ ಎಂದಿದ್ದಾರೆ. ಇದನ್ನೂ ಓದಿ:ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ
Advertisement
Advertisement
ವಿಜಯ ರಾಘವೇಂದ್ರ ಚಿತ್ರಗಳ ನಿರ್ದೇಶಕ ಹಾಗೂ ಅವರ ಪುತ್ರನಿಗೆ ನೃತ್ಯ ಹೇಳಿಕೊಡುತ್ತಿರುವ ಹಿರಿಯ ನಿರ್ದೇಶಕ ನಾಗಭರಣ ಮಾಧ್ಯಮಗಳ ಜೊತೆ ಮಾತನಾಡಿ, ‘ನೀವು ಆ ಸುದ್ದಿ ಹೇಳಿದ ತಕ್ಷಣ ನಾನು ಗೌರವ ಡಾಕ್ಟರೇಟ್ ಪಡೆದ ಸಂತೋಷ 100 ಪಟ್ಟು ಕುಸಿಯಿತು. ವಿಜಯರಾಘವೇಂದ್ರ ಕುಟುಂಬದ ಜೊತೆ ಬಹಳ ದೊಡ್ಡ ಒಡನಾಟ ಇತ್ತು. ಚಿನ್ನಾರಿ ಮುತ್ತ ಸಿನೆಮಾದಿಂದ ವಿಜಯ ರಾಘವೇಂದ್ರ ಬೆಳವಣಿಗೆ ಕಂಡವನು. ನನ್ನ ಚಿನ್ನಾರಿಮುತ್ತವನ್ನು ಅವನಲ್ಲಿ ಕಂಡಿದ್ದೆ. ಆ ಸುದ್ದಿ ಕೇಳಿ ನನಗೆ ನಿಜವಾಗಿಯೂ ಶಾಕ್ ಆಗಿದೆ’ ಎಂದು ತಮಕೂರಿನಿಂದ ಮಾತನಾಡಿದ್ದಾರೆ.
Advertisement
ಮುಂದುವರೆದು ಮಾತನಾಡಿದ ನಾಗಭರಣ, ‘ನಿನ್ನೆ ಅವರ ಮಗು ಶೌರ್ಯನಿಗೆ ನಾನು ಪಾಠ ಹೇಳುತ್ತಿದ್ದೆ. ಅದನ್ನು ಮುಗಿಸಿಕೊಂಡು ಸಂಜೆ 5.30ಕ್ಕೆ ವಿಜಯರಾಘವೇಂದ್ರ ಮಗುವನ್ನು ಪಿಕ್ ಮಾಡಿದ್ದ. ನಿಜವಾಗಿಯೂ ಪರಿತಾಪ ಪಡುವ ವಿಚಾರ ಇದು. ನನಗೆ ರಿಯಾಕ್ಟ್ ಮಾಡೋಕೆ ಆಗ್ತಿಲ್ಲ. ಬಹಳ ಬಹಳ ದುಃಖದ ಸಂಗತಿ. ಯಾಕೋ ಆ ಕುಟುಂಬದ ಸುತ್ತ ಛಾಯೆಗಳು ನಿರಂತರವಾಗಿ ಎರಗ್ತಿದಿಯಲ್ಲ ಅನ್ನೋದೆ ಬಹಳ ದುಃಖದ ವಿಷಯ. ಯಾರನ್ನು ಕಳೆದುಕೊಳ್ಳಬಾರದು ಅಂತ ಇಷ್ಟಪಡ್ತಿವೋ ಅವರನ್ನ ಕಳೆದುಕೊಳ್ತಿದ್ದೇವೆ. ಒಂದೇ ಕುಟುಂಬದಲ್ಲಿ ಈ ರೀತಿಯಾಗಿ ಆಗ್ತಿದಿಯಲ್ಲಾ ಅನ್ನೋದೆ ದುಃಖದ ಸಂಗತಿ ಎಂದಿದ್ದಾರೆ.
Web Stories