ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ

Public TV
2 Min Read
Digital Rupee

ನವದೆಹಲಿ: ಡಿಜಿಟಲ್ ರೂಪಾಯಿ (Digital Rupee) ಕಡೆಗೆ ದೇಶ ತರಾತುರಿಯಲ್ಲಿ ಹೆಜ್ಜೆ ಹಾಕುತ್ತಿದೆ. ಇದರ ಭಾಗವಾಗಿ ಡಿಸೆಂಬರ್ 1 ರಿಂದ ರಿಟೈಲ್ ಡಿಜಿಟಲ್ ರೂಪಾಯಿಯನ್ನು ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಆರ್‌ಬಿಐ (RBI) ಚಲಾವಣೆಗೆ ತರುತ್ತಿದೆ.

Digital rupee CBDC RBI India

ಮೊದಲಿಗೆ ಬೆಂಗಳೂರು (Bengaluru), ಮುಂಬೈ (Mumbai), ದೆಹಲಿ (NewDelhi), ಭುವನೇಶ್ವರದಲ್ಲಿ ಈ ಪ್ರಯೋಗ ನಡೆಯಲಿದೆ. ಪ್ರಯೋಗದ ಭಾಗವಾಗಿ ಆಯ್ದ ಪ್ರಾಂತ್ಯಗಳಲ್ಲಿ ಬಳಕೆದಾರರು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ರೂಪಾಯಿ (Digital Rupee) ಮೂಲಕ ವ್ಯವಹಾರ ನಡೆಯಲಿದೆ. ಸದ್ಯ ನೋಟು ಮತ್ತು ನಾಣ್ಯಗಳ ಮೌಲ್ಯದಲ್ಲೇ ಡಿಜಿಟಲ್ ರೂಪಾಯಿಯ ವ್ಯವಹಾರಗಳು ನಡೆಯಲಿವೆ. ಇದನ್ನೂ ಓದಿ: ಭಾರತದಲ್ಲಿ ಡಿಜಿಟಲ್‌ ರುಪಿ ಬಿಡುಗಡೆ – ಲಾಭ ಏನು? ಕ್ರಿಪ್ಟೋ ಕರೆನ್ಸಿಗಿಂತ ಭಿನ್ನ ಹೇಗೆ?

crypto currencies bitcoin

ಎಸ್‌ಬಿಐ, ಐಸಿಐಸಿಐ ಸೇರಿ ನಾಲ್ಕು ಬ್ಯಾಂಕ್‌ಗಳು ಡಿಜಿಟಲ್ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದು, ಈ ಬ್ಯಾಂಕ್‌ಗಳು ಒದಗಿಸುವ ಡಿಜಿಟಲ್ ವ್ಯಾಲೆಟ್ ಸಹಾಯದೊಂದಿಗೆ ವ್ಯವಹಾರ ನಡೆಸಬಹುದು. ಈಗ ನಗದು ಮೇಲಿರುವ ನಂಬಿಕೆ, ಭದ್ರತೆ, ವಿಶ್ವಾಸಗಳನ್ನು ಡಿಜಿಟಲ್ ರೂಪಾಯಿಗೂ ತರಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

RBI

ಡಿಜಿಟಲ್ ರೂಪಾಯಿ ಹೇಗೆ ಕೆಲಸ ಮಾಡುತ್ತದೆ?
ಆರ್‌ಬಿಐ ಬ್ಯಾಂಕುಗಳ ಮೂಲಕ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ವಿತರಣೆ ಮಾಡುತ್ತದೆ. ನಂತರ ಅರ್ಹ ಬ್ಯಾಂಕುಗಳು ನೀಡುವ ಮೊಬೈಲ್ ಫೋನ್ ಸಾಧನಗಳಲ್ಲಿ ಸಂಗ್ರಹಿಸಲಾದ ಡಿಜಿಟಲ್ ವ್ಯಾಲೆಟ್ ಮೂಲಕ ಬಳಕೆದಾರರು ಇ-ರೂಪಾಯಿಯನ್ನು ಬಳಸಲು ಸಾಧ್ಯವಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಯ ನಡುವೆಯೂ ವಹಿವಾಟು ನಡೆಸಬಹುದು. ಆನ್‌ಲೈನ್ ವಹಿವಾಟಿನಂತೆ ವ್ಯಾಪಾರದ ಸ್ಥಳಗಳಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಬಳಸಿ ರೂಪಾಯಿಗಳನ್ನು ಬಳಸಬಹುದಾಗಿದೆ ಎಂದು ಆರ್‌ಬಿಐ ಅಧಿಕೃತ ಪ್ರಕಟಣೆ ತಿಳಿಸಿದೆ.

nirmala sitharaman budget

ಎಲ್ಲಿ ಲಭ್ಯ?
ಮೊದಲ ಹಂತದಲ್ಲಿ ಎಸ್‌ಬಿಐ (SBI), ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ (HDFC), ಐಸಿಐಸಿಐ (ICICI), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಯಸ್ ಬ್ಯಾಂಕ್ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಸೇರಿದಂತೆ 9 ಬ್ಯಾಂಕ್‌ಗಳಿಗೆ ಡಿಜಿಟಲ್ ರುಪಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಬಾಂಡ್‌ಗಳ ಖರೀದಿ ಮತ್ತು ಮಾರಾಟ ಮಾಡಲು ಇದನ್ನು ಬಳಸಲಾಗುತ್ತದೆ. ಸದ್ಯಕ್ಕೆ ಸರ್ಕಾರಿ ಸೆಕ್ಯುರಿಟಿಗಳ ವಹಿವಾಟಿಗೆ ಮಾತ್ರ ಡಿಜಿಟಲ್ ಕರೆನ್ಸಿ ಬಳಕೆಗೆ ಅನುಮತಿ ನೀಡಲಾಗಿದೆ.

Digital Rupee 2

ಲಾಭ ಏನು?
ಬಹಳ ಮುಖ್ಯವಾಗಿ ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣ ಯಾರ ಬಳಿಯು ಇರುವುದಿಲ್ಲ. ಆಗಾಗ ಏರಿಳಿತ ಸಂಭವಿಸುತ್ತಿರುತ್ತದೆ. ಆದರೆ ಡಿಜಿಟಲ್ ರುಪಿ ವ್ಯವಸ್ಥೆಯ ಮೇಲೆ ಆರ್‌ಬಿಐ (RBI) ಸಂಪೂರ್ಣ ನಿಯಂತ್ರಣ ಹೊಂದಿರುತ್ತದೆ. ವಹಿವಾಟು ಶುಲ್ಕ ಇಳಿಕೆಯಾಗುವುದರಿಂದ ಎರಡು ಬ್ಯಾಂಕುಗಳ ನಡುವಿನ ವ್ಯವಹಾರ ಮತ್ತಷ್ಟು ಸರಳವಾಗಲಿದೆ. ಮುದ್ರಣ ವೆಚ್ಚ ಇರುವುದಿಲ್ಲ ಮತ್ತು ಹಾಳಾಗುವುದಿಲ್ಲ. ಅಷ್ಟೇ ಅಲ್ಲದೇ ಸಾಗಾಟ ಮಾಡುವ ಅವಶ್ಯಕತೆ ಇಲ್ಲ. ಇವುಗಳನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ನಕಲಿ ನೋಟುಗಳ ಹಾವಳಿ ಕಡಿಮೆಯಾಗಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *