ಮೈಸೂರು: ದೇಶದ ಎಲ್ಲೆಡೆ ಡಿಜಿಟಲ್ ಪೇಮೆಂಟ್‍ನದ್ದೇ ಸದ್ದು. ಅದರಲ್ಲೂ ನೋಟ್ ಬ್ಯಾನ್ ಆದ ಮೇಲಂತೂ ಡಿಜಿಟಲ್ ಪೇಮೆಂಟ್ ದೊಡ್ಡ ಕ್ರಾಂತಿಯ ರೀತಿ ಮಾರ್ಪಟಿದ್ದೆ. ಮೈಸೂರಿನ ಶೌಚಾಲಯದಲ್ಲೂ ಇದೀಗ ಡಿಜಿಟಲ್ ಪೇಮೆಂಟ್ ಶುರುವಾಗಿದೆ.
Advertisement
ನೋಟ್ ಬ್ಯಾನ್ ಬಳಿಕವಂತೂ ಬೀದಿ ವ್ಯಾಪಾರಿಗಳಿಂದ ಹಿಡಿದು ಚಿಕ್ಕ ಚಿಕ್ಕ ಅಂಗಡಿ ಮಂದಿ ಡಿಜಿಟಲ್ ಪೇಮೆಂಟ್‍ಗೆ ಜೈ ಅಂದಿದ್ರು. ಆದ್ರೆ ಸಾರ್ವಜನಿಕ ಶೌಚಾಲಯಗಳಲ್ಲಿ ಮಾತ್ರ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಪರದಾಡಿದ್ದಂತೂ ಸತ್ಯ. ಇದರ ಮಧ್ಯೆ ಸ್ವಚ್ಛನಗರಿ ಮೈಸೂರಿನಲ್ಲಿ ಅಪರೂಪದ ಶೌಚಾಲಯವಿದೆ. ಇಲ್ಲಿ ನಿಮಗೆ ಚಿಲ್ಲರೆ ಸಮಸ್ಯೆ ಎದುರಾಗಲ್ಲ. ಕಾರಣ ಈ ಶೌಚಾಲಯ ನಡೆಸುವವರು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಮೊರೆಹೋಗಿದ್ದಾರೆ. ಶೌಚಾಲಯ ಬಳಸುವವರಿಗಾಗಿ ಪೇಟಿಎಂ ಅಳವಡಿಸಿದ್ದಾರೆ.
Advertisement
Advertisement
ಮೈಸೂರಿನ ಮಹಾನಗರ ಪಾಲಿಕೆ ಹಿಂಭಾಗದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ನಿತ್ಯ ಬರುವ ನೂರಾರು ಜನರಲ್ಲಿ ಶೇ. 20ರಷ್ಟು ಮಂದಿ ಪೇಟಿಎಂ ಮೂಲಕವೇ ಹಣ ಪಾವತಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಒಟ್ಟಿನಲ್ಲಿ ಸಾರ್ವಜನಿಕ ಶೌಚಾಲಯಗಳಲ್ಲಿಯೇ ಮೈಸೂರಿನ ಈ ಶೌಚಾಲಯ ಮಾದರಿಯಾಗಿದ್ದು. ಇದನ್ನು ನೋಡಿದ ಇನ್ನಷ್ಟು ಮಂದಿ ಡಿಜಿಟಲ್ ಪೇಮೆಂಟ್‍ನತ್ತ ಒಲವು ತೋರಿದ್ದಾರೆ.