ಬೆಂಗಳೂರು: ಜನರಿಗೆ ವಿಸಿಟಿಂಗ್ ಕಾರ್ಡ್ (Visiting Card) ನೀಡಿ ಡಿಜಿಟಲ್ ಮತಾಂತರಕ್ಕೆ (Conversion) ಯತ್ನಿಸಿರುವ ಘಟನೆ ನಗರದ ಬೇಗೂರು ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ.
ರಸ್ತೆಯಲ್ಲಿ ಸಾಗುವ ಜನರಿಗೆ ಅಪರಿಚಿತ ಮಹಿಳೆಯರು ವಿಸಿಟಿಂಗ್ ಕಾರ್ಡ್ ನೀಡಿದ್ದಾರೆ. ನಿಮಗೆ ಕಷ್ಟ ಇದ್ದಲ್ಲಿ, ಮದುವೆ ಆಗದಿದ್ದರೆ, ಜೀವನದಲ್ಲಿ ಸಮಸ್ಯೆಗಳಿದ್ದರೆ, ಕೆಲಸ ಸಿಕ್ಕಿಲ್ಲ ಅಂದರೆ ಈ ಕಾರ್ಡ್ ಸ್ಕ್ಯಾನ್ ಮಾಡಿ ನೋಡಿ ಪರಿಹಾರ ಸಿಗುತ್ತದೆ ಎಂದು ಕ್ಯೂಆರ್ ಕೋಡ್ ಇರುವ ವಿಸಿಟಿಂಗ್ ಕಾರ್ಡ್ ನೀಡಿದ್ದಾರೆ. ಇದನ್ನೂ ಓದಿ: ಕುಂಭ ಮೇಳ ಕಾಲ್ತುಳಿತದ ಹಿಂದೆ ಇದ್ಯಾ ಪಿತೂರಿ? – ಸಕ್ರಿಯವಾಗಿದ್ದ 16 ಸಾವಿರ ಮೊಬೈಲ್‌ಗಳ ಪೈಕಿ ಬಹುತೇಕ ಸ್ವಿಚ್ ಆಫ್!
Advertisement
ಇದೇ ವೇಳೆ ರಸ್ತೆಯಲ್ಲಿ ಬರುವ ಮಹಿಳೆಯೊಬ್ಬರಿಗೆ ವಿಸಿಟಿಂಗ್ ಕಾರ್ಡ್ ನೀಡಿದಾಗ ಅವರು ಪ್ರಶ್ನೆ ಮಾಡಿದ್ದಾರೆ. ಸ್ಥಳದಲ್ಲೇ ಆ ವಿಸಿಟಿಂಗ್ ಕಾರ್ಡ್‌ನಲ್ಲಿದ್ದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಈ ವೇಳೆ ಬೈಬಲ್ ಬಗ್ಗೆ ಮಾಹಿತಿ ಮತ್ತು ಇದರ ಉಪಯೋಗದ ಮಾಹಿತಿ ಬಂದಿದೆ. ಈ ಬಗ್ಗೆ ಕಾರ್ಡ್ ಹಂಚುತ್ತಿದ್ದ ಮಹಿಳೆಯರನ್ನು ಪ್ರಶ್ನಿಸಿದಾಗ ಉತ್ತರ ನೀಡದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
Advertisement
ಈ ರೀತಿಯ ಘಟನೆಗಳು ಪದೇಪದೇ ನಗರದ ಹಲವು ಕಡೆ ಮರು ಕಳುಹಿಸುತ್ತಿರುವ ಕಾರಣ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರಿವೆ. ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.