ಕೃಷಿ ವಲಯವನ್ನು ರಕ್ಷಿಸಲು, ಬಲಪಡಿಸಲು ಡಿಜಿಟಲ್ ಕೃಷಿ, ಹವಾಮಾನ ಕ್ರಮ: ಮೋದಿ

Public TV
2 Min Read
MODI 3

ಹೈದರಾಬಾದ್: ಹವಾಮಾನ ಬದಲಾವಣೆಯ ಪರಿಣಾಮದಿಂದ ರೈತರನ್ನು ರಕ್ಷಿಸಲು ಸಾವಯವ ಕೃಷಿ ಮತ್ತು ಡಿಜಿಟಲ್ ಕೃಷಿಗೆ ಸರ್ಕಾರ ಒತ್ತು ನೀಡುತ್ತಿದೆ. ಇದಕ್ಕಾಗಿ ಈ ವರ್ಷದ ಕೇಂದ್ರ ಬಜೆಟ್‍ನಲ್ಲಿ ವಿಶೇಷ ನಿಬಂಧನೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಸಮತಾ ಪ್ರತಿಮೆಯನ್ನು ಅನಾವರಣಗೊಳಿಸಲು ಮತ್ತು ಕೃಷಿ ಸಂಶೋಧನಾ ಸಂಸ್ಥೆ ಇಕ್ರಿಸ್ಯಾಟ್‍ನ 50ನೇ ವಾರ್ಷಿಕೋತ್ಸವದ ಆಚರಣೆಯನ್ನು ಕಿಕ್‍ಸ್ಟಾರ್ಟ್ ಮಾಡಲು ಮೋದಿ ಇಂದು ಹೈದರಾಬಾದ್‍ನಲ್ಲಿದ್ದಾರೆ. ಈ ಹಿನ್ನೆಲೆ ಮೋದಿ ಅವರು ಇಂಟನ್ರ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಫಿಕ್ಸ್(ICRISAT)ನ ಹವಾಮಾನ ಬದಲಾವಣೆ ಸಂಶೋಧನಾ ಸೌಲಭ್ಯವನ್ನು ಸಸ್ಯ ಸಂರಕ್ಷಣೆ ಮತ್ತು ಕ್ಷಿಪ್ರ ಜನರೇಷನ್ ಅಡ್ವಾನ್ಸ್‍ಮೆಂಟ್ ಫೆಸಿಲಿಟಿಯನ್ನು ಉದ್ಘಾಟಿಸಿದರು. ಇದನ್ನೂ ಓದಿ: ಭಾರತಕ್ಕೆ ಇಂದು ಪ್ರಧಾನಿ ಇಲ್ಲ, ಏನೇ ಮಾಡಿದ್ರೂ ಜನ ಸುಮ್ಮನಿರಬೇಕೆನ್ನುವ ರಾಜನಿದ್ದಾನೆ: ರಾಗಾ

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಐದು ದಶಕಗಳಲ್ಲಿ, ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸಲು ICRISAT ಇತರ ರಾಷ್ಟ್ರಗಳಿಗೆ ಸಹಾಯ ಮಾಡಿದೆ. ಭಾರತದ ಕೃಷಿ ಕ್ಷೇತ್ರವನ್ನು ಬಲಪಡಿಸಲು ಈ ಸಂಸ್ಥೆಯು ಹೆಚ್ಚು ಉತ್ತೇಜನ ಕೊಡಲು ಮುಂದುವರಿಯುತ್ತೆ ಎಂದು ಭರವಸೆ ವ್ಯಕ್ತಪಡಿಸಿದರು.

WhatsApp Image 2022 02 05 at 4

ಹವಾಮಾನದ ಸವಾಲಿನಿಂದ ನಮ್ಮ ರೈತರನ್ನು ರಕ್ಷಿಸಲು ನಾವು ಯೋಜನೆಯನ್ನು ಮಾಡಿದ್ದೇವೆ. ಅದಕ್ಕೆ ನಮ್ಮ ಗಮನವು ಬೇಸಿಕ್ಸ್ ಗೆ ಬ್ಯಾಕ್ ಟು ಫ್ಯೂಚರ್ ಮತ್ತು ಮಾರ್ಚ್ ಟು ಫ್ಯೂಚರ್ ಎರಡರ ಸಮ್ಮೇಳವಾಗಿದೆ. ದೇಶದ ಶೇ.80ಕ್ಕಿಂತ ಹೆಚ್ಚು ಸಣ್ಣ ರೈತರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ. ಯೂನಿಯನ್ ಬಜೆಟ್ 2022-23 ಸಾವಯವ ಕೃಷಿ ಮತ್ತು ಡಿಜಿಟಲ್ ಕೃಷಿಯ ಮೇಲೆ ಕೇಂದ್ರೀಕೃತವಾಗಿದೆ ಎಂದು ಹೇಳಿದರು.

ಡಿಜಿಟಲ್ ಕೃಷಿಯು ನಮ್ಮ ಬಹುಪಾಲು ಕೃಷಿ ದೇಶದ ಭವಿಷ್ಯವಾಗಿದೆ. ರೈತರ ಸಬಲೀಕರಣಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಮ್ಮ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಇದಲ್ಲದೆ, ಸಂಪೂರ್ಣ ಕೃಷಿ ಮೌಲ್ಯ ಸರಪಳಿಯನ್ನು ಬಲಪಡಿಸಲು ರೈತ ಉತ್ಪಾದಕ ಸಂಸ್ಥೆಗಳನ್ನು(ಎಫ್‍ಪಿಒ) ನಿರ್ಮಿಸಲು ಕೇಂದ್ರವು ಹೆಚ್ಚು ಗಮನಹರಿಸಿದೆ ಎಂದು ವಿವರಿಸಿದರು.

ದೇಶದ ಸಣ್ಣ ರೈತರನ್ನು ಸಾವಿರಾರು ಎಫ್‍ಪಿಒಗಳಾಗಿ ಸಂಘಟಿಸುವ ಮೂಲಕ, ನಾವು ಅವರನ್ನು ಜಾಗೃತ ಮತ್ತು ದೊಡ್ಡ ಮಾರುಕಟ್ಟೆ ಶಕ್ತಿಯನ್ನಾಗಿ ಮಾಡಲು ಬಯಸುತ್ತೇವೆ ಎಂದು ತಿಳಿಸಿದರು.

farmer

ಈ ವರ್ಷದ ಕೇಂದ್ರ ಬಜೆಟ್‍ನಲ್ಲಿ ಹವಾಮಾನ ಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದು ‘ಹಸಿರು ಭವಿಷ್ಯದ’ ಕಡೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ವರ್ಷದ ಬಜೆಟ್‍ನಲ್ಲಿ ಹವಾಮಾನ ಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ವರ್ಷದ ಬಜೆಟ್ ಪ್ರತಿ ವಲಯದಲ್ಲಿ ಹಸಿರು ಭವಿಷ್ಯದತ್ತ ಭಾರತದ ಬದ್ಧತೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಬಿಡುಗಡೆ ಮಾಡಿದ ಸಿಎಂ

ಸರ್ಕಾರದ ಸುಸ್ಥಿರತೆಯ ಗುರಿಗಳನ್ನು ಪ್ರಸ್ತಾಪಿಸಿದ ಅವರು, ಭಾರತವು 2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಹೊಂದಿದೆ ಎಂದು ಭವಿಷ್ಯದ ಬಗ್ಗೆ ವಿವರಿಸಿದರು. ನಾವು ಪರಿಸರಕ್ಕಾಗಿ ಜೀವನಶೈಲಿಯ ಅಗತ್ಯವನ್ನು ಎತ್ತಿ ತೋರಿಸಿದ್ದೇವೆ. ಪ್ರೊ.ಪ್ಲಾನೆಟ್ ಪೀಪಲ್ ಚಳುವಳಿಗೆ ಕರೆ ನೀಡಿದ್ದೇವೆ ಎಂದು ಒತ್ತಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *