ಬೆಂಗಳೂರು: ನಟ ದೂದ್‍ಪೇಡ ದಿಗಂತ್ ‘ಕಥೆಯೊಂದು ಶುರುವಾಗಿದೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಒಂದೇ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದೆ.
ಕಥೆಯೊಂದು ಶುರುವಾಗಿ ಚಿತ್ರದಲ್ಲಿ ನಟ ದಿಗಂತ್ ಯುವ ರೆಸಾರ್ಟ್ ಮಾಲೀಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಿಂಗತ್ ತರುಣ್ ಆಗಿ ಕಾಣಿಸಿಕೊಂಡಿದ್ದು, ಜೀವನದಲ್ಲಿ ಸಾಕಷ್ಟು ಕಷ್ಟದ ಸಮಯಗಳನ್ನು ಎದುರಿಸುತ್ತಿರುತ್ತಾರೆ.
Advertisement
ಈ ಚಿತ್ರದಲ್ಲಿ ದಿಗಂತ್ ನಿರಾಸೆ, ಸೋಲು ಹಾಗೂ ಕಷ್ಟಗಳಿಂದ ಹತಾಶರಾಗಿರುತ್ತಾರೆ. ನಂತರ ರೆಸಾರ್ಟ್‍ಗೆ ಅತಿಥಿಯಾಗಿ ಬಂದ ನಟಿ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಅಲ್ಲಿಂದ ಚಿತ್ರದಲ್ಲಿ ಇಬ್ಬರ ಪ್ರೇಮಕಥೆ ಶುರುವಾಗುತ್ತದೆ.
Advertisement
Advertisement
ಈ ಚಿತ್ರದ ಚಿತ್ರೀಕರಣವನ್ನು ಕಾರವಾರ ಹಾಗೂ ಪಾಂಡಿಚೇರಿಯಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಕೇವಲ 7 ಪಾತ್ರಗಳು ಮಾತ್ರ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು 30 ದಿನಗಳಲ್ಲಿ ಚಿತ್ರಿಕರಿಸಲಾಗಿದೆ. ಜಾಹೀರಾತು ನಿರ್ದೇಶಕರಾಗಿದ್ದ ಸೀನಾ ಅವರು ಈ ಚಿತ್ರವನ್ನು 30 ದಿನದಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.
Advertisement
ಈ ಚಿತ್ರ ಫಸ್ಟ್ ಲುಕ್‍ನಿಂದಲೇ ಎಲ್ಲರ ಗಮನ ಸೆಳೆದಿದ್ದು, ನಟ ದಿಗಂತ್ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ಈ ಚಿತ್ರದಲ್ಲಿ ‘ಒಂದು ಮೊಟ್ಟೆಯ ಕಥೆ’ ಚಿತ್ರದ ಖ್ಯಾತ ನಟಿ ಶ್ರೇಯಾ ಅಂಚನ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಕಥೆಯೊಂದು ಶುರುವಾಗಿದೆ ಚಿತ್ರ ಲವ್‍ಸ್ಟೋರಿ ಚಿತ್ರವಾಗಿದ್ದು, ದಿಗಂತ್‍ಗೆ ನಾಯಕಿಯಾಗಿ ಖ್ಯಾತ ತಮಿಳು ನಟಿ ಪೂಜಾ ದೇವರೈಯಾ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಪುಶ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಜಾಹೀರಾತು ನಿರ್ದೇಶಕರಾದ ಸೀನಾ ಹೆಗಡೆ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿ ಸ್ಯಾಂಡಲ್‍ವುಡ್‍ನಲ್ಲಿ ಪರಿಚಯವಾಗುತ್ತಿದ್ದಾರೆ.