ನಂದಿ ಬೆಟ್ಟದ ತಪ್ಪಲಲ್ಲಿ ಇಂದು ಮನಸಾರೆ ಜೋಡಿ ಸರಳ ವಿವಾಹ

Public TV
1 Min Read
INDRITH DIGANTH 2 copy

ಚಿಕ್ಕಬಳ್ಳಾಪುರ/ಬೆಂಗಳೂರು: ಸ್ಯಾಂಡಲ್‍ವುಡ್‍ನ ಮತ್ತೊಂದು ತಾರಾ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿದೆ. ನಂದಿಬೆಟ್ಟದ ತಪ್ಪಲಿನಲ್ಲಿ ಸರಳವಾಗಿ ಮದುವೆ ಮಹೋತ್ಸವ ನಡೆಯಲಿದೆ.

ಸ್ಯಾಂಡಲ್‍ವುಡ್‍ನ ಹಾಟ್ ಪೇರ್ ಗಳ ಸಾಲಿನಲ್ಲಿ ಮೊದಲಿಗೆ ಕೇಳಿ ಬರುವ ಹೆಸರು ದೂದ್‍ಪೇಡಾ ನಟ ದಿಗಂತ್ ಹಾಗೂ ಬೆಂಗಾಲಿ ಚೆಲುವೆ ಐಂದ್ರಿತಾ ರೈ. `ಮನಸಾರೆ’ ಅವರು ಇಷ್ಟಪಟ್ಟು ಲವ್ ಮಾಡಲು ಬರೋಬ್ಬರಿ 8 ವರ್ಷವಾಗಿದೆ. ಐಂದ್ರಿತಾ-ದಿಗಂತ್ ನಡುವಿನ ಪ್ರೀತಿ-ಬೆಸುಗೆ ಪಾರಿಜಾತದ ಮೂಲಕ ಮತ್ತಷ್ಟು ಗಟ್ಟಿಯಾಗಿದೆ.

ಧೃವ ಎಂಗೇಜ್ ಆದ ಬೆನ್ನಲ್ಲೇ ಐಂದ್ರಿತಾ, ದಿಗಂತ್ ಜೋಡಿ ಸಪ್ತಪದಿ ತುಳಿಯೋಕೆ ಸಕಲ ಸಿದ್ಧತೆ ನಡೆದಿದೆ. ನಂದಿಬೆಟ್ಟದ ತಪ್ಪಲಲ್ಲಿರುವ ಡಿಸ್ಕವರಿ ವಿಲೇಜ್‍ನಲ್ಲಿ ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿದೆ. ಐಂದ್ರಿತಾ ಅವರ ಮನೆಯಂಗಳದಲ್ಲೇ ಬೆಳೆದಿರುವ ಅರಿಶಿನದಿಂದ ಮದ್ವೆ ಶಾಸ್ತ್ರ ಮಾಡಿಸಿಕೊಂಡು ಸಂಭ್ರಮಿಸಿದ್ದಾರೆ.

INDRITH DIGANTH 1 copy

ಎರಡೂ ಕುಟುಂಬಗಳ ಸದಸ್ಯರು ಮತ್ತು ಸ್ಟಾರ್ ಪೇರ್ ನ ಆಪ್ತರಷ್ಟೇ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿ ದಾಂಪತ್ಯ ಗೀತೆ ಹಾಡುವುದಕ್ಕೆ ರೆಡಿಯಾಗಿರುವ ದಿಗಂತ್ ಐಂದ್ರಿತಾಗೆ ಶುಭಹಾರೈಸಿದರು. ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಮಧುಮಗಳು ಐಂದ್ರಿತಾ ಮಿಂಚಿದರೆ, ನೀಲಿ ಶಾಲು, ಬಿಳಿಪಂಚೆಯಲ್ಲಿ ದಿಗಂತ್ ಕಂಗೊಳಿಸಿದರು.

ಇಂದು ಸಂಜೆ ನಂದಿಬೆಟ್ಟದ ತಪ್ಪಲಿನಲ್ಲಿ ಐಂದ್ರಿತಾ, ದಿಗಂತ್ ಜೋಡಿ ಸಪ್ತಪದಿ ತುಳಿಯಲಿದೆ. ಕುಟುಂಬದವರು ಮತ್ತು ಚಿತ್ರರಂಗದ ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ಕೊಟ್ಟಿದ್ದಾರೆ. ಶೇರ್‍ಚಾಟ್ ಸಂಸ್ಥೆ ಐಂದ್ರಿತಾ, ದಿಗಂತ್ ಜೋಡಿಯ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *