ಯಾದಗಿರಿ: ಅನ್ನಭಾಗ್ಯ ಯೋಜನೆಯಡಿ (AnnaBhagya Scheme) ಅಕ್ಕಿ ಪಡೆಯಲು ಪಡಿತರು ಪರದಾಡುವಂತಹ ಸ್ಥಿತಿ ಎದುರಾಗಿದ್ದು, ಸರ್ವರ್ ಸಮಸ್ಯೆಯಿಂದಾಗಿ ಕಳೆದ ಒಂದು ವಾರದಿಂದ ಪರದಾಡುತ್ತಿದ್ದಾರೆ.
ಯಾದಗಿರಿ (Yadagiri) ಜಿಲ್ಲೆಯ ಸ್ಟೇಷನ್ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಜನರು ಅಕ್ಕಿ ಪಡೆಯಲು ಪರದಾಡುತ್ತಿದ್ದು, ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರ ಬೆರಳಚ್ಚನ್ನು ವೆಬ್‌ಸೈಟ್ ಸ್ವೀಕರಿಸುತ್ತಿಲ್ಲ.ಇದನ್ನೂ ಓದಿ: ಡಿಕೆಶಿ ನೇತೃತ್ವದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೆ, ಮರಳಿ ಮನೆಗೆ ಬಂದಿದ್ದೇನೆ: ಸಿಪಿ ಯೋಗೇಶ್ವರ್
ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಿಗದ ಹಿನ್ನೆಲೆ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಜನರು ಆಗಮಿಸುತ್ತಿದ್ದಾರೆ. ಆದರೆ ಅಲ್ಲಿಯೂ ಜನರಿಗೆ ಅಕ್ಕಿ ಸಿಗುತ್ತಿಲ್ಲ. ಕೂಲಿ ಕೆಲಸ ಬಿಟ್ಟು ಪಡಿತರ ಧಾನ್ಯ ಪಡೆಯಲು ಗ್ರಾಹಕರು ಹರಸಾಹಸಪಡುತ್ತಿದ್ದಾರೆ. ಜೊತೆಗೆ ಜುಲೈ ತಿಂಗಳಿನಿAದ ಐದು ಕೆಜಿ ಅಕ್ಕಿಯ ಬದಲು ಹಣ ಪಡೆಯಬಹುದು ಎಂಬುವುದಕ್ಕೂ ಕತ್ತರಿ ಬಿದ್ದಿದೆ. ಒಂದು ಕಡೆ ಅಕ್ಕಿಯೂ ಇಲ್ಲ. ಇನ್ನೊಂಡು ಕಡೆ ಹಣವೂ ಇಲ್ಲ ಎನ್ನುವಂತಾಗಿದೆ. ಈ ಸಮಸ್ಯೆಯಿಂದಾಗಿ ಊಟಕ್ಕೆ ಅಕ್ಕಿ ಇಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ.
ಓರ್ವ ಗ್ರಾಹಕಿ ಮಾತನಾಡಿ, ಸರ್ಕಾರ ಅಕ್ಕಿಯ ಒಂದು ರೂಪಾಯಿ ಹಣವನ್ನು ಪಾವತಿ ಮಾಡಿಲ್ಲ. ಒಂದು ಕಡೆ ರೇಷನ್ ಹಣವೂ ಇಲ್ಲ ಮತ್ತೊಂದೆಡೆ ಊಟ ಮಾಡಲು ಮನೆಯಲ್ಲಿ ಅಕ್ಕಿಯೂ ಇಲ್ಲ, ನಾವು ಬಡವರು ಹೇಗೆ ಬದುಕಬೇಕು. ಸರ್ವರ್ ಇಲ್ಲವೆಂದು ಅಕ್ಕಿ ಕೊಡುತ್ತಿಲ್ಲ. ನಾವು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ತಪ್ಪು ಮಾಡಿದ್ದೇವೆ. ಸಿದ್ದರಾಮಯ್ಯರನ್ನು ನಂಬಿ ನಾವು ಅಧಿಕಾರಕ್ಕೆ ತಂದಿದ್ದೇವೆ. ಈಗ ಅಕ್ಕಿ ಇಲ್ಲದೇ ನಾವು ಹೇಗೆ ಊಟ ಮಾಡಬೇಕು. ಬೇರೆಯವರಿಂದ ಅಕ್ಕಿ ಸಾಲ ಪಡೆದು ಊಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಒಡಿಶಾ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ಮುಟ್ಟಿನ ರಜೆ ಘೋಷಣೆ