ಲಂಡನ್: 2 ವರ್ಷಗಳ ನಂತರ ಸೋಫಾದಲ್ಲಿ ಮಹಿಳೆ ಅಸ್ಥಿಪಂಜರ ಪತ್ತೆಯಾಗಿರುವ ವಿಲಕ್ಷಣ ಘಟನೆ ಯುಕೆಯಲ್ಲಿ ನಡೆದಿದೆ.
58 ವರ್ಷದ ಶೀಲಾ ಸೆಲಿಯೋನೆ ಅವರ ಅಸ್ಥಿಪಂಜರದ ಅವಶೇಷಗಳು ಪೆಕ್ಹ್ಯಾಮ್‍ನಲ್ಲಿರುವ ಫ್ಲಾಟ್‍ವೊಂದರಲ್ಲಿ ಪತ್ತೆಯಾಗಿದೆ. ಸೆಲಿಯೋನೆ ಅವರ ಫ್ಲಾಟ್‍ನ ಲಿವಿಂಗ್ ರೂಮ್‍ನಲ್ಲಿದ್ದ ಸೋಫಾದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಇದಕ್ಕೆ ಕಾರಣವೇನು? ಏನಾಯಿತು? ಎಂಬುದರ ಬಗ್ಗೆ ನಮಗೆ ಸರಿಯಾಗಿ ತಿಳಿದಿಲ್ಲ ಎಂದು ಹೌಸಿಂಗ್ ಸೊಸೈಟಿ ಕ್ಷಮೆಯಾಚಿಸಿದೆ. ಸೆಲಿಯೋನೆ ಸಾವಿನ ಪ್ರಕರಣ ಕುರಿತು ವಿಚಾರಣೆ ನಡೆಸಲಾಯಿತು.
Advertisement
Advertisement
ಮರಣೋತ್ತರ ವರದಿ ಪ್ರಕಾರ, ಸೆಲಿಯೋನೆ ಅವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರ ಸಾವಿನ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಲಂಡನ್‍ನ ಸೌತ್ ಕರೋನರ್ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಮಹಿಳೆಗೆ ಕ್ರೋನ್ಸ್ ಕಾಯಿಲೆ ಮತ್ತು ಕರುಳಿನ ಉರಿಯೂತದಿಂದ ಬಳಲುತ್ತಿದ್ದಳು ಎಂದು ಹೇಳಲಾಗಿದೆ. ಇದನ್ನೂ ಓದಿ: ಗುಪ್ತಗಾಮಿನಿಯಾಗಿ ಹರಡುತ್ತಿರುವ ಕೊರೊನಾ – ಐದು ದಿನದಲ್ಲಿ 25 ಜನರಿಗೆ ಸೋಂಕು
Advertisement
ಯಾವುದೇ ಸಾವು ದುಃಖಕರ. ಎರಡು ವರ್ಷಗಳಲ್ಲಿ ಮೃತ ಮಹಿಳೆ ಬಗ್ಗೆ ನಾವು ಹುಡುಕಾಟ ಮಾಡಿದ್ದೆವು. ಆದರೆ ಅವರ ದೇಹ ಆಕೆಯ ಫ್ಲಾಟ್‍ನಲ್ಲಿಯೇ ದೊರೆತಿದೆ. ಈ ಸಾವಿನ ಆಸಲಿ ಕಾರಣ ಹುಡುಕಲು ನಾವು ಹುಡುಕಾಟ ಮಾಡುತ್ತಿದ್ದೇವೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
Advertisement
ಈ ಪ್ರಕರಣವು ಯುಕೆಯಲ್ಲಿ ಎಲ್ಲರ ಗಮನ ಸೆಳೆಯಿತು. ಈಕೆ ಆಗಸ್ಟ್ 2019ರಲ್ಲಿ ವೈದ್ಯರನ್ನು ಭೇಟಿ ಮಾಡಿದಾಗ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂಬುದು ತಿಳಿದುಬಂದಿದೆ.