ನವದೆಹಲಿ: ದರೋಡೆ ನಡೆಸಿದ ಮೂವರು ವ್ಯಕ್ತಿಗಳಿಗೆ ಅಂಗವಿಕಲನೊಬ್ಬ ವಿರೋಧಿಸಿದ್ದು, ಸ್ಥಳದಲ್ಲೇ ದರೋಡೆಕೋರರು ಆತನಿಗೆ ಚೂರಿಯಿಂದ ಇರಿದ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.
ವಿಕಲಚೇತನ ವ್ಯಕ್ತಿ ಸಂಜಯ್ ಕುಮಾರ್(25) ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದ ಇಬ್ಬರು ಬಾಲಾರೋಪಿ ಯೊಂದಿಗೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಸಂಜಯ್ ಕುಮಾರ್ ತನ್ನ ಕೆಲಸದ ಸ್ಥಳದಿಂದ ಮನೆಗೆ ಹಿಂದಿರುಗುತ್ತಿದ್ದರು. ಈ ಹೊತ್ತಿನಲ್ಲಿ ದೇವಸ್ಥಾನವೊಂದರ ಬಳಿ ಮೂವರು 20,000ರೂ. ದೋಚಿದ್ದು, ಅದನ್ನು ಕುಮಾರ್ ತಡೆಯಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಓರ್ವನ ಕೊಲೆ – 18 ಮಂದಿ ಅರೆಸ್ಟ್!
ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ಕುಮಾರ್ ಅವರನ್ನು ಬೆನ್ನಟ್ಟಿ ಇಬ್ಬರನ್ನು ಹಿಡಿದಿದ್ದರು. ಆದರೆ ಆರೋಪಿಗಳು ಕುಮಾರ್‌ಗೆ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾರೆ. ನಂತರ ಕುಮಾರ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಾಭದ ಆಮಿಷವೊಡ್ಡಿ ಉದ್ಯಮಿಗೆ 32 ಲಕ್ಷ ರೂ. ಪಂಗನಾಮ!
ಕುಮಾರ್‌ನನ್ನು ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮೂವರು ಆರೋಪಿಗಳ ಮೇಲೆ ಕೇಸ್ ದಾಖಲಿಸಿ, ಇಬ್ಬರು ಬಾಲಾಪರಾಧಿ ಹಾಗೂ ಯೋಗೇಶ್(21)ನನ್ನು ಬಂಧಿಸಿದ್ದಾರೆ.