ನವದೆಹಲಿ: ವಿಕಲಚೇತನ ಝೊಮಾಟೊ ಡೆಲಿವರಿ ಮಾಡುವ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದ್ದ. ಮೂರು ಚಕ್ರದ ಸೈಕಲ್‍ನಲ್ಲಿ ಕುಳಿತು ಮನೆ ಮನೆಗೂ ಫುಡ್ ಡೆಲಿವರಿ ಮಾಡುವ ಈತನ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ವಿಡಿಯೋ ವೈರಲ್ ಆದ ಬಳಿಕ ಸಿಬ್ಬಂದಿ ಕೆಲಸಕ್ಕೆ ಮೆಚ್ಚಿದ ಝೊಮಾಟೊ ಕಂಪನಿ ಯುವಕನಿಗೆ ಎಲೆಕ್ಟ್ರಿಕ್ ವಾಹನ ನೀಡಿ ಪ್ರೋತ್ಸಾಹಿಸಿದೆ.
Advertisement
ಈ ಹಿಂದೆ ಝೊಮಾಟೊ ಡೆಲಿವರಿ ಬಾಯ್ ರಾಮು ಎಲ್ಲೆಡೆ ಫೇಮಸ್ ಆಗಿದ್ದ. ಮೂರು ಚಕ್ರದ ಸೈಕಲಿನಲ್ಲಿ ಕುಳಿತು ಮನೆ ಮನೆಗೂ ಫುಡ್ ಡೆಲಿವರಿ ಮಾಡುವ ಈತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾಯಕವೇ ಕೈಲಾಸ ಅಂದುಕೊಂಡು ದುಡಿಯುತ್ತಿದ್ದ ರಾಮು ಸ್ವಾಭಿಮಾನಕ್ಕೆ ಮೆಚ್ಚಿದ ಝೊಮಾಟೊ ಕಂಪನಿ ಈತನಿಗೆ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ನೀಡಿ ಪುರಸ್ಕರಿಸಿದೆ.
Advertisement
UPDATE: Our delivery partner Ramu Sahu has gracefully accepted the electric vehicle that we were keen on him having. ???? pic.twitter.com/LrJp86tZ8h
— Deepinder Goyal (@deepigoyal) May 28, 2019
Advertisement
ಈ ಬಗ್ಗೆ ಝೊಮಾಟೊ ಫುಡ್ ಡೆಲಿವರಿ ಕಂಪೆನಿಯ ಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯೆಲ್ ತಮ್ಮ ಟ್ವಿಟ್ಟರ್ ರಾಮುವಿನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ರಾಮು ಎಲೆಕ್ಟ್ರಿಕ್ ವಾಹನವನ್ನು ಚಲಾಯಿಸುವ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. `ನಮ್ಮ ಫುಡ್ ಡೆಲಿವರಿ ಪಾಟ್ರ್ನರ್ ರಾಮು ಸಾಹು ನಾವು ಕೊಟ್ಟ ಎಲೆಕ್ಟ್ರಿಕ್ ವಾಹನವನ್ನು ಸಹೃದಯದಿಂದ ಸ್ವೀಕರಿಸಿದ್ದಾರೆ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
Ramu getting a hang of his new ride. ???? pic.twitter.com/C7iaxWtDCf
— Deepinder Goyal (@deepigoyal) May 28, 2019
ರಾಮುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಶಂಸೆಯ ಮಹಾಪೂರ ಹರಿದು ಬಂದಿತ್ತು. ಅಲ್ಲದೇ ಚಿಕ್ಕ ಸಮಸ್ಯೆ ಎದುರಾದರೆ ಕೆಲಸ ಕೈಬಿಡುವ ಜನರಿಗೆ ಈ ಯುವಕನ ಛಲ, ಸ್ವಾಭಿಮಾನ ಮಾದರಿಯಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
https://twitter.com/tfortitto/status/1129359381319962624