ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಲುಕ್ ನೀಡುವ ವಾಚ್‌ಗಳಿಗಿಂತ ಸ್ಮಾರ್ಟ್ ವಾಚ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಇವು ನೂತನ ತಂತ್ರಜ್ಞಾನಗಳೊಂದಿಗೆ ವಿಶಿಷ್ಟ ರೂಪದಲ್ಲಿ ಕೆಲಸ ನಿರ್ವಹಿಸುತ್ತಿವೆ. ಅದಕ್ಕಾಗಿಯೇ ಉತ್ತಮ ಗುಣಮಟ್ಟ ಹಾಗೂ ದೀರ್ಘಕಾಲ ಬಾಳಿಕೆ ಬರುವ ವಾಚ್‌ಗಳು ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೊರೆಯುತ್ತಿವೆ.
ಬ್ಲೂಟೂತ್ ಕನೆಕ್ಟ್ ಸ್ಮಾರ್ಟ್ ವಾಚ್, ಮೆಟಲ್ ಬಾಡಿ ವಾಚ್, ಡಿಜಿಟಲ್ ವಾಚ್, ಚೈನ್ ವಾಚ್ ಹೀಗೆ ವಿವಿಧ ಬಗೆಯ ವಾಚ್‌ಗಳು ಯುವ ಸಮೂಹದ ಅಚ್ಚುಮೆಚ್ಚಾಗಿವೆ. ಅವುಗಳ ವೈಶಿಷ್ಟ್ಯ ಹೇಗಿದೆ ಎಂಬುದನ್ನಿಲ್ಲಿ ನೋಡಿ… ಇದನ್ನೂ ಓದಿ: ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ
Advertisement
Advertisement
ಬ್ಲೂಟೂತ್ ಸ್ಮಾರ್ಟ್ ವಾಚ್:
ಇದು ಮೊಬೈಲ್ ಬ್ಲೂಟೂತ್ ಸಂಪರ್ಕದೊಂದಿಗೆ ಕೆಲಸ ನಿರ್ವಹಿಸುವ ಸ್ಮಾರ್ಟ್ ವಾಚ್. ಈ ವಾಚ್ ಕಪ್ಪು, ಬಿಳಿ ಶೈನ್ ಹಾಗೂ ಬ್ರೌನ್ ಬಣ್ಣಗಳಲ್ಲಿ ಇರುತ್ತದೆ. ಯುವಕ, ಯುವತಿಯರ ಕೈಗೆ ಇದು ಆಕರ್ಷಕ ಪ್ರೀಮಿಯಂ ನೋಟವನ್ನು ನೀಡುತ್ತದೆ.
Advertisement
ವಾಟರ್‌ಪ್ರೂಫ್ ವಾಚ್
ನಿಮ್ಮ ಫಿಟ್ನೆಸ್ ಮತ್ತು ಆರೋಗ್ಯವನ್ನು ಟ್ರ‍್ಯಾಕ್ ಮಾಡುವುದಕ್ಕೂ ಈ ವಾಚ್ ಉಪಯೋಗ ಆಗಲಿದೆ. ಉತ್ತಮ ವೈಶಿಷ್ಟ್ಯ ಹೊಂದಿದ್ದು, ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಹಾಗೂ ನಾವು ನಡೆಯುವ ಹೆಜ್ಜೆಗಳನ್ನೂ ಮಾನಿಟರ್ ಮಾಡುತ್ತದೆ.
Advertisement
ಮೆಟಲ್ ಬಾಡಿ ವಾಚ್:
ಈ ವಾಚ್ ಮೆಟಲ್ ಬಾಡಿ ಮತ್ತು ಲೆದರ್ ಸ್ಟ್ರಾಪ್, ಫುಲ್ ಟಚ್ ಹೊಂದಿರುತ್ತವೆ. ಇದು ಇಂದಿನ ಟ್ರೆಂಡಿಯೊಂದಿಗೆ ಸಾಂಪ್ರದಾಯಿಕ ಉಡುಗೆಗಳಿಗೂ ಹೊಸ ಲುಕ್ ಕೊಡುತ್ತೆ. ಇದನ್ನೂ ಓದಿ: ಕಲರ್‌ಫುಲ್ ಸೀರೆಗೆ ಮ್ಯಾಚಿಂಗ್ ಮಿಂಚಿಂಗ್ – ಬೊಂಬಾಟ್ ಬ್ಲೌಸ್‍ಗಳ ಸ್ಲೀವ್ಸ್ ಡಿಸೈನ್
ಡಿಜಿಟಲ್ ವಾಚ್:
ವಿದ್ಯುತ್ ಮೀಟರ್ ನಂತೆಯೇ ನಿಮಿಷ, ಸೆಕೆಂಡುಗಳು ಹಾಗೂ ಗಂಟೆ ಸಮಯವನ್ನೂ ತೋರಿಸುವ ಈ ಡಿಜಿಟಲ್ ವಾಚ್ ಹೆಚ್ಚು ಯೂತ್‌ಫುಲ್ ಆಗಿದೆ. ಜೊತೆಗೆ ಕಲರ್ ಫ್ಲ್ಯಾಶ್ ಸಹ ಹೊಂದಿದ್ದು, ಅಲಾರಂ ಸೆಟ್ಟಿಂಗ್ಸ್ ಸಹ ಇರುತ್ತದೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದ ಯುವಜನರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.
ಡ್ರೆಸ್‌ವಾಚ್
ಸೂಟ್ ಡ್ರೆಸ್‌ಗಳಿಗೆ ಪಕ್ಕಾ ಲುಕ್ ನೀಡುವ ವಾಚ್. ನೀವು ಯಾವುದೇ ಸೂಟ್ ಧರಿಸಿದ್ರೂ ಅದರ ಔಟ್‌ಲುಕ್ ಫಿಟ್ ಆಗಿ ಕಾಣಬೇಕು ಅಂದ್ರೆ ಈ ರೀತಿಯ ವಾಚ್ ಧರಿಸಲೇ ಬೇಕು. ಆದರೆ ಟ್ರೆಂಟ್ ಬಯಸುವವರು ಇದನ್ನ ಹೆಚ್ಚು ಇಷ್ಟಪಡಲ್ಲ.