ತಂಪಾದ ವಾತಾವರಣ, ಬೆಳ್ಳಂ ಬೆಳಗ್ಗೆ ಹಲವೆಡೆ ಮಂಜು ಮುಸುಕಿದ ವಾತಾವರಣ ಸಿಟಿಗೆ ಆವರಿಸುತ್ತಿದೆ. ಚುಮು – ಚುಮು ಚಳಿ ಮೈ ಕೊರೆಯುತ್ತಿದೆ. ತಣ್ಣನೆಯ ತಂಗಾಳಿ ಮಧ್ಯೆ ಸೂರ್ಯನ ರಶ್ಮಿ ತಾಕುತಿದ್ರೆ ಸ್ವರ್ಗವೂ ಅದೇ ಆಗಿದೆ. ಬೇಸಿಗೆ ಮುಗಿಯುವ ಮುನ್ನವೇ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗಿದ್ದು, ಜನರು ಈಗಾಗಲೇ ಮಳೆಗಾಲದ ಲೈಫ್‌ಸ್ಟೈಲ್‌ಗೆ ಸಿದ್ಧರಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮಳೆಯೊಂದಿಗೆ ಚಳಿಯ ವಾತಾವರಣವೂ ಹೆಚ್ಚಿರುವ ಕಾರಣ. ಯುವಕ, ಯುವತಿಯರು ಸ್ಟೈಲ್ ಸ್ವೆಟರ್ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಪ್ರಮುಖ ಕಂಪೆನಿಗಳು ಸಹ ಗ್ರಾಹಕರ ಅಭಿರುಚಿಗೆ ತಕ್ಕಂತೆ ತರಹೇವಾರಿ ಸ್ವೆಟರ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿವೆ. ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ 6 ಸಾವಿರ ರೂಪಾಯಿಯ ಝರಾ ಲುಂಗಿ!
Advertisement
Advertisement
ಪುಲ್ಲೋವರ್ ಸ್ವೆಟರ್: ಪುಲ್ಲೋವರ್ ಮಾದರಿಯಲ್ಲೇ ಕ್ರೂನೆಕ್ಸ್ ನೂಲಿನಿಂದ ಹೆಣೆಯಲಾದ ಈ ಸ್ವೆಟರ್ ವಿಶಿಷ್ಟ ಮತ್ತು ಆರಾಮಯದಾಯಕವಾಗಿದೆ. ಶರ್ಟ್‌ಗಳು, ಟಾಪ್‌ಗಳು ಮತ್ತು ಬ್ಲೌಸ್‌ಗಳ ಮೇಲೆಯೂ ಧರಿಸಬಹುದು. ಚಳಿಯ ನಡುವೆ ಇದು ಬೆಚ್ಚನೆಯ ಅನುಭವ ನೀಡುತ್ತದೆ. ಇದನ್ನೂ ಓದಿ: ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್ – ಏನಿದೆ ವಿಶೇಷ?
Advertisement
ಓಪನ್ ಸ್ಟೈಲ್ ಸ್ವೆಟರ್: ತೆರೆದ ಭಾಗದ ಈ ಸ್ವೆಟರ್ ಚಳಿಯಿಂದ ರಕ್ಷಿಸುವುದು ಮಾತ್ರವಲ್ಲದೆ, ಟೀ ಶರ್ಟ್‌ಗಳ ಮೇಲೆ ಧರಿಸಿದ್ರೆ ಫ್ರೆಶ್‌ಲುಕ್ ನೀಡುತ್ತದೆ. ಹೆಚ್ಚಿನ ಯುವಕ – ಯುವತಿಯರು ಇದೇ ಟ್ರೆಂಡ್ ಅನ್ನು ಬಸುತ್ತಾರೆ. ಕೆಲವರು ಇನ್ನಷ್ಟು ಸುಲಭ ಮಾಡಿಕೊಳ್ಳಲು ಸ್ವೆಟ್ ಟೀ ಶರ್ಟ್‌ಗಳನ್ನೇ ಧರಿಸುತ್ತಾರೆ.
Advertisement
ಕ್ರೀವ್ ನೆಕ್ ಸ್ವೆಟರ್: ಇದು ಚಳಿಗಾಲದಲ್ಲಿ ಸಾಧಾರಣವಾಗಿ ಸಿಗುವ ಸ್ವೆಟರ್‌ಗಳು. ಪುಲ್ಲೋವರ್ ಶೈಲಿಯನ್ನೇ ಹೋಲುತ್ತವೆ. ಮಹಿಳೆಯರು, ಪುರುಷರು ಸಹ ಇದನ್ನು ಧರಿಸಬಹುದು. ಇದನ್ನೂ ಓದಿ: ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ
ವಿ-ನೆಕ್ ಸ್ವೆಟರ್: ಹೆಸರೇ ಸೂಚಿಸುವಂತೆ ಇದು ಕುತ್ತಿಗೆ ಭಾಗದಲ್ಲಿ ವಿ-ಶೈಲಿಯಲ್ಲಿ ಇರುತ್ತದೆ. ಇವು ತುಂಬು ತೋಳು ಹಾಗೂ ಅರ್ಧ ತೋಳಿನ ಶೈಲಿಯಲ್ಲೂ ಲಭ್ಯವಿರುತ್ತವೆ. ಸಾಧಾರಣಾ ಶರ್ಟ್‌ಗಳ ಮೇಲೂ ಧರಿಸಬಹುದಾಗಿದ್ದು, ಕಚೇರಿ ಕೆಲಸಗಳಿಗೆ ತರಳುವವರು ಈ ಮಾದರಿಯ ಸ್ವೆಟರ್ ಅನ್ನು ಹೆಚ್ಚಾಗಿ ಬಳಸುತ್ತಾರೆ.
ಉಲ್ಲನ್ ಸ್ವೆಟರ್: ರೇಷ್ಮೆ ಹಾಗೂ ಹತ್ತಿ ಮಿಶ್ರಿತದಿಂದ ತಯಾರಿಸಲಾದ ಈ ಸ್ಟೆಟರ್ ಹೆಚ್ಚು ಚಳಿಯನ್ನು ನಿಯಂತ್ರಿಸುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಮಕ್ಕಳು ಹಾಗೂ ಮಹಿಳೆಯರು ಹೆಚ್ಚಾಗಿ ಈ ಮಾದರಿಯ ಸ್ವೆಟರ್ ಅನ್ನು ಬಳಸುತ್ತಾರೆ.