ಮೈಸೂರು: ಸಾಂಸ್ಕೃತಿಕ ನಗರಿಯ ದಸರಾದಲ್ಲಿ ಮೊದಲ ಬಾರಿಗೆ ಮತ್ಯ್ಸ ಲೋಕವೇ ಅನಾವರಣಗೊಂಡಿದೆ. ದೇಶ ವಿದೇಶ ಕಲರ್ ಕಲರ್ ಮೀನಗಳು ನೋಡುಗರ ಕಣ್ಮನ ಸೆಳೆಯುತ್ತಿದೆ.
ರೈತರಿಗೆ ಮೀನುಗಾರಿಗೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮತ್ಯ್ಸ ಮೇಳವನ್ನು ಮೀನುಗಾರಿಗೆ ಇಲಾಖೆ ಆಯೋಜನೆ ಮಾಡಿದೆ. ದೇಶ ವಿದೇಶಗಳಿಂದ 100ಕ್ಕೂ ಹೆಚ್ಚು ಬಗೆಯ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಉನ್ನತ ಶಿಕ್ಷಣ ಸಚಿವ ಜಿಟಿ ದೇವೆಗೌಡ ಅವರು ಮತ್ಯ್ಸ ಮೇಳವನ್ನು ಉದ್ಘಾಟನೆ ಮಾಡಿದರು.
Advertisement
Advertisement
ದೇಶಿಯ ಮೀನುಗಳಾದ ಸಾಮಾನ್ಯ ಗೆಂಡೆ, ಹುಲ್ಲುಗೆಂಡೆ, ಬೆಳ್ಳಿ ಗೆಂಡೆ, ಕಾಟ್ಲಾ, ರೋಹು, ಮೃಗಾಲ್ ಮೀನುಗಳ ಎಲ್ಲರ ಗಮನ ಸೆಳೆದವು. ಅಕ್ವೇರಿಯಂನಲ್ಲಿ ವಿವಿಧ ಬಗೆಯ ಕಲರ್ ಕಲರ್ ಸಾಕು ಮೀನುಗಳನ್ನು ಇಡಲಾಗಿದೆ.
Advertisement
Advertisement
ಪ್ರಮುಖವಾಗಿ ಅಮೆಜಾನಿನ ಸ್ಟಿಂಗ್ ರೇ, ಏಶಿಯಾದ ಅರೋವಾನ, ಆಫ್ರಿಕಾದ ಚಿಚಿಲಿಡ್ಸ್, ಈಲ್ಸ್, ಬ್ಲೂ ಚನ್ನ, ತೈರೆ ಈಲ್ಸ್, ಹೈಳಿನ್ ಶಾರ್ಕ್, ಜಾಯಿಂಟ್ ಗೌರಮಿ, ಸ್ನೇಕ್‍ಹೆಡ್ಸ್ ಮೀನುಗಳನ್ನು ಇಡಲಾಗಿದೆ. ಮತ್ಯ್ಸ ಮೇಳದಲ್ಲಿ ಮೀನಗಳ ಪ್ರದರ್ಶನ ಅಲ್ಲದೇ ಕೊಡವೆ, ಹರಿಗೋಲು ಹಾಗೂ ವಿವಿಧ ಬಗೆಯ ಬಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv