ಮಹಿಳೆಯರ ಸೌಂದರ್ಯ (Womens Beauty) ಹೆಚ್ಚಿಸುವಲ್ಲಿ ಲಿಪ್‌ಸ್ಟಿಕ್ (LipStick)ಗಳ ಪಾತ್ರ ಮುಖ್ಯವಾದುದು. ಅದಕ್ಕಾಗಿಯೇ ಮಹಿಳೆಯರು (Women), ಯುವತಿಯರು ಲಿಪ್‌ಸ್ಟಿಕ್ ಹಚ್ಚದೇ ತಮ್ಮ ಮೇಕಪ್ ಪೂರ್ಣಗೊಳಿಸಲು ಸಾಧ್ಯವೇ ಇಲ್ಲ. ಅದರಲ್ಲೂ ಕಚೇರಿ ಕೆಲಸಗಳಿಗೆ ಹೋಗುವವರಂತೂ ಲಿಪ್‌ಸ್ಟಿಕ್ ಇಲ್ಲದೇ ಮನೆಯಿಂದ ಹೊರಗೂ ಬರುವುದಿಲ್ಲ. ಹೆಂಗೆಳೆಯರು ವಿವಿಧ ಬಣ್ಣದ (Colours) ಲಿಪ್ ಸ್ಟಿಕ್‌ಗಳನ್ನ ಟ್ರೈ ಮಾಡ್ತಾರೆ. ಮಹಿಳೆಯರ ಮುಖದಲ್ಲಿ ತುಟಿಯು (Lips) ಎದ್ದುಕಾಣುವಂತಹ ಭಾಗವಾದ್ದರಿಂದ, ಬಣ್ಣ ಹಚ್ಚಿದರೆ ನೋಡಿದಷ್ಟೂ ನೋಡುತ್ತಲೇ ಇರಬೇಕು ಅನ್ನಿಸೋದ್ರಲ್ಲಿ ತಪ್ಪೇನೂ ಇಲ್ಲ.
Advertisement
ವಾಟರ್ ಪ್ರೂಫ್ ಲಿಪ್‌ಸ್ಟಿಕ್:
ಲಿಪ್ ಸ್ಟಿಕ್‌ಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ ಮತ್ತು ನಿಮಗೆ ತ್ವರಿತ ಆಕರ್ಷಕ ನೋಟವನ್ನು ನೀಡುತ್ತದೆ. ಅದರಲ್ಲೂ ವಾಟರ್ ಪ್ರೂಫ್ ಲಿಪ್‌ಸ್ಟಿಕ್‌ಗಳು (WaterProof LipStick) ನಿಮಗೆ ಪರಿಪೂರ್ಣ ನೋಟವನ್ನು ನೀಡುತ್ತದೆ. ಕಚೇರಿಯಿಂದ ಪಾರ್ಟಿಗೆ ಅಥವಾ ಪ್ರಯಾಣಿಸುವಾಗ ಇವುಗಳನ್ನು ನೀವು ಬಳಸಬಹುದು. ಇವು ಮಳೆಯಲ್ಲೂ ಬಣ್ಣವನ್ನು ಬಿಡುವುದಿಲ್ಲ. ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತವೆ. ಗರ್ಲ್ ಫ್ರೆಂಡ್, ಪತ್ನಿ ಮತ್ತು ಸಹೋದರಿಯರಿಗೂ ಇದನ್ನು ಉಡುಗೊರೆಗಳಾಗಿ ನೀಡಬಹುದು. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್
Advertisement
Advertisement
ಕೆಂಪು ಲಿಪ್‌ಸ್ಟಿಕ್:
ಕೆಂಪು ಲಿಪ್ ಸ್ಟಿಕ್ (Red LipStick) ತುಟಿಗಳನ್ನು ಸುಂದರಗೊಳಿಸುವುದಲ್ಲದೇ ತುಟಿಗಳ ಆರೋಗ್ಯವನ್ನೂ ಕಾಪಾಡುತ್ತದೆ. ಈ ಲಿಪ್ ಸ್ಟಿಕ್‌ಗಳಲ್ಲಿ ಎಷ್ಟೇ ಬಣ್ಣಗಳಿದ್ದರೂ ರೆಡ್ ಕಲರ್ ಎಲ್ಲರ ಫೇವರೇಟ್ ಬಣ್ಣ. ಇವುಗಳಿಗೆ ನೈಸರ್ಗಿಕ ಪದಾರ್ಥಗಳನ್ನೂ ಬಳಸೋದ್ರಿಂದ ನಿಮಗೆ ಯಾವುದೇ ಹಾನಿ ಆಗೋದಿಲ್ಲ ಎಂದು ಸೌಂದರ್ಯವರ್ಧಕ ತಜ್ಞರು ಹೇಳುತ್ತಾರೆ.
Advertisement
ನ್ಯೂಡ್ ಪಿಂಕ್ ಲಿಪ್‌ಸ್ಟಿಕ್:
ನ್ಯೂಡ್ ಪಿಂಕ್ ಕಲರ್ ಲಿಪ್ ಸ್ಟಿಕ್ (NudPink Colour Lipstick) ಹಾಕಿಕೊಂಡರೆ ಅದು ನಿಮ್ಮ ನೈಸರ್ಗಿಕ ತುಟಿ ಬಣ್ಣದಂತೆಯೇ ಕಾಣುತ್ತದೆ. ನೀವು ಕಪ್ಪು ಡ್ರೆಸ್ನಲ್ಲಿ ಪ್ರಕಾಶಮಾನವಾದ ಲಿಪ್‌ಸ್ಟಿಕ್ ಅನ್ನು ಹಾಕುವುದು ತಪ್ಪಿಸಲು ಬಯಸಿದರೆ ನ್ಯೂಡ್ ಪಿಂಕ್ ಬಣ್ಣವು ಪರಿಪೂರ್ಣ ಆಯ್ಕೆಯಾಗಿದೆ. ಇದು ತುಂಬಾ ಸ್ಟೈಲಿಶ್, ಆದರೆ ತುಂಬಾ ಬೋಲ್ಡ್ ಲುಕ್ ಪಡೆಯಲು ಸಹಾಯ ಮಾಡುತ್ತದೆ.