ಹುಬ್ಬಳ್ಳಿ: ಜಾತ್ರೆ ಅಂದರೆ ಎಷ್ಟು ಖುಷಿ ಹೇಳಿ. ಊರ ಜಾತ್ರೆ ಅಂದರೆ ಅಕ್ಕ-ಪಕ್ಕದ ಊರುಗಳಿಂದ ಸಂಬಂಧಿಕರನ್ನು ಮನೆಗೆ ಕರೆಯಿಸಿ, ಮನೆಯಲ್ಲಿ ಸಿಹಿ ಊಟ ಮಾಡಿ, ಹೊಸ ಬಟ್ಟೆ, ತೇರು.. ಈ ಖುಷಿನೇ ಬೇರೆ. ಆದರೆ ಈ ಊರಲ್ಲಿ ಜಾತ್ರೆ ಇದಕ್ಕೆ ಪೂರ್ತಿ ವಿರುದ್ಧವಾಗಿದೆ.
Advertisement
ಹೌದು. ಮಾರ್ಚ್ 1ರಿಂದ 9ರವರೆಗೆ ಕಲಘಟಗಿಯಲ್ಲಿ ಗ್ರಾಮದೇವಿ ಜಾತ್ರೆ ನಡೆಯಲಿದೆ. ಗ್ರಾಮದೇವಿ ಈ ಸಂದರ್ಭದಲ್ಲಿ ಊರಲ್ಲಿ ಸಂಚರಿಸುತ್ತಾಳೆ ಎಂಬ ನಂಬಿಕೆ. ಗ್ರಾಮದಲ್ಲಿ ಸಂಚರಿಸಿ ದುಷ್ಟ ಶಕ್ತಿಗಳನ್ನು ಕೊಲ್ಲುತ್ತಾಳೆ ಎಂಬ ನಂಬಿಕೆ. ಹೀಗಾಗಿ 5 ದಿನ ಮನೆಗಳಿಗೆ ಬೀಗ ಹಾಕಿ ಕುಟುಂಬ ಸಮೇತ ಜನ ಊರು ತೊರೆಯುತ್ತಾರೆ. ಜಾತ್ರೆಗಾಗಿ ಕಲಘಟಗಿ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳ ಜನರು ವಿಶಿಷ್ಟವಾದ ಪದ್ಧತಿಯನ್ನು ಆಚರಿಸುತ್ತಾರೆ.
Advertisement
Advertisement
ಸಾಕಲಘಟಗಿ, ದಾಸ್ತಿಕೊಪ್ಪ ಕಲಕುಂಡಿ, ಬೆಂಡಿಗೇರಿ, ಮಾಚಾಪುರ ಗ್ರಾಮಗಳಲ್ಲಿ ಹೊರಾವಾರ ಪದ್ಧತಿ ಆಚರಿಸುತ್ತಾರೆ. ಈ ಐದು ಹಳ್ಳಿಗಳಲ್ಲಿ ಬರುವ ಯುಗಾದಿಯವರೆಗೆ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಮಾಡಲ್ಲ. ಇದನ್ನೂ ಓದಿ: ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ – ಮೈಲಾರಲಿಂಗೇಶ್ವರ ವರ್ಷದ ದೈವವಾಣಿ
Advertisement
ಸರ್ವ ಧರ್ಮೀಯರು ಮನೆ ತೊರೆದು ಗ್ರಾಮ ದೇವತೆ ಜಾತ್ರೆಯ ನಿಯಮ ಪಾಲಿಸುತ್ತಾರೆ. ಜಾತ್ರೆಗೆ ಮೊದಲು ಐದು ವಾರಗಳ ಆಚರಣೆ ನಡೆಯುತ್ತೆ. ಜನರು ಉದ್ಯಾನಗಳಲ್ಲಿ, ಗದ್ದೆಗಳಲ್ಲಿ ಮತ್ತು ಪಟ್ಟಣದ ಹೊರಗಿನ ಮರಗಳ ಕೆಳಗೆ ದಿನ ಕಳೆಯುತ್ತಾರೆ. ಆಹಾರದ ಬುತ್ತಿಗಳನ್ನು ಕಟ್ಟಿಕೊಂಡು ಹೋಗಿ ಒಟ್ಟಾಗಿ ಊಟ ಮಾಡುತ್ತಾರೆ. ಈ ಐದು ದಿನ ಅಂಗಡಿ- ಮುಂಗಟ್ಟು ಮುಚ್ಚಿರುತ್ತೆ. ವ್ಯಾಪಾರ ವಹಿವಾಟುಗಳು ಸ್ಥಗಿತವಾಗುತ್ತವೆ.
ಕಲಘಟಗಿ (Kalaghatagi) ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ದ್ಯಾಮವ್ವ, ದುರ್ಗವ್ವ, ಮೂರು ಮುಖದವ್ವ ಎನ್ನುವ ಶಕ್ತಿ ದೇವತೆಗಳಿದ್ದಾರೆ. ಈ ಮೂವರು ಸಹೋದರಿಯರು ಅನಾದಿಕಾಲದಿಂದಲೂ ಊರಿನ ಜನರನ್ನು ರಕ್ಷಿಸುತ್ತಿದ್ದಾರೆ ಅನ್ನೋ ನಂಬಿಕೆಯಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k