ಚಿಕ್ಕಮಗಳೂರು: `ಹಾವು’ ಅಂದಾಕ್ಷಣ ಆಡೋ ಮಕ್ಕಳಿಂದ ಮುದುಕ್ರು ಕೂಡ ಕಾಲಿಗೆ ಬುದ್ಧಿ ಹೇಳ್ತಾರೆ. ಹಾವನ್ನ ಕಂಡ ದಾರಿಯಲ್ಲಿ ವಾರವಾದ್ರು ಓಡಾಡೋದಿಲ್ಲ. ಆದ್ರೆ, ಎಲ್ಲಾ ಹಾವುಗಳು ಕೆಟ್ಟವಲ್ಲ. ಕೆಲ ಹಾವುಗಳು ಕಚ್ಚಿದ್ರೂ ಸಾಯೋದಿಲ್ಲ ಅನ್ನೋ ವಿಷಯ ಎಷ್ಟೋ ಜನಕ್ಕೆ ಗೊತ್ತಿಲ್ಲ. ಅದನ್ನ ತಿಳಿಯೋ ಪ್ರಯತ್ನಕ್ಕೂ ಯಾರು ಹೋಗೋದಿಲ್ಲ. ಚಿಕ್ಕಮಗಳೂರಿನ ವಿಶ್ವಮಾನವ ಎಜುಕೇಶನ್ ಟ್ರಸ್ಟ್ ಏರ್ಪಡಿಸಿರೋ ಬೇಸಿಗೆ ಶಿಬಿರ ತುಸು ಭಿನ್ನವಾಗಿದ್ದು, ಬರೀ ಆಡೋದು, ಕುಣುಯೋದನ್ನಷ್ಟೆ ಹೇಳಿ ಕೊಡ್ತಿಲ್ಲ. ಎಳೆಯ ಮನಸ್ಸಿಗೆ ಕೆಲ ಉಪಯುಕ್ತ ಮಾಹಿತಿಯನ್ನು ನೀಡ್ತಿದ್ದಾರೆ.
Advertisement
ಹೌದು. ಚಿಕ್ಕಮಗಳೂರಿನ ವಿಶ್ವಮಾನವ ಟ್ರಸ್ಟ್ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ಉರಗ ತಜ್ಞ ಸ್ನೇಕ್ ನರೇಶ್ ಹಾವಿನ ಬಗ್ಗೆ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದ್ರು. ಶಿಬಿರದಲ್ಲಿ ವಿಷಕಾರಿ ನಾಗರಹಾವು ಹಾಗೂ ಬೃಹತ್ ಗಾತ್ರದ ಕೆರೆ ಹಾವನ್ನ ತಂದು ಅವುಗಳ ಜಾತಿ, ವಾಸ, ಚಲನವಲನ ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿ ಕೊಟ್ರು.
Advertisement
Advertisement
ನರೇಶ್ ಸರ್ ಶಿಬಿರಕ್ಕೆ ಬಂದು ಹಾವುಗಳ ಬಗ್ಗೆ ಅನೇಕ ಮಾಹಿತಿಗಳನ್ನು ನೀಡಿದ್ರು. ವಿಷದ ಹಾವುಗಳು ಹೇಗಿರುತ್ತವೆ ಅನ್ನೋದನ್ನ ತೋರಿಸಿಕೊಟ್ರು. ಒಂದು ಹಾವು ಹೇಗಿರುತ್ತೆ ಅನ್ನೋದನ್ನ ಕ್ಲೀಯರ್ ಆಗಿ ಮೊದಲ ಬಾರಿಗೆ ನೋಡಿದೆ. ಫಸ್ಟ್ ನೋಡುವಾಗ ಭಯ ಆಯ್ತು. ಆಮೇಲೆ ಅದನ್ನ ಮುಟ್ಟಿದಾಗ ಅಷ್ಟೊಂದು ಭಯವಾಗಿಲ್ಲ ಅಂತಾ ವಿದ್ಯಾರ್ಥಿನಿ ಸಂಯುಕ್ತಾ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ರು.
Advertisement
ಮಕ್ಕಳೂ ಸಹ ಹಾವುಗಳನ್ನ ಮುಟ್ಟಿ, ಅವುಗಳ ಜೊತೆ ಆಟ ಆಡಿ ಎಂಜಾಯ್ ಮಾಡಿದ್ರು. ಹಾವುಗಳ ಬಗ್ಗೆ ಇದ್ದಂಥ ಭಯವನ್ನ ದೂರ ಮಾಡಿಕೊಂಡ್ರು. ಬೇಸಿಗೆ ರಜೆಯಲ್ಲಿ ನೂರಾರು ಶಿಬಿರಗಳನ್ನು ನಡೆಸಿ ಜನ ಹಣ ವಸೂಲಿ ಮಾಡ್ತಾರೆ ಹೊರತು ಮಕ್ಕಳಿಗೆ ಬನೇಕಾದ ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತಿಲ್ಲ. ಆದ್ರೆ ಚಿಕ್ಕಮಗಳೂರಿನ ವಿಶ್ವಮಾನವ ಟ್ರಸ್ಟ್ ನವ್ರು ವಿಭಿನ್ನ ಕಾರ್ಯಕ್ರಮ ಮಾಡಿರೋದು ಶ್ಲಾಘನೀಯ.