ತಿರುವನಂತಪುರಂ: ಹುಡುಗರು ಹಾಗೂ ಹುಡುಗಿಯರು ಒಟ್ಟಿಗೆ ಕುಳಿತುಕೊಳ್ಳಬಾರದು ಎಂದು ಬಸ್ ನಿಲ್ದಾಣದ ಸೀಟ್‌ಗಳನ್ನೇ ಕತ್ತರಿಸಿ ಬೇರ್ಪಡಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೇರ್ಪಟ್ಟ ಸೀಟುಗಳಲ್ಲಿ ಪರಸ್ಪರ ಮಡಿಲಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಕೇರಳದ ತಿರುವನಂತಪುರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ ಬಳಿಯಿರುವ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಟ್ಟಿಗೆ ಕುಳಿತುಕೊಳ್ಳಬಾರದು ಎಂಬ ಕಾರಣಕ್ಕೆ ಸ್ಥಳೀಯರು ಸೀಟ್‌ಗಳನ್ನು ರಾತ್ರೋರಾತ್ರಿ ಕತ್ತರಿಸಿ ಬೇರ್ಪಡಿಸಿದ್ದರು. ಆದರೆ ಸ್ಥಳೀಯರ ಈ ನಿಲುವಿನಿಂದ ಬೇಸತ್ತ ವಿದ್ಯಾರ್ಥಿಗಳು ಬೇರ್ಪಡಿಸಿರುವ ಸೀಟುಗಳಲ್ಲಿ ಪರಸ್ಪರ ತೊಡೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗುತ್ತಿದೆ. ಇದನ್ನೂ ಓದಿ: ಇಬ್ರಾಹಿಂ ಸಾಹೇಬ್ರು ಸೋತು ಸುಣ್ಣವಾಗಿದ್ದಾರೆ: ಜಮೀರ್ ತಿರುಗೇಟು
Advertisement
Advertisement
ವಿದ್ಯಾರ್ಥಿಗಳ ಈ ರೀತಿಯ ವಿಭಿನ್ನ ಪ್ರತಿಭಟನೆಗೆ ತಿರುವನಂತಪುರಂ ಮೇಯರ್ ಆರ್ಯ ಎಸ್. ರಾಜೇಂದ್ರನ್ ಪ್ರಶಂಸಿಸಿದ್ದಾರೆ. ವಿದ್ಯಾರ್ಥಿಗಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ರಾಜೇಂದ್ರನ್, ನಮ್ಮ ರಾಜ್ಯದಲ್ಲಿ ಹುಡುಗಿಯರು ಹಾಗೂ ಹುಡುಗರು ಒಟ್ಟಿಗೆ ಕುಳಿತುಕೊಳ್ಳುವುದಕ್ಕೆ ಯಾವುದೇ ನಿಷೇಧ ಹೇರಿಲ್ಲ. ಇಂತಹ ಪ್ರಗತಿಪರ ಸಮಾಜದಲ್ಲೂ ಬೆಂಚ್‌ಗಳನ್ನು ಕತ್ತರಿಸಿರುವುದು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಂಸತ್‍ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ಗೆ ಬೀಳ್ಕೊಡುಗೆ