ಬೀದರ್: ತೊಗರಿ, ಕಬ್ಬು ಸೇರಿದಂತೆ ಸಾಮಾನ್ಯ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಳ್ಳುತ್ತಿದ್ದ ರೈತನಿಂದ ಡಿಫರೆಂಟ್ ಐಡಿಯಾ. ಕಡಿಮೆ ನೀರು, ಕಡಿಮೆ ಖರ್ಚು, ಕಡಿಮೆ ಜಮೀನಿನಲ್ಲಿ ಹಿರೇಕಾಯಿ (Ridge Gourd) ಬೆಳೆ ಬೆಳೆದು ತಿಂಗಳಿಗೆ ಲಕ್ಷ ಲಕ್ಷ ಲಾಭ ಪಡೆಯುತ್ತಿದ್ದಾರೆ ಈ ಮಾದರಿ ರೈತ.
Advertisement
ಬೀದರ್ (Bidar) ತಾಲೂಕಿನ ಅತಿವಾಳ ಗ್ರಾಮದ ರೈತ ಶಾಲಿವಾನ್ ತಮ್ಮ ಎರಡು ಎಕರೆಯಷ್ಟು ಜಮೀನಿನಲ್ಲಿ ಹಿರೇಕಾಯಿ ಬೆಳೆದು ಎರಡು ದಿನಕ್ಕೊಮ್ಮೆ 10 ಸಾವಿರ ಆದಾಯ ಗಳಿಸುತ್ತಿದ್ದಾರೆ. ಪ್ರತಿ ವರ್ಷ ಉದ್ದು, ಸೋಯಾ, ಹೆಸರು ಮತ್ತು ಕಬ್ಬು ಬೆಳೆ ಬೆಳೆದು ಕೈ ಸುಟ್ಟುಕೊಂಡಿದ್ದ ಶಾಲಿವಾನ್, ತೋಟಗಾರಿಕೆ ಬೆಳೆಯಲ್ಲಿ ವಿನೂತನ ಪ್ರಯತ್ನ ಮಾಡಿದ್ದಾರೆ. ಹಿರೇಕಾಯಿ ಕಳೆದೊಂದು ತಿಂಗಳಿಂದ ನಿರಂತರವಾಗಿ ಒಂದು ದಿನ ಬಿಟ್ಟು ಒಂದು ದಿನ ಕಟಾವಿಗೆ ಬರ್ತಿದೆ. ಪ್ರತಿಯೊಂದು ಕಟಾವಿಗೂ ಒಂದು ಕ್ವಿಂಟಾಲ್‍ವರೆಗೂ ಬೆಳೆ ಸಿಗುತ್ತಿದ್ದು, 10 ರಿಂದ 15 ಸಾವಿರ ರೂಪಾಯಿವರೆಗೂ ಆದಾಯ ಬರುತ್ತಿದೆ.
Advertisement
Advertisement
ಪ್ರಗತಿಪರ ರೈತ ಶಾಲಿವಾನ್ ಕಳೆದ 20 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಹೊಸ ತಂತ್ರಜ್ಞಾನವನ್ನು ಆಳವಡಿಕೊಳ್ಳುವಲ್ಲಿ ಮುಂದಿದ್ದಾರೆ. ಕಳೆದ ಬಾರಿ ಎರಡು ಎಕರೆಯಷ್ಟು ಜಮೀನಿನಲ್ಲಿ ಟೊಮ್ಯಾಟೋ (Tomato) ಬೆಳೆದು 10 ಲಕ್ಷ ರೂಪಾಯಿಯಷ್ಟು ಲಾಭವಾಗಿತ್ತು. ಇವರ ರೀತಿ ಎಲ್ಲ ರೈತರು ಪ್ರಯೋಗಾತ್ಮಕ ಕೃಷಿಯನ್ನು ಅಳವಡಿಸಿಕೊಂಡಾಗ ರೈತ ಆತ್ಮಹತ್ಯೆ ಕಡೆ ಮುಖ ಮಾಡೋದು ಕಡಿಮೆಯಾಗುತ್ತದೆ. ಇದನ್ನೂ ಓದಿ: ಕೈಕೊಟ್ಟ ಲವರ್‌ಗೆ ಠಕ್ಕರ್ ಕೊಡಲು ಆಕೆಯ ಮೊದಲ ಅಕ್ಷರ ಬಳಸಿ ಚಹಾ ಅಂಗಡಿ ತೆರೆದ ಪ್ರೇಮಿ
Advertisement
ಇನ್ನಾದರೂ ರೈತರು ಸಾಲ ಮಾಡಿ ಸಾಮಾನ್ಯ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಳ್ಳುವುದಕ್ಕಿಂತ್ತ ಮುಂಚೆ ಲಾಭ ಕೊಡುವ ಈ ರೀತಿಯ ಬೆಳೆಗಳ ಕಡೆ ರೈತರು ಮುಖ ಮಾಡಬೇಕಿದೆ.