ಮುಂಬೈ: ವಿಚಿತ್ರವಾಗಿ ಬೌಲರ್ ಒಬ್ಬ ಬೌಲಿಂಗ್ ಮಾಡಿರುವ ವಿಡಿಯೋವನ್ನು ಟೀಂ ಇಂಡಿಯಾ ಮಾಜಿ ಆಟಗಾರ ಆಶಿಶ್ ನೆಹ್ರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಶಿಶ್ ನೆಹ್ರಾ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಸ್ಪಿನ್ ಬೌಲಿಂಗ್ ಮಾಡುತ್ತಿರುವ ಬೌಲರ್ ಶೈಲಿ ವಿಭಿನ್ನವಾಗಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ಈ ವಿಡಿಯೋ ಅಪ್ಲೋಡ್ ಮಾಡಿರುವ ನೆಹ್ರಾ, ಟೀಂ ಇಂಡಿಯಾ ಬೌಲರ್ ಗಳಾದ ಚಹಲ್ ಹಾಗೂ ಕುಲದೀಪ್ ಯಾದವ್ಗೆ ಟ್ಯಾಗ್ ಮಾಡಿ, ನೀವು ಟ್ರೈ ಮಾಡಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಅಂದಹಾಗೇ ಈ ವಿಡಿಯೋ ಎಲ್ಲಿಗೆ ಸೇರಿದ್ದು, ಯಾವ ಬೌಲರ್ ಈ ರೀತಿ ಬೌಲ್ ಮಾಡಿದ್ದಾರೆ ಎಂಬ ಬಗ್ಗೆ ನೆಹ್ರಾ ಮಾಹಿತಿ ನೀಡಿಲ್ಲ. ಆದರೆ ಬೌಲರ್ ಶೈಲಿ ಕಂಡು ಕ್ಷಣ ಕಾಲ ಅಚ್ಚರಿಗೆ ಒಳಗಾದ ಅಂಪೈರ್ ಡೆಡ್ ಬಾಲ್ ಎಂದು ತೀರ್ಪು ನೀಡಿದ್ದಾರೆ. ಆದರೆ ಬೌಲರ್ ಹಾಗೂ ತಂಡದ ಆಟಗಾರರು ಮಾತ್ರ ಅಂಪೈರ್ ತೀರ್ಮಾನಕ್ಕೆ ಬೇಸರದೊಂದಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Advertisement
ಈ ವಿಡಿಯೋವನ್ನು ಬಿಸಿಸಿಐ ಅಪ್ಲೋಡ್ ಮಾಡಿದ್ದು, ಬ್ಯಾಟ್ಸ್ ಮನ್ ಗಳು ಇಷ್ಟಬಂದಂತೆ ಬ್ಯಾಟ್ ಮಾಡುತ್ತಾರೆ. ಆದರೆ ಬೌಲರ್ ಗೆ ಯಾಕೆ ಈ ಸ್ವಾತಂತ್ರ್ಯ ಇಲ್ಲ. ಇದು ಸರಿಯೇ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
Advertisement
https://www.instagram.com/p/Bp6AV6FAYSt/?utm_source=ig_web_copy_link
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews