ಬೆಂಗಳೂರು: ಇತ್ತೀಚಿಗೆ ಚಿತ್ರ ವಿಚಿತ್ರವಾಗಿ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲೊಬ್ಬ ವಿಚಿತ್ರ ಆಟೋ ಕಳ್ಳ ಸೆರೆಯಾಗಿದ್ದು, ಇವನ ಕೈಚಳಕ ನೋಡಿದರೆ ನೀವು ಆಶ್ಚರ್ಯ ಪಡುಬಹುದು.
ಬೆಂಗಳೂರಿನ ಚಂದ್ರು ಅಲಿಯಾಸ್ ಡೋಂಗಿ ಚಂದ್ರು ಬಂಧಿತ ಆಟೋ ಕಳ್ಳ. ಕತ್ತಲು ಆಗುತ್ತಿದಂತೆ ರಸ್ತೆಗೆ ಇಳಿಯುವ ಈತ, ಪಾರ್ಕಿಂಗ್ ಮಾಡಿರೋ ಆಟೋಗಳಲ್ಲಿ ಉತ್ತಮ ಆಟೋ ಆಯ್ಕೆ ಮಾಡಿಕೊಳ್ಳುತ್ತಾನೆ. ನಂತರ ನಕಲಿ ಕೀ ಬಳಸಿ ಆಟೋ ಕದಿಯುತ್ತಾನೆ. ಮುಂಜಾನೆಯವರೆಗೂ ಬಾಡಿಗೆ ಹೊಡಿಯುವ ಖದೀಮ ಬೆಳಾಗಾಗುವಷ್ಟರಲ್ಲಿ ಬಾಡಿಗೆ ನಿಲ್ಲಿಸಿ, ಅಲ್ಲೇ ಆಟೋ ಬಿಟ್ಟು, ಕೈತುಂಬಾ ಕಾಸು ಎಣಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದ.
ಕಳ್ಳನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳಿಂದ ಇವನ ಕಳ್ಳಾಟ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಚಾಮರಾಜಪೇಟೆ ಪೊಲೀಸರು ಈ ಖತಾರ್ನಕ್ ಕಳ್ಳನ ಸೆರೆ ಹಿಡಿದ್ದಾರೆ. ಅಷ್ಟೇ ಅಲ್ಲದೆ ಬಂಧಿತನಿಂದ ಆರು ಆಟೋಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.