ಸಂಸ್ಕೃತದ ʼಯುಗʼ ಮತ್ತು ʼಆದಿʼ ಎಂಬ ಎರಡು ಪದಗಳಿಂದ ಯುಗಾದಿ (Ugadi) ಎಂಬ ಪದ ವ್ಯುತ್ಪತ್ತಿಯಾಗಿದೆ. ಇದರ ಅರ್ಥ ಹೊಸ ಯುಗದ ಆರಂಭ. ಬ್ರಹ್ಮ ದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ನಂಬಿಕೆಯೂ ಇದೆ.
ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.
Advertisement
ಕರ್ನಾಟಕದ ಹಲವೆಡೆ ಚಾಂದ್ರಮಾನ ಯುಗಾದಿ (Chandramana Ugadi) ಆಚರಣೆ ಇದ್ದರೆ ಕರಾವಳಿ, ಕೇರಳ ಭಾಗದಲ್ಲಿ ಸೌರಮಾನ ಯುಗಾದಿಯನ್ನು (Souramana Ugadi) ಆಚರಿಸಲಾಗುತ್ತದೆ. ಈ ಬಾರಿ ಚಾಂದ್ರಮಾನ ಯುಗಾದಿ ಏ.9 ರಂದು ಬಂದರೆ ಸೌರಮಾನ ಯುಗಾದಿ ಏ.14 ರಂದು ಬಂದಿದೆ.
Advertisement
Advertisement
ಚಾಂದ್ರಮಾನ ಯುಗಾದಿ
ಚಂದ್ರನ ಚಲನೆಯನ್ನು ಆಧರಿಸಿ ವರ್ಷದಲ್ಲಿನ ದಿನಗಳನ್ನು ಲೆಕ್ಕಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯ ಪ್ರಕಾರ, ಒಂದು ಅಮಾವಾಸ್ಯೆಯ ದಿನದಿಂದ ಮುಂದಿನ ಅಮಾವಾಸ್ಯೆಯ ದಿನದ ತನಕ ಒಂದು ತಿಂಗಳು ಎಂದು ಪರಿಗಣಿಸಲಾಗುತ್ತದೆ.
Advertisement
ಇಂತಹ 12 ತಿಂಗಳು ಸೇರಿ ಒಂದು ವರ್ಷ. ಈ ವ್ಯವಸ್ಥೆಯ ಪ್ರಕಾರ ವರ್ಷದಲ್ಲಿ 354 ದಿನಗಳಿವೆ. ಇದು ಸೌರಮಾನ ಮತ್ತು ಚಾಂದ್ರಮಾನ ವರ್ಷಗಳ ನಡುವೆ 11 ದಿನಗಳ ಕೊರತೆಗೆ ಕಾರಣವಾಗುತ್ತದೆ. ಆದ್ದರಿಂದ ಮೂರು ವರ್ಷಗಳಿಗೊಮ್ಮೆ, ವ್ಯತ್ಯಾಸವು 1 ತಿಂಗಳಿಗೆ ಸಮನಾಗಿರುವಾಗ ಒಂದು ತಿಂಗಳನ್ನು ಹೆಚ್ಚಾಗಿ ಸೇರಿಸಿ, ಆ ತಿಂಗಳನ್ನು ‘ಚಂದ್ರ ಅಧಿಕ ಮಾಸ’ ಎಂದು ಕರೆದು ಸೌರಮಾನ ವರ್ಷಕ್ಕೆ ಸೇರಿಸಲಾಗುತ್ತದೆ. ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಬಂದು ದಿನಗಳು ಹೊಂದಾಣಿಕೆಯಾಗುತ್ತವೆ. ಇದನ್ನೂ ಓದಿ: ಮರೆಯದಂಥ ಸವಿಸವಿ ಗಳಿಗೆ ತಂದಿತು ʻಯುಗಾದಿʼ
ಚಾಂದ್ರಮಾನವರ್ಷ ಚೈತ್ರ ಶುಕ್ಲ ಪ್ರಥಮೆಯ ದಿವಸ ಪ್ರಾರಂಭವಾಗುತ್ತದೆ. ಅಲ್ಲಿಂದ ಕ್ರಮವಾಗಿ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶೀರ್ಷ, ಪುಷ್ಯ, ಮಾಘ, ಫಾಲ್ಗುಣ ಎಂಬ ಹನ್ನೆರಡು ಚಾಂದ್ರಮಾನ ಮಾಸಗಳು ಕ್ರಮವಾಗಿ ಬಂದು ಮತ್ತೆ ಚೈತ್ರಮಾಸ ಬರುತ್ತದೆ. ಈ ಹನ್ನೆರಡು ತಿಂಗಳುಗಳ ಕಾಲಕ್ಕೆ ಒಂದು ಚಾಂದ್ರಮಾನವರ್ಷವೆಂದು ಹೆಸರು. ಈ ವರ್ಷಗಳನ್ನು ಪ್ರಭವ, ವಿಭವ ಮೊದಲಾದ ಅರುವತ್ತು ಸಂವತ್ಸರಗಳ ಹೆಸರುಗಳಿಂದ ಕರೆಯುತ್ತಾರೆ.
ಸೌರಮಾನ ಯುಗಾದಿ
ಸೂರ್ಯನ ಮೇಷಾದಿ ಹನ್ನೆರಡು ರಾಶಿಚಕ್ರದಲ್ಲಿ ಸಂಚರಿಸುವ ಕಾಲವನ್ನು ಪರಿಗಣಿಸಿದ ಪದ್ಧತಿ ಸೌರಮಾನವಾಗಿದೆ. ಒಂದು ವರ್ಷಕ್ಕೆ 364 ¼ ದಿನಗಳು ಬರುತ್ತವೆ. ಇದನ್ನು ಸಂವತ್ಸರ ಎನ್ನುತ್ತಾರೆ. ಭೂಮಿಯು ಸೂರ್ಯನ ಸುತ್ತ ಚಲಿಸುವುದು ಎಲ್ಲರಿಗೂ ತಿಳಿದಿರುವ ವಿಷಯ. ಸೂರ್ಯ ಮತ್ತು ಚಂದ್ರನ ಕಕ್ಷೆಯಲ್ಲಿ 27 ನಕ್ಷತ್ರಗಳಿವೆ. ಸೂರ್ಯ ಮತ್ತು ಚಂದ್ರ ಕಕ್ಷೆಯಲ್ಲಿ ಎರಡೂವರೆ ನಕ್ಷತ್ರಗಳ ಅಂತರವನ್ನು ಸರಿದೂಗಿಸಲು ತೆಗೆದುಕೊಳ್ಳುವ ಸಮಯವನ್ನು ರಾಶಿ ಎಂದು ಪರಿಗಣಿಸಲಾಗುತ್ತದೆ. ಸೂರ್ಯನ ಮೇಷಾದಿ ಹನ್ನೆರಡು ರಾಶಿಚಕ್ರದಲ್ಲಿ ಸಂಚರಿಸುವ ಕಾಲವನ್ನಾಧರಿಸಿದ ಪದ್ಧತಿ ಸೌರಮಾನವಾಗಿದೆ. ಒಂದು ವರ್ಷಕ್ಕೆ. 364 ¼ ದಿನಗಳು ಬರುತ್ತವೆ. ಇದನ್ನು ಸಂವತ್ಸರ ಎನ್ನುತ್ತಾರೆ.
ಒಂದು ನಕ್ಷತ್ರದ ಅಂತರವನ್ನು ಸರಿದೂಗಿಸಲು ಸೂರ್ಯ ಸುಮಾರು ಹದಿಮೂರು ದಿನಗಳನ್ನು ತೆಗೆದುಕೊಂಡರೆ ಒಂದು ರಾಶಿಯನ್ನು ಆವರಿಸಲು ಸೂರ್ಯ 30 ಅಥವಾ 31 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಕೊನೆಯಲ್ಲಿ ಸೂರ್ಯ ಮತ್ತೊಂದು ನಕ್ಷತ್ರಕ್ಕೆ ದಾಟುತ್ತಾನೆ. ಆ ದಾಟುವ ಸಮಯವನ್ನು ‘ಸಂಕ್ರಮಣ’ ಎಂದು ಕರೆಯಲಾಗುತ್ತದೆ. ಈ ರೀತಿ, ಸೂರ್ಯ ಈ ಹನ್ನೆರಡು ರಾಶಿಗಳನ್ನು ದಾಟಲು 364 ¼ ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯ,ರೇವತಿ ನಕ್ಷತ್ರದಿಂದ ಅಶ್ವಿನಿ ನಕ್ಷತ್ರಕ್ಕೆ ದಾಟಿದ ಮರುದಿನವನ್ನು ಹೊಸ ವರ್ಷದ ದಿನವೆಂದು ಕರೆಯಲಾಗುತ್ತದೆ. ಇದನ್ನೂ ಓದಿ: ಪ್ರಕೃತಿಯ ರಮ್ಯಚೈತ್ರ ಕಾಲವೇ ‘ಯುಗಾದಿ’
ಏನಿದು ವಿಷು ಕಣಿ?
ಕರ್ನಾಟಕದ ಕರಾವಳಿ, ಕೇರಳದಲ್ಲಿ (Kerala) ಸೂರ್ಯಮಾನ ಯುಗಾದಿಯಂದು ವಿಷು ಕಣಿ (Vishu Kani) ಇಡಲಾಗುತ್ತದೆ. ವಿಷು ಹಬ್ಬದ ಹಿಂದಿನ ದಿನ ಸಂಜೆ ತರಕಾರಿ ಹೂವು ಹಣ್ಣುಗಳನ್ನು ದೇವರ ಮುಂದಿಟ್ಟು, ಒಂದು ಕನ್ನಡಿಯನ್ನು ಇಡುತ್ತಾರೆ. ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ನೋಡುತ್ತಾರೆ. ಇದನ್ನೇ ವಿಷು ಕಣಿ ಎನ್ನುತ್ತಾರೆ. ವರ್ಷದ ಮೊದಲ ದಿನ ಈ ಕಣಿಯನ್ನು ನೋಡಿದರೆ ವರ್ಷಪೂರ್ತಿ ಸಮೃದ್ಧಿ, ಸಂಪತ್ತು ಮತ್ತು ಸಂತೋಷ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.