ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗುತ್ತೆ: ಗಡ್ಕರಿ

Public TV
2 Min Read
petrol diesel gadkari bio

ನವದೆಹಲಿ: ಎಥೆನಾಲ್ ಘಟಕಗಳು ದೇಶದಲ್ಲಿ ಆರಂಭಗೊಂಡ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಛತ್ತೀಸ್‍ಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಟ್ಟಾರೆ 5 ಎಥೆನಾಲ್ ಉತ್ಪಾದನಾ ಘಟಕಗಳನ್ನು ಕೇಂದ್ರ ಸರ್ಕಾರ ತೆರೆಯಲಿದ್ದು, ಇವುಗಳು ಕಾರ್ಯಾರಂಭ ಮಾಡಿದ ಬಳಿಕ ದೇಶದಲ್ಲಿ ತೈಲ ಬೆಲೆ ಇಳಿಕೆಯಾಗಲಿದೆ ಎಂದರು. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ಪರ್ಮಿಟ್ ಇಲ್ಲ: ನಿತಿನ್ ಗಡ್ಕರಿ

ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಿಂದ ಘಟಕದಲ್ಲಿ ಇಂಧನವನ್ನು ಉತ್ಪತ್ತಿ ಮಾಡಲಾಗುತ್ತದೆ. ಭತ್ತ ಹಾಗೂ ಗೋಧಿಯ ಹುಲ್ಲು, ಕಬ್ಬು ಇನ್ನಿತರ ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡಬಹುದಾಗಿದೆ ಎಂದು ಹೇಳಿದರು. ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

ಎಥೆನಾಲ್, ಮೆಥೆನಾಲ್, ಬಯೋ ಇಂಧನ ಮತ್ತು ಸಿಎನ್‍ಜಿ ಬಳಕೆ ಹೆಚ್ಚಾದಂತೆ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇದರಿಂದಾಗಿ ತೈಲ ಬೆಲೆ ಇಳಿಕೆಯಾಗಲಿದೆ. ಛತ್ತೀಸ್‍ಗಢದಲ್ಲಿ ತೆರೆಯಲಾದ ಜತ್ರೋಪಾ ಘಟಕದಿಂದ ಉತ್ಪಾದನೆಯಾದ ಜೈವಿಕ ಇಂಧನವನ್ನು ಬಳಸಿ ಇದೇ ಮೊದಲ ಬಾರಿಗೆ ದೇಶದಲ್ಲಿ ವಿಮಾನವನ್ನು ಹಾರಿಸಲಾಗಿದೆ ಎಂದು ಈ ವೇಳೆ ತಿಳಿಸಿದರು. ಇದನ್ನೂ ಓದಿ:  2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

ನಾವು 8 ಲಕ್ಷ ಕೋಟಿ ರೂ. ಮೌಲ್ಯದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆಮದು ಮಾಡಿಕೊಳ್ಳುತ್ತಿದ್ದು, ತೈಲ ಬೆಲೆ ಮತ್ತಷ್ಟು ಏರಿಕೆಯಾಗುತ್ತಿದೆ. ಇದರಿಂದಾಗಿ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ. ರೈತರು, ಆದಿವಾಸಿಗಳ ಸಹಾಯದಿಂದ ಎಥೆನಾಲ್, ಮೆಥೆನಾಲ್, ಬಯೋ- ಇಂಧನವನ್ನು ತಯಾರಿಸಬಹುದು. ಇವುಗಳನ್ನು ವಿಮಾನ ಹಾರಾಟಕ್ಕೂ ಬಳಸಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

ಕಳೆದ ಸೋಮವಾರ ಜೈವಿನ ಇಂಧನ ಬಳಸಿದ್ದ ಸ್ಪೈಸ್ ಜೆಟ್ ವಿಮಾನ ಡೆಹ್ರಾಡೂನ್‍ನಿಂದ ಹೊರಟು ದೆಹಲಿಗೆ ಬಂದಿಳಿದಿತ್ತು. ಈ ವಿಮಾನದಲ್ಲಿ ಶೇ. 75 ಜೆಟ್ ಇಂಧನ ಹಾಗೂ ಶೇ. 25 ಜೈವಿಕ ಇಂಧನ ಬಳಸಲಾಗಿತ್ತು. ಸ್ಪೈಸ್ ಜೆಟ್‍ನ ಬೊಂಬಾರ್ಡಿಯರ್ ಕ್ಯೂ400 ವಿಮಾನವನ್ನು ಈ ಪ್ರಯೋಗಕ್ಕೆ ಬಳಸಲಾಗಿತ್ತು. ಪ್ರಸ್ತುತ ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ವಿಮಾನಗಳು ಜೈವಿಕ ಇಂಧನವನ್ನು ಬಳಸುತ್ತಿವೆ. ಇದನ್ನೂ ಓದಿ: ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಇನ್ನೂ ಬಂದಿಲ್ಲ ಯಾಕೆ? ಸರ್ಕಾರಗಳ ನಿಲುವು ಏನು?

spice jet Jatropha 2

spice jet Jatropha

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *