– ಲಾರಿ ಮುಷ್ಕರಕ್ಕೆ ಖಾಸಗಿ ಬಸ್ ಮಾಲೀಕರ ಸಾಥ್
ಬೆಂಗಳೂರು: ಈ ವರ್ಷ ಆರಂಭದಿಂದಲೂ ನಿತ್ಯ ಜೇಬಿಗೆ ಹೊರೆಯಾಗುವ ಶಾಕಿಂಗ್ ಸುದ್ದಿಗಳೇ ಕೇಳಿಬರುತ್ತಿವೆ. ನಿತ್ಯ ಒಂದಲ್ಲ ಒಂದು ದರ ಏರಿಕೆಯಿಂದ ಕಂಗೆಟ್ಟಿದ್ದ ಜನಕ್ಕೆ ಈಗ ಮತ್ತೊಂದು ಸರದಿ. ಡೀಸೆಲ್ ದರ ಏರಿಕೆಯಾದ (Diesel Price Hike) ಬೆನ್ನಲ್ಲೇ ಖಾಸಗಿ ಬಸ್ ಪ್ರಯಾಣ ದರ ಕೂಡ ಏರಿಕೆಯಾಗಲಿದೆ.
ಡೀಸೆಲ್ ದರ ಏರಿಕೆ ಮಾಡಿ ಸರ್ಕಾರದ ವಿರುದ್ಧ ವಾಣಿಜ್ಯ ವಾಹನಗಳು ಸಮರ ಸಾರಿವೆ. ಏ.15ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಮುಂದಾಗಿವೆ. ಈ ಮಧ್ಯೆ ಈ ಮುಷ್ಕರಕ್ಕೆ ಖಾಸಗಿ ಬಸ್ (Private Bus) ಮಾಲೀಕರು ಕೂಡ ಬೆಂಬಲ ಸೂಚಿಸಿದ್ದಾರೆ. ಮುಷ್ಕರಕ್ಕೆ ಬೆಂಬಲ ಸೂಚಿಸುವುದರ ಜೊತೆಗೆ ಪ್ರಯಾಣ ದರ ಏರಿಕೆಗೂ ಕೂಡ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಅನ್ನು 104% ಹೆಚ್ಚಿಸಿದ ಅಮೆರಿಕ
ಪ್ರತಿ ಸ್ಟೇಜ್‌ಗೂ 2 ರೂ.ನಂತೆ 15%ರಷ್ಟು ದರ ಏರಿಕೆಗೆ ನಿರ್ಧಾರ ಮಾಡಿವೆ. ಅದರಂತೆ ಮುಷ್ಕರ ಆರಂಭವಾದ ದಿನದಿಂದಲೇ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಎಸಿ, ನಾನ್‌ಎಸಿ, ಸ್ಲೀಪರ್ ಬಸ್‌ಗಳಲ್ಲಿ ದರ ಏರಿಕೆಯಾಗಲಿದೆ. ಈಗಾಗಲೇ ಡೀಸೆಲ್ ದರ, ಬಿಡಿ ಭಾಗಗಳ ದರ, ಟೈರ್ ದರಗಳ ಹೆಚ್ಚಳ ಸೇರಿದಂತೆ ಎಲ್ಲಾ ದರ ಏರಿಕೆ ಕಾರಣ ದರೇರಿಕೆ ಮಾಡದೇ ಬೇರೆ ಆಯ್ಕೆಯೇ ಇಲ್ಲ ಎಂಬ ನಿರ್ಧಾರಕ್ಕೆ ಖಾಸಗಿ ಬಸ್ ಮಾಲೀಕರು ಬಂದಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಆರೋಪ – ಪತ್ನಿ ಆತ್ಮಹತ್ಯೆ, ಪತಿ ಅರೆಸ್ಟ್, 7 ಮಂದಿ ವಿರುದ್ಧ FIR
ರಾಜ್ಯಾದ್ಯಂತ ಒಟ್ಟು 14,000 ಖಾಸಗಿ ಬಸ್‌ಗಳು ನಿತ್ಯ ಓಡಾಟ ಮಾಡುತ್ತಿವೆ. ಬೆಂಗಳೂರಿನಲ್ಲೇ ಎರಡೂವರೆ ಸಾವಿರ ವಾಹನ ಓಡಾಟ ಮಾಡುತ್ತವೆ. ಅಲ್ಲದೇ ವಿಕೇಂಡ್‌ಗಳಲ್ಲಿ ಸಾವಿರಾರು ಸಂಖ್ಯೆಯ ಜನ ಬೆಂಗಳೂರಿನಿಂದ ಹೊರ ಹೋಗಲು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದ ಹಲವು ಕಡೆ ಈಗಲೂ ಕೂಡ ಖಾಸಗಿ ಬಸ್‌ಗಳೇ ಪ್ರಮುಖ ಸಾರಿಗೆ. ಸದ್ಯದ ದರ ಏರಿಕೆ ಆಯಾ ಗ್ರಾಮೀಣ ಪ್ರದೇಶಗಳ ಜನರ ಮೇಲೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತದ ಉದ್ಯಮಿಗೆ ಅಮೆರಿಕದಲ್ಲಿ ಕಹಿ ಅನುಭವ – ಏರ್‌ಪೋರ್ಟ್‌ನಲ್ಲಿ 8 ಗಂಟೆ ಕೂರಿಸಿದ ಆರೋಪ
ಬೆಂಗಳೂರಿನಿಂದ ಯಾವ ಭಾಗಕ್ಕೆ ಎಷ್ಟು ದರ?
ಬೆಂಗಳೂರು ಟು ಹುಬ್ಬಳ್ಳಿ:
ಈಗಿನ ದರ – 1,000 ರೂ.
ಸಾಮಾನ್ಯ ದಿನ ದರ – 1,200 ರೂ.
ವಾರಾಂತ್ಯ ದರ – 1,500 ರೂ.
ಬೆಂಗಳೂರು ಟು ಬೆಳಗಾವಿ:
ಈಗಿನ ದರ – 1,200ರೂ.
ಸಾಮಾನ್ಯ ದಿನ ದರ – 1,400 ರೂ.
ವಾರಾಂತ್ಯ ದರ – 1,600 ರೂ.
ಬೆಂಗಳೂರು ಟು ಕಲಬುರಗಿ:
ಈಗಿನ ದರ – 1,200 ರೂ.
ಸಾಮಾನ್ಯ ದಿನ ದರ – 1,400 ರೂ.
ವಾರಾಂತ್ಯ ದರ- 1,600 ರೂ.
ಬೆಂಗಳೂರು ಟು ಮಂಗಳೂರು:
ಈಗಿನ ದರ – 1,000 ರೂ.
ಸಾಮಾನ್ಯ ದಿನ ದರ – 1,400 ರೂ.
ವಾರಾಂತ್ಯ ದರ – 1,600 ರೂ.
ಬೆಂಗಳೂರು ಟು ಬಳ್ಳಾರಿ:
ಈಗಿನ ದರ – 700 ರೂ.
ಸಾಮಾನ್ಯ ದಿನ ದರ- 1,000 ರೂ.
ವಾರಾಂತ್ಯ ದರ – 1,200 ರೂ.
ಬೆಂಗಳೂರು ಟು ಶಿವಮೊಗ್ಗ:
ಈಗಿನ ದರ – 750 ರೂ.
ಸಾಮಾನ್ಯ ದಿನ ದರ – 1,000 ರೂ.
ವಾರಾಂತ್ಯ ದರ – 1,200 ರೂ.