ಬೆಂಗಳೂರು: ಕರ್ನಾಟಕದಲ್ಲಿ ಮತದಾನ ಮುಗಿಯುತ್ತಿದ್ದಂತೆ ನಿರೀಕ್ಷೆಯಂತೆ ಪೆಟ್ರೋಲ್, ಡೀಸೆಲ್ ಬೆಲೆಗಳು ಹೆಚ್ಚಳವಾಗಿವೆ.
ತೈಲ ಕಂಪನಿಗಳು ಲೀಟರ್ ಪೆಟ್ರೋಲ್‍ಗೆ 17 ಪೈಸೆ, ಡೀಸೆಲ್‍ಗೆ 21 ಪೈಸೆಯಷ್ಟು ಹೆಚ್ಚಿಸಿವೆ. ದಿನಂಪ್ರತಿ ಬೆಲೆ ಏರಿಳಿಕೆ ಮಾಡೋ ನಿಯಮವಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದುಬಾರಿ ಮತ್ತು ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿದ್ದರೂ ಏಪ್ರಿಲ್ 24ರಿಂದ ಭಾನುವಾರದವರೆಗೆ ದರ ಏರಿಕೆ ಮಾಡಿರಲಿಲ್ಲ. ಇದನ್ನೂ ಓದಿ: ಎಲೆಕ್ಷನ್ ರಿಸಲ್ಟ್ ಬಿಸಿಯ ಮಧ್ಯೆ ಕರೆಂಟ್ ಶಾಕ್!
Advertisement
ಗುಜರಾತ್ ಚುನಾವಣೆ ವೇಳೆಯೂ ಇದೇ ತಂತ್ರ ಅನುಸರಿಸಲಾಗಿತ್ತು. ಮೂಲಗಳ ಪ್ರಕಾರ ಪೆಟ್ರೋಲ್ ಲೀಟರ್‍ಗೆ 3 ರೂಪಾಯಿಯಷ್ಟು, ಡೀಸೆಲ್ 1 ರೂಪಾಯಿ 50 ಪೈಸೆಯಷ್ಟು ದುಬಾರಿಯಾಗಲಿದೆ. ವಿಚಿತ್ರ ಅಂದ್ರೆ ಆಗಸ್ಟ್ 1, 2013ರಂದು ಪೆಟ್ರೋಲ್ ಬೆಲೆ 74 ರೂಪಾಯಿ 10 ಪೈಸೆ, ಡೀಸೆಲ್ ಬೆಲೆ ಮೇ 13, 2014ರಂದು 56 ರೂಪಾಯಿ 71 ಪೈಸೆಯಷ್ಟಿತ್ತು. ಇಂದು ಪ್ರತಿ ಲೀಟರ್ ಗೆ 76.01 ಇದೆ.