ಗದಗ: 6 ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಪ್ರಾಣಬಿಟ್ಟ ವ್ಯಕ್ತಿ ಅಂತ್ಯಕಿಯೆ ವೇಳೆ ಉಸಿರಾಟಿ ಕಣ್ತೆರೆದ ಘಟನೆ ಗದಗ (Gadag) ಜಿಲ್ಲೆಯ ಬೆಟಗೇರಿಯಲ್ಲಿ (Betageri) ನಡೆದಿದೆ.
ವ್ಯಕ್ತಿಯನ್ನು ಬೆಟಗೇರಿ ನಿವಾಸಿ 38 ವರ್ಷದ ನಾರಾಯಣ ಹೊನ್ನಲ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ನನ್ನ ಹೆಸರಿನಲ್ಲಿ ಬರೋ ಕರೆಗೆ ಮೋಸ ಹೋಗಬೇಡಿ: ಅಭಿಮಾನಿಗಳಿಗೆ ರುಕ್ಮಿಣಿ ಮನವಿ
ನಾರಾಯಣ ಅವರು ಪಿತ್ತಕೋಶದ ಸಮಸ್ಯೆಯಿಂದ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 6 ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ನಾರಾಯಣ ಸಾವನ್ನಪ್ಪಿದ್ದರು. ಬಳಿಕ ಕುಟುಂಬಸ್ಥರು ಗದಗ ಜಿಲ್ಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೇ ಗದಗ-ಬೆಟಗೇರಿಯಲ್ಲಿ ಶ್ರದ್ಧಾಂಜಲಿಯ ಬ್ಯಾನರ್ ಕೂಡ ಕಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ಬಂಧು ಭಾಂದವರು ಸಹ ಬಂದಿದ್ದರು.
ನಾರಾಯಣ ಅವರ ದೇಹವನ್ನು ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮೂಲಕ ಮನೆಗೆ ತಂದಿದ್ದಾರೆ. ಆದರೆ ಮನೆಗೆ ಬರುತ್ತಿದ್ದಂತೆ ನಾರಾಯಣ ಅವರು ಮತ್ತೆ ಉಸಿರಾಡಿ, ಕಣ್ಣು ಬಿಟ್ಟಿದ್ದಾರೆ. ಇದನ್ನು ಕಂಡು ಕುಟುಂಬಸ್ಥರು ಆಶ್ಚರ್ಯವಾಗಿದ್ದಾರೆ. ಕೂಡಲೇ ಬೆಟಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. ಆದರೆ ಈಗ ಮತ್ತೆ ಹುಟ್ಟಿ ಬಾ, ಆತ್ಮಕ್ಕೆ ಶಾಂತಿ ಸಿಗಲಿ, ರಿಪ್, ಭಾವಪೂರ್ಣ ಶ್ರದ್ಧಾಂಜಲಿ ಅಂತೆಲ್ಲಾ ಹಾಕಿದ್ದ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಇದನ್ನು ಕಂಡ ಸ್ಥಳೀಯರು ಇದು ದೇವರ ಪವಾಡವೇ ಅಂತಿದ್ದಾರೆ. ಬೇಗ ಗುಣಮುಖರಾಗಿ ಬರಲಿ ಎಂದು ಕುಟುಂಬಸ್ಥರು, ಸ್ನೇಹಿತರು, ಬಂದು ಬಾಂಧವರು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.ಇದನ್ನೂ ಓದಿ: ಭಾರತಕ್ಕೆ ಕೌಂಟರ್ ಕೊಡಲು ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸಿದೆ: ಮಾಜಿ ಸಿಐಎ ಅಧಿಕಾರಿ

