ರಾಯ್ಪುರ: ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರ ಹೆಸರು ಮಹದೇವ ಬೆಟ್ಟಿಂಗ್ ಆಪ್‍ನಲ್ಲಿ ಕೇಳಿ ಬಂದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಛತ್ತೀಸ್‍ಗಢದ Chhattisgarh) ದುರ್ಗ್‍ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್ ಅಕ್ರಮ ಹಣವನ್ನು ಬಳಸುತ್ತಿದೆ. ಅವರು ಮಹಾದೇವನ (Mahadev Betting App) ಹೆಸರನ್ನು ಸಹ ಬಿಡಲಿಲ್ಲ. ಚುನಾವಣಾ ಪ್ರಚಾರಕ್ಕಾಗಿ ಅಕ್ರಮ ಬೆಟ್ಟಿಂಗ್ ಆಪರೇಟರ್ ಗಳು ತಂದ ಹವಾಲಾ ಹಣವನ್ನು ಕಾಂಗ್ರೆಸ್ ಬಳಸುತ್ತಿದೆ ಎಂದು ಆರೋಪಿಸಿದರು.
ನಾವು ಹೇಳಿದ್ದನ್ನು ಮಾಡುತ್ತೇವೆ. ಛತ್ತೀಸ್‍ಗಢವನ್ನು ಬಿಜೆಪಿ ರೂಪಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಆದರೆ ಕಾಂಗ್ರೆಸ್ ಪಕ್ಷದ ‘ಝೂತ್ ಕಾ ಪುಲಿಂದಾ’ ಬಿಜೆಪಿಯ ಮುಂದೆ ನಿಂತಿದೆ. ‘ಸಂಕಲ್ಪ ಪತ್ರ’ ಭ್ರಷ್ಟಾಚಾರದ ಮೂಲಕ ತನ್ನ ಬೊಕ್ಕಸವನ್ನು ತುಂಬಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಆದ್ಯತೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರು ಮಹಾದೇವನ ಹೆಸರನ್ನು ಸಹ ಬಿಡಲಿಲ್ಲ. ಎರಡು ದಿನಗಳ ಹಿಂದೆ ರಾಯ್‍ಪುರದಲ್ಲಿ ಭಾರೀ ಕಾರ್ಯಾಚರಣೆ ನಡೆದಿತ್ತು. ಅಪಾರ ಪ್ರಮಾಣದ ಕರೆನ್ಸಿ ನೋಟು ಪತ್ತೆಯಾಗಿದೆ. ಈ ಹಣ ಜೂಜುಕೋರರು ಮತ್ತು ಬೆಟ್ಟಿಂಗ್ ಕಟ್ಟುವವರದ್ದು ಎಂದು ಜನರು ಹೇಳುತ್ತಾರೆ ಎಂದು ಮೋದಿ (Narendra Modi) ಟಾಂಗ್ ನೀಡಿದರು. ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್‌ನಿಂದ ಛತ್ತೀಸ್‌ಗಢ ಸಿಎಂಗೆ 508 ಕೋಟಿ ಲಂಚ
ಹಗಲಿರುಳು ಎನ್ನದೇ ಕಾಂಗ್ರೆಸ್ (Congress) ಪಕ್ಷ ಮೋದಿಯನ್ನು ನಿಂದಿಸುತ್ತದೆ. ಈಗ ಮುಖ್ಯಮಂತ್ರಿಗಳು ದೇಶದ ತನಿಖಾ ಸಂಸ್ಥೆಗಳನ್ನೂ ನಿಂದಿಸಲು ಪ್ರಾರಂಭಿಸಿದ್ದಾರೆ. ಆದರೆ ಮೋದಿಯು ಈ ನಿಂದನೆಗಳಿಗೆ ಹೆದರುವುದಿಲ್ಲ ಎಂದು ಛತ್ತೀಸ್‍ಗಢದ ಜನರಿಗೆ ನಾನು ಹೇಳಲು ಬಯಸುತ್ತೇನೆ. ಭ್ರಷ್ಟರನ್ನು ಎದುರಿಸಲು ನೀವು ಮೋದಿಯನ್ನು ದೆಹಲಿಗೆ ಕಳುಹಿಸಿದ್ದೀರಿ ಎಂದು ತಿಳಿಸಿದರು.
ಛತ್ತೀಸ್‍ಗಢವನ್ನು ಲೂಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ಭ್ರಷ್ಟ ಸರ್ಕಾರವು ಒಂದರ ನಂತರ ಒಂದರಂತೆ ನಿಮ್ಮ ನಂಬಿಕೆಯನ್ನು ಮುರಿದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಮತ್ತೊಮ್ಮೆ ಇಂತಹ ಹಗರಣಗಳ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸಿ ಲೂಟಿ ಮಾಡಿದವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದರು.
ಛತ್ತೀಸ್‍ಗಢ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹಾಲಿ ಕಾಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮಹಾದೇವ್ ಬೆಟ್ಟಿಂಗ್ ಆಪ್‍ನ ಅಕ್ರಮದ ಸುಳಿಗೆ ಬಿದ್ದಿದ್ದಾರೆ. ಮಹದೇವ್ ಬೆಟ್ಟಿಂಗ್ ಆಪ್ ಪ್ರವರ್ತಕರು ಇಲ್ಲಿಯವರೆಗೆ ಬಘೇಲ್ ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಎಂದು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಹೇಳಿದೆ.