ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಇರಾಕಿ ಸರ್ವಾಧಿಕಾರಿ ಸದ್ದಾಂ ಹುಸೇನ್ ರೀತಿ ವರ್ತಿಸುತ್ತಿದ್ದಾರೆ ಎಂದು ಬಾಲಿವುಡ್ ನಟ ವಿವೇಕ್ ಓಬೇರಾಯ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.
ದೀದಿ ಕೈಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅವರು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರನ್ನು ವಿವೇಕ್ ಸದ್ದಾಂ ಹುಸೇನ್ ಅವರಿಗೆ ಹೋಲಿಕೆ ಮಾಡಿದ್ದಾರೆ. ಈ ಹಿಂದೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ವಿವೇಕ್ ಪ್ರತಿಕ್ರಿಯಿಸಿ ಒಬ್ಬ ಹಿರಿಯ ನಟ ಹಾಗೂ ರಾಜಕಾರಣಿಯಾಗಿ ಈ ರೀತಿ ಹೇಳಿಕೆಗಳನ್ನು ನೀಡಿವುದು ಶೋಭೆಯಲ್ಲ. ಇದು ತಪ್ಪು ಎಂದು ಕಿಡಿಕಾರಿದ್ದರು. ಇದಾದ ಬಳಿಕ ಈಗ ದೀದಿಗೆ ಸಖತ್ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್
Advertisement
Advertisement
ಟ್ವೀಟ್‍ನಲ್ಲಿ ಏನಿದೆ?
ಗೌರವಾನುತ ಮಹಿಳೆ ದೀದಿ ಅವರು ಸದ್ದಾಂ ಹುಸೇನ್ ರೀತಿ ಏಕೆ ವರ್ತಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ವಿಪರ್ಯಾಸವೆಂದರೆ ಸರ್ವಾಧಿಕಾರಿ ರೀತಿ ಆಡುತ್ತಿರುವ ದೀದಿಯಿಂದಲೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೊದಲು ಪ್ರಿಯಾಂಕಾ ಶರ್ಮಾ ಈಗ ತಜೀಂದ್ರಬಗ್ಗಾ. ಇಲ್ಲಿ ದೀದಿಗಿರಿ ನಡೆಯಲ್ಲ ಎಂದು ಬರೆದು ಬಂಗಾಳವನ್ನು ರಕ್ಷಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಿ, ಫ್ರೀ ತಜೀಂದ್ರಬಗ್ಗಾ ಎಂದು ಹ್ಯಾಷ್‍ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ.
Advertisement
I can’t understand why a respected lady like Didi is behaving like Saddam Hussain! Ironically, democracy is under threat and in danger by Dictator Didi herself. First #PriyankaSharma & now #TajinderBagga. यह दीदीगिरी नही चलेगी ! #SaveBengalSaveDemocracy #FreeTajinderBagga pic.twitter.com/oRq596aljH
— Vivek Anand Oberoi (@vivekoberoi) May 15, 2019
Advertisement
ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ರ‍್ಯಾಲಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಟ್ವೀಟ್ ಮಾಡಿ ಈ ಬಗ್ಗೆ ಬಿಜೆಪಿಯ ಐಟಿ ಸೆಲ್ಸ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಹಲವಾರು ಬಿಜೆಪಿ ನಾಯಕರನ್ನು ಬಂಧಿಸಿರುವುದನ್ನು ದೃಢಪಡಿಸಿದ್ದು, ಈ ವಿಚಾರ ರಾಜಕೀಯವಾಗಿ ಪ್ರೇರೆಪಿಸಲ್ಪಟ್ಟಿದೆ ಮತ್ತು ಕಾನೂನು ಬಾಹಿರವೆಂದು ಆರೋಪಿಸಿದ್ದಾರೆ.
Mamata Banerjee ordered a midnight crack down on several BJP leaders in Kolkata, who were picked up in the middle of night, without due process of law being followed. Tajinder Bagga and several others are now in TMC’s illegal detention. #SaveBengalSaveDemocracy #FreeTajinderBagga
— Amit Malviya (@amitmalviya) May 15, 2019