ನವದೆಹಲಿ: ಒಂದೇ ರೈಲಿನಲ್ಲಿ 500 ಕಿ.ಮೀ ಗಿಂತಲೂ ಅಧಿಕ ದೀರ್ಘ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಿದೆ.
ಪ್ರಯಾಣಿಕರು ರೈಲಿನಲ್ಲಿ ನಿರಂತರ ಪ್ರಯಾಣ ಕೈಗೊಂಡಿದ್ದರೆ ಅವರು ಮಧ್ಯದಲ್ಲಿ ಒಂದೆರಡು ದಿನ ವಿಶ್ರಾಂತಿ ಪಡೆದು, ನಂತರ ಪ್ರಯಾಣವನ್ನು ಮುಂದುವರಿಸಲು ಅವಕಾಶವಿದೆ. ಪ್ರಯಾಣಿಕರು ತಾವು ಪ್ರಯಾಣ ಮಾಡುವ ಮಾರ್ಗದ ಯಾವುದೇ ನಿಲ್ದಾಣದಲ್ಲಿ ಬೇಕಾದರೂ ಬ್ರೇಕ್ ಪಡೆಯಬಹುದು. ಆದ್ರೆ ರಾಜಧಾನಿ, ಶತಾಬ್ಧಿ, ಜನಶತಾಬ್ಧಿ ಎಕ್ಸ್ ಪ್ರೆಸ್ ರೈಲುಗಳಲ್ಲಿ ಮಾತ್ರ ಈ ಸೌಲಭ್ಯವಿದೆ.
ಸೌಲಭ್ಯಗಳು ಮತ್ತು ಷರತ್ತುಗಳು:
* ಪ್ರಯಾಣಿಕರು ಆರಂಭಿಕ ನಿಲ್ದಾಣದಿಂದ 500 ಕಿ.ಮೀ ಪ್ರಯಾಣಿಸಿದ ಬಳಿಕ ಮಾತ್ರ ಮಧ್ಯ ಬ್ರೇಕ್ ಪಡೆಯಲು ಸಾಧ್ಯವಾಗುತ್ತದೆ.
* ಒಂದು ವೇಳೆ ಸುಮಾರು 1000 ಕಿ.ಮೀಗಿಂತ ಅಧಿಕ ದೂರ ಪ್ರಯಾಣದ ಟಿಕೆಟ್ ಪಡೆದಿದ್ದರೆ, ಎರಡು ಬ್ರೇಕ್ ಪಡೆಯುವ ಅವಕಾಶವಿದೆ. ಯಾವ ಮಾರ್ಗದ ಯಾವ ನಿಲ್ದಾಣದಲ್ಲಿ ಬ್ರೇಕ್ ಪಡೆದಿರುತ್ತೀರೋ, ಅಲ್ಲಿಂದಲೇ ಮತ್ತೆ ಪ್ರಯಾಣ ಆರಂಭಿಸಬೇಕು.
* 600 ಕಿ.ಮೀ ದೂರುದ ಒಂದು ಟಿಕೆಟ್ ಪಡೆದಿದ್ದರೆ ಅವರು ಸುಮಾರು 501 ಕಿ.ಮೀ ದೂರ ಪ್ರಯಾಣ ಮಾಡಿದ ನಂತರ ಬ್ರೇಕ್ ಪಡೆಯಬಹುದು. ಆದರೆ ಅವರಿಗೆ ಎರಡು ದಿನ ಮಾತ್ರದ ಬ್ರೇಕ್ ತೆಗೆದುಕೊಳ್ಳುವ ಅವಕಾಶವಿದೆ.
* 1050 ಕಿ.ಮೀ ಪ್ರಯಾಣಿಸಲು ಟಿಕೆಟ್ ಪಡೆದಿದ್ದರೂ, 400 ಕಿಮೀ ಹಾಗೂ 800 ಕಿ.ಮೀ ಬಳಿಕ ಎರಡು ಬ್ರೇಕ್ ಪಡೆಯಬೇಕು ಎಂದುಕೊಂಡಿದ್ದರೆ ಅದು ಅಸಾಧ್ಯ. 800 ಕಿ.ಮೀ ಬಳಿಕ ಒಂದು ಬ್ರೇಕ್ ಪಡೆಯಬಹುದಷ್ಟೆ.
* 2000 ಕಿ.ಮೀನಷ್ಟು ದೂರದ ಪ್ರಯಾಣವಾಗಿದ್ದಲ್ಲಿ ಎರಡು ಬ್ರೇಕ್ ನೀಡಲಾಗುತ್ತದೆ. 800, 905 ಮತ್ತು 1505 ಕಿ.ಮೀ ಬಳಿಕ ಸಹ ಬ್ರೇಕ್ ಪಡೆಯಬಹುದಾಗಿದೆ.
* ಪ್ರಯಾಣದ ಆಗಮನ ಮತ್ತು ನಿರ್ಗಮನವನ್ನು ಹೊರತುಪಡಿಸಿ 2 ದಿನಗಳ ಬ್ರೇಕ್ ನೀಡಲಾಗುತ್ತದೆ. ಯಾವ ನಿಲ್ದಾಣದಲ್ಲಿ ಬ್ರೇಕ್ ಬೇಕು ಎಂಬುದನ್ನು ಪ್ರಯಾಣಿಕರು ತಮ್ಮ ಅರ್ಜಿಯಲ್ಲಿ ಸ್ಪಷ್ಟವಾಗಿ ಬರೆಯಬೇಕು. ಒರಿಜಿನಲ್ ಬುಕ್ಕಿಂಗ್ ಸಂದರ್ಭದಲ್ಲೇ ಅದನ್ನು ನಮೂದಿಸಬೇಕಾಗುತ್ತದೆ.
* ಪ್ರಯಾಣಿಕರು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮತ್ತೊಂದು ರೈಲು ಏರಿದರೆ ಅದನ್ನು ಬ್ರೇಕ್ ಎಂದು ಪರಿಗಣಿಸಲಾಗುವುದಿಲ್ಲ. ಬ್ರೇಕ್ ತೆಗೆದುಕೊಂಡ ಬಳಿಕ ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ಆ ನಿಲ್ದಾಣದ ಸಿಬ್ಬಂದಿಗೆ ಸಲ್ಲಿಸಬೇಕಾಗುತ್ತದೆ.
ಸೂಚನೆ:
* ಪ್ರಯಾಣಿಕರು ತಮ್ಮ ಪ್ರಯಾಣವನ್ನು ನಿರಾಕರಿಸಿದ್ರೆ ಅಥವಾ ಶಿಫಾರಸ್ಸು ಮಾಡಿದ ಸರಿಯಾದ ಟಿಕೆಟ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರನ್ನು ಪರಿಗಣಿಸಲಾಗುತ್ತದೆ. ಆದರೆ ಅದಕ್ಕೆ ಅನುಗುಣವಾಗಿ ವ್ಯವಹರಿಸಬೇಕಾಗುತ್ತದೆ.
* ರಾಜಧಾನಿ, ಶತಾಬ್ಧಿ, ಜನಶತಾಬ್ಧಿ ಎಕ್ಸ್ ಪ್ರೆಸ್ ರೈಲುಗಳಲ್ಲಿ ಮಾತ್ರ ಬ್ರೇಕ್ ಸೌಲಭ್ಯಗಳನ್ನು ಅನುಮತಿಸಲಾಗುತ್ತದೆ. ಇದು ಪಾಯಿಂಟ್-ಟು-ಪಾಯಿಂಟ್ ಆಧಾರದ ಮೇಲೆ ಪ್ರತ್ಯೇಕವಾದ ಶುಲ್ಕವನ್ನು ಹೊಂದಿರುತ್ತದೆ.