6 ವರ್ಷಗಳ ಒಡನಾಟದ ಬಳಿಕ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ವಿಚಾರ ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಜೋಡಿ ಹಕ್ಕಿಗಳು ಮದುವೆಗೂ 4 ವರ್ಷ ಮುನ್ನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದುದರ ಬಗ್ಗೆ ನಿಮಗೆ ತಿಳಿದಿದ್ಯಾ?
ದೀಪಿಕಾ ಹಾಗೂ ರಣ್ವೀರ್ 2018ರಲ್ಲಿ ಇಟಲಿಯಲ್ಲಿ ತಮ್ಮ ಕುಟುಂಬ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಜೀವನದ ಗಂಟನ್ನು ಬೆಸೆದುಕೊಂಡಿದ್ದರು. ಆದರೆ ಅವರು ಅದಕ್ಕೂ 4 ವರ್ಷಗಳ ಹಿಂದೆಯೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
Advertisement
Advertisement
ಹೌದು. 2018ರ ಫಿಲ್ಮ್ಫೇರ್ ಸಂದರ್ಶನದಲ್ಲಿ ದೀಪಿಕಾ, ರಣ್ವೀರ್ನೊಂದಿಗಿನ ಸಂಬಂಧದ ಬಗ್ಗೆ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ತಾವು 4 ವರ್ಷಗಳ ಹಿಂದೆಯೇ ಎಂಗೇಜ್ಮೆಂಟ್ ಆಗಿದ್ದುದರ ಬಗೆಗಿನ ರಹಸ್ಯವನ್ನೂ ಬಿಚ್ಚಿಟ್ಟಿದ್ದರು. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಶುಭಾ ಪೂಂಜಾ
Advertisement
ನಮ್ಮ 6 ವರ್ಷಗಳ ಸುದೀರ್ಘ ಸಂಬಂಧದಲ್ಲಿ ಹಲವು ಏರಿಳಿತಗಳು ಎದುರಾಗಿವೆ. ಆದರೆ ನಾವು ಎಂದಿಗೂ ದೂರವಾಗಲಿಲ್ಲ. ನಮ್ಮಲ್ಲಿ ಎಂದಿಗೂ ದೊಡ್ಡ ಜಗಳಗಳು ನಡೆದಿಲ್ಲ. ಸಮಯ ತೆಗೆದುಕೊಂಡು ಎಲ್ಲವನ್ನೂ ಸರಿಪಡಿಸಿಕೊಳ್ಳುವಂತಹ ಸನ್ನಿವೇಶಗಳೂ ಎದುರಾಗಿಲ್ಲ. ಇವೆಲ್ಲದರ ನಡುವೆ ನಾವು ನಾಲ್ಕು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಈ ವಿಚಾರ ಅವನ ಮತ್ತು ನನ್ನ ಹೆತ್ತವರಿಗೆ ಹಾಗೂ ಸಹೋದರರಿಗೆ ಮಾತ್ರವೇ ತಿಳಿದಿತ್ತು ಎಂದು ಹೇಳಿದ್ದರು.
Advertisement
ಈ ವಿಚಾರ ಹಳೆಯದಾದ್ರೂ ಈ ಅವರ ಹೆಚ್ಚಿನ ಅಭಿಮಾನಿಗಳು ಇದರ ಬಗ್ಗೆ ಯೋಚಿಸಿರುವುದು ತೀರಾ ಕಡಿಮೆ. ಇಂದು ದೀಪಿಕಾ ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದೇನೇ ಆದರೂ ದೀಪಿಕಾ – ರಣ್ವೀರ್ ಜೋಡಿ ಬಿ-ಟೌನ್ನ ಅತೀ ಪ್ರೀತಿಯ ಜೋಡಿಗಳಲ್ಲಿ ಒಬ್ಬರು ಅನ್ನೋದ್ರಲ್ಲಿ ತಪ್ಪೇನಿಲ್ಲ. ಇದನ್ನೂ ಓದಿ: ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?