– ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್ ಶಾಸಕ ತಿರುಗೇಟು
ರಾಮನಗರ: ವೋಟ್ ಹಾಕಿಲ್ಲ ಅಂತ ಯಾರನ್ನಾದರೂ ಓಡಿಸ್ಕೊಂಡು ಹೋಗುತ್ತಿದ್ದೀವಾ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumarswamy) ವಿರುದ್ಧ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (Balakrishna) ಕಿಡಿಕಾರಿದ್ದಾರೆ.
Advertisement
ತಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದ ವಿಚಾರ ಕುರಿತು ಮಾಗಡಿಯಲ್ಲಿ (Magadi) ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿ, ನಾವು ಹೇಳಿರೋದು ಜನರಿಗೆ ಗ್ಯಾರಂಟಿ ಬೇಕಾ? ಅಕ್ಷತೆ ಬೇಕಾ ಎಂದು. ನಾವು ಯಾರನ್ನ ಬ್ಲ್ಯಾಕ್ ಮೇಲ್ ಮಾಡ್ತಾ ಇದೀವಿ ಹೇಳಿ? ಯಾರನ್ನಾದರು ವೋಟ್ ಹಾಕಲಿಲ್ಲ ಅಂತ ಓಡಿಸ್ಕೊಂಡು ಹೋಗ್ತಾ ಇದೀವಾ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗೂಗಲ್ ಪೇ ಮಾಡಿಸಿ ಸಿಕ್ಕಿಬಿದ್ದ ಹೆದ್ದಾರಿ ದರೋಡೆಕೋರರು
Advertisement
Advertisement
ಜೆಡಿಎಸ್ ಅವರಿಗೆ ನಾನು ಎಂಎಲ್‌ಎ ಆಗಿರೋದನ್ನ ತಡೆದುಕೊಳ್ಳಲು ಆಗುತ್ತಿಲ್ಲ. ಅದಕ್ಕೆ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಬೇಕಿದ್ರೆ ಕಾನೂನು ರೀತಿ ಪರಿಶೀಲನೆ ಮಾಡಲಿ. ಸತ್ಯಾಸತ್ಯತೆ ಹೊರಗೆ ಬರಲಿ. ನಾವು ಅಧಿಕಾರದಲ್ಲಿ ಇರೋದನ್ನ ಅವರ ಕುಟುಂಬ ಸಹಿಸುತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್‌ಗೆ ಹಂದಿ ಜ್ವರ & ಕೋವಿಡ್ ಪಾಸಿಟಿವ್
Advertisement
ಗ್ಯಾರಂಟಿ ರದ್ದು ಮಾಡುವ ಬಗ್ಗೆ ಕಾಂಗ್ರೆಸ್ ಒಳಗೆ ಚರ್ಚೆ ಆಗುತ್ತಿದೆ ಎಂಬ ಹೆಚ್‌ಡಿಕೆ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಆರೋಪಕ್ಕೆ ಗೌರವ ಕೊಡುವ ಅರ್ಥ ಇಲ್ಲ. ಕುಮಾರಸ್ವಾಮಿ ಒಂದೊಂದು ದಿನ ಒಂದೊಂದು ಥರ ಹೇಳ್ತಾರೆ. ಬಿಜೆಪಿಗೆ ವೋಟ್ ಹಾಕಿ ಒಂದು ದಿನ ಅನುಭವಿಸ್ತೀರಾ ಅಂತ ಹಿಂದೆ ಹೇಳಿದ್ದರು. ಶ್ರೀಲಂಕದಲ್ಲಿ ಆದಂಗೆ ಇಲ್ಲೂ ಆಗುತ್ತದೆ ಅಂತ ಹೇಳಿರಲಿಲ್ವಾ? ಈಗ ಅವರ ಜೊತೆಯೇ ಹೋಗಿಲ್ವಾ? ಹಾಗಾಗಿ ಅವರ ಹೇಳಿಕೆಗೆ ಮಹತ್ವ ಕೊಡೋದು ಒಳ್ಳೆಯದಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಪೋಸ್ಟ್ ಮೂಲಕ ಡ್ರಗ್ಸ್ ಸರಬರಾಜು – ವ್ಯಕ್ತಿ ಅರೆಸ್ಟ್, 6.50 ಲಕ್ಷ ಮೌಲ್ಯದ ಡ್ರಗ್ಸ್ ವಶ