ಬೆಂಗಳೂರು/ನೆಲಮಂಗಲ: ಮಾಗಡಿ ಬಂಡೆ ಮಠದ (Bande Math) ಬಸವಲಿಂಗ ಸ್ವಾಮೀಜಿ (Basavalinga Swamiji) ಆತ್ಮಹತ್ಯೆ ಪ್ರಕರಣದ ಸುತ್ತ ದಿನ ಕಳೆದಂತೆ ಅನುಮಾನ ಹುತ್ತ ಸೃಷ್ಠಿಯಾಗುತ್ತಿದೆ.
ಮಂಗಳವಾರ ಶ್ರೀಗಳು ಬರೆದಿದ್ದಾರೆ ಎನ್ನಲಾದ ಡೆತ್‍ನೋತ್‍ನ ಒಂದು ಪುಟ ವೈರಲ್ ಆದ ಬೆನ್ನಲ್ಲೆ, ಬುಧವಾರ ಶ್ರೀಗಳ ವೀಡಿಯೋ ಕಾಲ್ ತುಣುಕೊಂದು ವೈರಲ್ ಆಗಿದ್ದು, ಇದೀಗ ಈ ಬಗ್ಗೆ ಸಾಕಷ್ಟು ಅನುಮಾನ ಹುಟ್ಟುಕೊಂಡಿದೆ. ಮಹಿಳೆಯೊಬ್ಬಳ ಜೊತೆ ಸ್ವಾಮೀಜಿ ವೀಡಿಯೋ ಕಾಲ್‍ನಲ್ಲಿ ಮಾತನಾಡುತ್ತಿರುವ ವೀಡಿಯೋ ದೊರೆತಿದ್ದು, ಇದರ ಹಿಂದಿರುವ ಕಾಣದ ಕೈಗಳ ಹುಡುಕಾಟ ಶುರುವಾಗಿದೆ.
ಬಸವಲಿಂಗ ಸ್ವಾಮೀಜಿ ಮಹಿಳೆ ಜೊತೆಗೆ ಮಾತನಾಡಿದ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡು, ನಂತರ ವೀಡಿಯೋವನ್ನು ಸ್ವಾಮೀಜಿ ಮೊಬೈಲ್‍ಗೆ ಕಳುಹಿಸಿ ಮಹಿಳೆಯ ಗ್ಯಾಂಗ್ ಬೆದರಿಕೆ ಹಾಕಿತ್ತಾ? ಹತ್ತು ದಿನದ ಹಿಂದೆ ಬಸವಲಿಂಗ ಸ್ವಾಮೀಜಿ ಮೊಬೈಲ್‍ಗೆ ದುಷ್ಕರ್ಮಿಗಳು ವೀಡಿಯೋ ಕಳುಹಿಸಿದ್ದು, ಈ ಬಗ್ಗೆ ಯಾರ ಬಳಿನೂ ಹೇಳಿಕೊಳ್ಳಲಾಗದೇ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ಬಂಡೆಮಠ ಸ್ವಾಮೀಜಿ ಆತ್ಮಹತ್ಯೆಗೆ ಟ್ವಿಸ್ಟ್- ಮಹಿಳೆಯ ಜೊತೆಗಿನ ವೀಡಿಯೋ ಕಾಲ್ ವೈರಲ್
ವೀಡಿಯೋ ಮಾಡಿದ ಮಹಿಳೆ ಆ್ಯಂಡ್ ಟೀಂ ಬಸವಲಿಂಗ ಸ್ವಾಮೀಜಿಗೆ ಬರೋಬ್ಬರಿ 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿತ್ತಾ? ಟೀಂನಲ್ಲಿದ್ದ ಮುಖಂಡನೇ ಸ್ವಾಮೀಜಿ ಬಳಿ ಡೀಲ್ ನೆಪದಲ್ಲಿ ಬಂದಿದ್ದನಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸ್ವಾಮೀಜಿ ಮಠದ ಅಭಿವೃದ್ಧಿ ಜೊತೆಗೆ ಅಂತಹ ದೊಡ್ಡ ಮೊತ್ತದ ಹಣ ಕೂಡ ಇರಲಿಲ್ಲ. ಹೀಗಾಗಿ ದೊಡ್ಡ ಮೊತ್ತದ ಹಣವನ್ನು ಹೊಂದಿಸುವಲ್ಲಿ ಸ್ವಾಮೀಜಿ ವಿಫಲರಾಗಿದರು ಎಂಬ ಮಾಹಿತಿ ತಿಳಿದುಬಂದಿದೆ.
ಬೇಕಂತಾಲೇ ನಾಲ್ವರು ಹೆಣೆದ ಖೆಡ್ಡಾಗೆ ಸ್ವಾಮೀಜಿ ತಗಲಾಕಿಕೊಂಡು ಒದ್ದಾಡಿದ್ರಾ? ಸ್ವಾಮೀಜಿ ಬರೆದಿರುವ ಮೂರು ಪುಟಗಳ ಡೆತ್‍ನೋಟ್‍ನಲ್ಲಿ ಎಲ್ಲವೂ ಅಡಗಿದ್ಯ? ಪೊಲೀಸರ ತನಿಖೆಯಿಂದ ಸತ್ಯಸತ್ಯೆ ಹೊರಬರುತ್ತ ಎಂಬ ಪ್ರಶ್ನೆ ಮಠದ ಭಕ್ತರಲ್ಲಿ ಮೂಡಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ
ಬುಧವಾರ ವೈರಲ್ ಆದ ವೀಡಿಯೋ ಬಗ್ಗೆ ಇದೀಗ ಸಾಕಷ್ಟು ಸಂಶಯಗಳು ಮೂಡುತ್ತಿದ್ದು, ಪೊಲೀಸರ ತನಿಖೆಗೆ ದಾರಿ ತಪ್ಪಿಸಲು ಹುನ್ನಾರ ನಡೆಯುತ್ತಿದ್ಯಾ? ವೀಡಿಯೋ ವೈರಲ್ ಮಾಡಿದ ವ್ಯಕ್ತಿ ಯಾರು? ಯಾವ ನಂಬರ್‍ನಿಂದ ವೀಡಿಯೋ ಲೀಕ್ ಆಯಿತು? ವೀಡಿಯೋ ಲೀಕ್ ಮಾಡಿದ ಹಿಂದೆ ಇನ್ನೂ ಷಡ್ಯಂತ್ರ ನಡೆದಿದ್ಯಾ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಗಬೇಕಾಗಿದೆ.