ಅರಣ್ಯ ಭೂಮಿಯಲ್ಲಿ ಅನುಮತಿ ಇಲ್ಲದೇ ತರುಣ್ ಸುಧೀರ್ (Tharun Sudhir) ತಂಡ ಚಿತ್ರೀಕರಣ ನಡೆಸಿದ್ದಾರೆ ಎನ್ನಲಾದ ವಿಚಾರಕ್ಕೆ ತುಮಕೂರಿನ ಅರಣ್ಯಾಧಿಕಾರಿ ಅನುಪಮಾ ಸ್ಪಷ್ಟನೆ ನೀಡಿದ್ದಾರೆ. ಚಿತ್ರತಂಡದ ಮೇಲೆ ಎಫ್‌ಐಆರ್ ದಾಖಲಿಸಲು ಸೂಚನೆ ನೀಡಿರೋದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ:ಮಿಲನಾ ಬೆಸ್ಟ್ ಮದರ್: ಪತ್ನಿಯನ್ನು ಹೊಗಳಿದ ಡಾರ್ಲಿಂಗ್ ಕೃಷ್ಣ
Advertisement
ತುಮಕೂರಿನ ನಾಮದ ಚಿಲುಮೆಯಲ್ಲಿ ಅನುಮತಿ ಸಿಗದೇ ಇದ್ದರೂ ತರುಣ್ ಸುಧೀರ್ ತಂಡ ಚಿತ್ರೀಕರಣ ನಡೆಸಿದೆ ಎಂಬ ವಿಚಾರಕ್ಕೆ ಡಿಎಫ್‌ಓ ಅನುಪಮಾ ಮಾತನಾಡಿ, ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂತು. ನಾಮದ ಚಿಲುಮೆ ಮುಖ್ಯದ್ವಾರ ಬಳಿ ಲೈಟ್‌ಗಳನ್ನು ಹಾಕಿಕೊಂಡು ಸುಮಾರು ಜನರು ಇದ್ದಾರೆ ಕಂಪ್ಲೇಟ್ ಬಂದಿತ್ತು. ಕೂಡಲೇ ಸ್ಥಳಕ್ಕೆ ನಮ್ಮ ಸಿಬ್ಬಂದಿ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Advertisement
Advertisement
ಆಗ ಸಿನಿಮಾ ಶೂಟಿಂಗ್ ತಂಡ 8 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದಿದ್ದಾರೆ. ಊಟಕ್ಕೆ ಅಲ್ಲಿ ನಿಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಅಲ್ಲಿ ಶೂಟಿಂಗ್ ನಡೆಯುತ್ತಿರಲಿಲ್ಲ. ಆದರೆ ತಂಡ ಊಟ ಮಾಡುತ್ತಿದ್ದರು ಎಂದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಲು ಸೂಚನೆ ನೀಡಿದ್ದೇನೆ. ಚಿತ್ರತಂಡಕ್ಕೂ ನಾವು ತಿಳುವಳಿಕೆಯನ್ನು ಹೇಳಿದ್ದೇವೆ. ತರುಣ್ ಸುದೀರ್ ಪ್ರೊಡಕ್ಷನ್ ಅಂತಾ ತಿಳಿದು ಬಂದಿದೆ. ಅನಧಿಕೃತ ಪ್ರವೇಶ ಅಡಿ ದೂರು ದಾಖಲಿಸಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.
Advertisement
ಇನ್ನೂ ಚಿತ್ರತಂಡ ಮೊದಲೇ ಅನುಮತಿಗೆ ಅರ್ಜಿ ಕಳಿಸಿದ್ದರು. ಅದಕ್ಕೆ ಹಣ ಕೂಡ ಪಾವತಿಸಿದ್ದರು. ಆದರೆ ಕೇಂದ್ರ ಅರಣ್ಯ ಕಚೇರಿ ವತಿಯಿಂದ ಇನ್ನೂ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಶೂಟಿಂಗ್‌ಗೆ ಅನುಮತಿ ಇರಲಿಲ್ಲ. ಆದರೆ ಹೊರಗೆ ಶೂಟಿಂಗ್ ಮಾಡಿ, ಊಟಕ್ಕೆ ನಿಲ್ಲಿಸಿರುವುದಾಗಿ ಹೇಳಿದ್ದಾರೆ. ಎಫ್‌ಐಆರ್ ಮಾಡುತ್ತೇವೆ. ಟಿಟಿ ವಾಹನ ಅಡುಗೆ ಸಾಮಗ್ರಿಗಳು, ಚೇರ್‌ಗಳು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.