– 3 ದಿನಗಳ ಬಳಿಕ ಕೊಲೆ ಪ್ರಕರಣ ಬೆಳಕಿಗೆ
ಚಿಕ್ಕಬಳ್ಳಾಪುರ: ಪತ್ನಿಯನ್ನು ಪತಿಯೇ ಕೊಂದು ಮನೆಗೆ ಬೀಗ ಜಡಿದು ನಾಪತ್ತೆಯಾಗಿರುವ ಅನುಮಾನಸ್ಪದ ಪ್ರಕರಣ ಚಿಕ್ಕಬಳ್ಳಾಪುರ (Wife Murder In Chikkaballapur) ಜಿಲ್ಲೆಯ ಗೌರಿಬಿದನೂರಿನ ಗಂಗಾನಗರದಲ್ಲಿ ಬೆಳಕಿಗೆ ಬಂದಿದೆ.
ಲಕ್ಷ್ಮಿದೇವಿ (40) ಕೊಲೆಯಾದ ಮಹಿಳೆ. ಈಕೆಯ ಪತಿ (Husband) ಕೃಷ್ಣಪ್ಪ (50) ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಲಕ್ಷ್ಮಿದೇವಿ ಹಾಗೂ ಕೃಷ್ಣಪ್ಪ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಿಗೆ ಮದುವೆಯಾಗಿದೆ. ಕಿರಿಯ ಮಗಳು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿದ್ದು ಸದಾ ಸಣ್ಣ-ಪುಟ್ಟ ವಿಚಾರಕ್ಕೂ ಕಿರಿಕ್ ಗಲಾಟೆ ಮಾಮೂಲಿಯಾಗಿತ್ತಂತೆ.
Advertisement
Advertisement
ಇದೇ ರೀತಿ ಮೇ 19 ರಂದು ಸಹ ಮನೆಯಲ್ಲಿ ಒಡವೆಗಳ ವಿಚಾರವಾಗಿ ಗಂಡ-ಹೆಂಡತಿ ನಡುವೆ ದೊಡ್ಡ ಜಗಳವೇ ನಡೆದಿತ್ತು. ಮಕ್ಕಳ ಮುಂದೆಯೆ ಶಿಕ್ಷಕ ಕೃಷ್ಣಪ್ಪ ಮಚ್ಚಿನಿಂದ ಪತ್ನಿ ಹತ್ಯೆಗೆ ಮುಂದಾಗಿದ್ದ ಎನ್ನಲಾಗಿದೆ. ಆಗ ಮಕ್ಕಳು, ಬಂಧು-ಬಳಗ ಎಲ್ಲರೂ ಬುದ್ಧಿ ಹೇಳಿ ತಮ್ಮ ಪಾಡಿಗೆ ತಾವು ಹೊರಟು ಹೋಗಿದ್ದಾರೆ. ಆದರೆ ಎಲ್ಲರೂ ಹೋದ ನಂತರವೂ ಜಗಳ ದೊಡ್ಡದಾಗಿ ಕೃಷ್ಣಪ್ಪ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿರಬಹುದು ಅಂತ ಶಂಕಿಸಲಾಗಿದೆ.
Advertisement
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?: ಮೇ 19 ರಂದು ಮನೆಯಲ್ಲಿ ಗಲಾಟೆ ಆದ ನಂತರ ಬುದ್ಧಿವಾದ ಹೇಳಿ ಸಮಾಧಾನ ಮಾಡಿ ಮಕ್ಕಳು ಹೊರಟು ಹೋಗಿದ್ದರು. ಆದರೆ ಅದಾದ ನಂತರ ಏನಾಯ್ತು ಎಂಬುದು ಯಾರಿಗೂ ಗೊತ್ತಿಲ್ಲ. 3 ದಿನಗಳ ನಂತರ ಮನೆಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ಕೆಟ್ಟ ವಾಸನೆ ಬರಲಾರಂಭಿಸಿದೆ. ಮಕ್ಕಳು ಸಹ ಮೂರು ದಿನದಿಂದ ಫೋನ್ ಮಾಡಿದ್ರೂ ಸ್ವಿಚ್‍ಆಫ್ ಅಂತಲೇ ಬಂದಿದೆ. ಹೀಗಾಗಿ ಅನುಮಾನಗೊಂಡು ಅಕ್ಕ-ಪಕ್ಕದ ಮನೆಯವರನ್ನ ಮನೆ ಬಳಿ ಕಳುಹಿಸಿ ನೋಡಲು ತಿಳಿಸಿದ್ದಾರೆ. ಆಗ ಪರಿಚಯಸ್ಥರು ಮನೆ ಬಳಿ ಬಂದಾಗ ಮನೆಗೆ ಬೀಗ ಹಾಕಲಾಗಿದೆ. ಆದರೆ ಮನೆಯ ಒಳಭಾಗದಲ್ಲಿ ಕಿಟಕಿಗಳಲ್ಲಿ ನೊಣಗಳು ಮುತ್ತಿಕೊಂಡಿವೆ. ಇದನ್ನೂ ಓದಿ: ನಂಬಿದ್ರೆ ನಂಬಿ… ಒಂದು ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ
Advertisement
ಕೆಟ್ಟ ದುರ್ವಾಸನೆ ಮೂಗಿಗೆ ಬಡಿದಿದೆ. ಹಾಗಾಗಿ ನಡೆಯಬಾರದ್ದು ಏನೋ ನಡೆದಿದೆ ಅಂತ ಕಿಟಕಿ ಬಾಗಿಲು ತೆಗೆದು ನೋಡಿದಾಗ ಮನೆಯ ರೂಂನಲ್ಲಿ ರಕ್ತ ಸಿಕ್ತವಾಗಿ ಕೊಳೆತು ಗಬ್ಬು ನಾರುವ ಸ್ಥಿತಿಯಲ್ಲಿ ಲಕ್ಷ್ಮಿದೇವಿ ಮೃತದೇಹ ಕಂಡಿದೆ. ಇದರಿಂದ ಕೂಡಲೇ ಮಕ್ಕಳು ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಬಂದು ಬಾಗಿಲು ಒಡೆದು ಒಳ ಹೋಗಿದ್ದಾರೆ. ಮನೆಯಲ್ಲಿ ಕೃಷ್ಣಪ್ಪನ ಮೊಬೈಲ್ ಅಲ್ಲೇ ಇದೆ ಅದ್ರೆ ಆತ ಮಾತ್ರ ಇಲ್ಲ. ಮಂಚದ ಬಳಿ ಲಕ್ಷ್ಮಿದೇವಿಯ ಶವ ಬಿದ್ದಿದ್ದು, ತಲೆಗೆ ಬಲವಾದ ಆಯುಧದಿಂದ ಹೊಡೆಯಲಾಗಿದೆ. ಮತ್ತೊಂದೆಡೆ ಮೃತಳ ಗಂಡ ಕೃಷ್ಣಪ್ಪನ ಫೋನ್ ಮಂಚದ ಮೇಲೆ ಇದ್ದು, ಆತ ನಾಪತ್ತೆಯಾಗಿದ್ದಾನೆ.
ಇದರಿಂದ ಗಂಡ-ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಅನುಮಾನ ವ್ಯಕ್ತವಾಗಿದೆ. ಶಿಕ್ಷಕ ಕೃಷ್ಣಪ್ಪ ಜಿಪುಣನಾಗಿದ್ದು, ಹೆಂಡತಿ ಮಕ್ಕಳ ಖರ್ಚಿಗೂ ಹಣ ಕೊಡ್ತಿರಲಿಲ್ಲ. ಹೆಂಡತಿ ಹಾಗೂ ಮಕ್ಕಳಿಗೆ ಮಾಡಿಸಿದ್ದ ಚಿನ್ನಾಭರಣಗಳನ್ನು ತಾನೇ ತನ್ನ ಬೀರುವಿನಲ್ಲಿ ಲಾಕ್ ಮಾಡಿಕೊಳ್ತಿದ್ದ, ಹಣವನ್ನಂತೂ ಕೊಡ್ತಿರಲಿಲ್ಲ. ಇದರಿಂದ ಮನೆಯಲ್ಲಿದ್ದ ಒಡೆವೆಗಳ ವಿಚಾರದಲ್ಲಿ ಗಂಡ ಹೆಂಡಿರ ಮಧ್ಯೆ ಜಗಳ ವಿಕೋಪಕ್ಕೆ ಹೋಗಿ, ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಸ್ವತಃ ಶಿಕ್ಷಕ ಕೃಷ್ಣಪ್ಪನ ಮಗಳು ಲೀಲಾ ಪೆÇಲೀಸರಿಗೆ ತಂದೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.