ಬೆಂಗಳೂರು: 3 ಲಕ್ಷ ರೂ. ಕಟ್ಟಿಸಿಕೊಂಡು ನಟ ದರ್ಶನ್‌ಗೆ (Darshan) ವಾಮನ (Vamana) ಚಿತ್ರ ವೀಕ್ಷಣೆಗೆ ಪೊಲೀಸರು ಅನುಮತಿ ಕೊಟ್ಟಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಜಿಟಿ ಮಾಲ್ ಚಿತ್ರಮಂದಿರಕ್ಕೆ ನಟ ದರ್ಶನ್, ಸ್ನೇಹಿತ ಧನ್ವೀರ್ (Dhanveer) ನಟನೆಯ ವಾಮನ ಸಿನಿಮಾ ನೋಡಲು ಬುಧವಾರ ರಾತ್ರಿ ಬಂದಿದ್ದರು. ಈ ವೇಳೆ ಚಿತ್ರಮಂದಿರದಲ್ಲಿ ಬಂದೋಬಸ್ತ್‌ಗೆ ಪೊಲೀಸರು ಸಂಬಂಧಪಟ್ಟವರಿಂದ 3 ಲಕ್ಷ ರೂ. ಹಣವನ್ನು ಬಂದೋಬಸ್ತ್ ಮ್ಯಾನೇಜ್ಮೆಂಟ್‌ಗೆ ಕಟ್ಟಿಸಿಕೊಂಡಿದ್ದಾರೆಂದು ಪೊಲೀಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಯಹೂದಿಗಳ ವಿರುದ್ಧ ಪೋಸ್ಟ್ ಹಾಕಿದ್ರೆ ವೀಸಾ, ಗ್ರೀನ್ ಕಾರ್ಡ್ ನೀಡಲ್ಲ – ವಲಸಿಗರಿಗೆ ಅಮೆರಿಕ ಎಚ್ಚರಿಕೆ
ನಟ ದರ್ಶನ್ ಬರುವ ವಿಚಾರ ತಿಳಿದು ಚಿತ್ರಮಂದಿರದ ಬಳಿ ದರ್ಶನ್ ಅಭಿಮಾನಿಗಳು ಜಮಾವಣೆ ಆಗುತ್ತಿದ್ದಾರೆ. ತೆಲಂಗಾಣದಲ್ಲಿ ಪೊಲೀಸ್ ಭದ್ರತೆ ಇಲ್ಲದೆ ಹೋಗಿದ್ದರಿಂದ ಪುಷ್ಪ 2 ಸಿನಿಮಾ ವೀಕ್ಷಣೆಗೆ ಅಲ್ಲು ಅರ್ಜುನ್ ಬಂದಾಗ ಚಿತ್ರಮಂದಿರದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಇದನ್ನೂ ಓದಿ: 64 ವಯಸ್ಸಿನ ಉಗ್ರ ರಾಣಾ ಫೋಟೊ ರಿಲೀಸ್
ಅದೇ ರೀತಿ ದರ್ಶನ್ ಅಭಿಮಾನಿಗಳು ಜಮಾವಣೆ ಆಗಿ ನಾಳೆ ಅಹಿತಕರ ಘಟನೆಗೆ ಕಾರಣವಾಗಬಹುದೆಂದು ಚಿತ್ರಮಂದಿರದ ಬಳಿ ಭದ್ರತೆ ಮಾಡಬೇಕೆಂದು ಪೊಲೀಸರು 3 ಲಕ್ಷ ರೂ. ಹಣವನ್ನು ಬಂದೋಬಸ್ತ್ ಮ್ಯಾನೇಜ್ಮೆಂಟ್‌ಗೆ ಕಟ್ಟಿಸಿಕೊಂಡಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.