ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಹೈಕಮಾಂಡ್ (Congress High Command) ಟೀಂ ರಹಸ್ಯ ಸಂಚಾರ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಬಿಟ್ಟು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ (Randeep Surjewala) ಹಲವು ಕ್ಷೇತ್ರಗಳನ್ನು ಸುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಪ್ರತ್ಯೇಕ ಸಂಚಾರದ ಗುಟ್ಟಿನ ಬಗ್ಗೆ ಕಾಂಗ್ರೆಸ್‌ನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
Advertisement
ಕರ್ನಾಟಕದಲ್ಲಿ ಹೈಕಮಾಂಡ್‌ಗೆ ಇರುವ ತಲೆನೋವು ಅಭ್ಯರ್ಥಿಗಳು ಹೆಚ್ಚಿರುವುದು. ಹೈಕಮಾಂಡ್ ಸರ್ವೇ ವೇಳೆ 4 ಎಚ್ಚರಿಕೆ ರವಾನೆಯಾಗಿದೆ ಎನ್ನಲಾಗಿದೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಇದೆ ಬಲ, ಯಾವ ಅಭ್ಯರ್ಥಿ ಪ್ರಬಲ? ಸಿದ್ದರಾಮಯ್ಯ, ಡಿಕೆಶಿ ಗುಂಪಿನಲ್ಲಿ ಎಲ್ಲೆಲ್ಲಿ ಅಭ್ಯರ್ಥಿಗಳು ಇದ್ದಾರೆ? ಅಲ್ಲಿ ಯಾರು ಪ್ರಬಲ? ಯಾವ ಕ್ಷೇತ್ರಗಳಲ್ಲಿ ಬಿಜೆಪಿ ವಿರೋಧಿ ಅಲೆ ಹೆಚ್ಚಿದೆ? ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ? ಎಂಬ ಬಗ್ಗೆ ಸುರ್ಜೇವಾಲಾ ಟೀಂ ಸರ್ವೇ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದು, ಅಂತಿಮವಾಗಿ ಹೈಕಮಾಂಡ್ ತಲುಪಿದೆ ಎಂಬುದು ಕಾಂಗ್ರೆಸ್ ಮೂಲಗಳ ಮಾಹಿತಿ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಡಿಕೆಶಿಗೆ ಬಿಗ್ ರಿಲೀಫ್
Advertisement
Advertisement
ಇದೇ ಮೊದಲ ಸಲ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಣೆಗೂ ಮುನ್ನವೇ ಪಿಚ್ ರಿಪೋರ್ಟ್ ಸ್ಟಡಿ ಮಾಡಿದೆ. ಡಿಕೆಶಿ, ಸಿದ್ದು ಎರಡು ಟೀಂಗಳನ್ನು ಬಿಟ್ಟು ಸುರ್ಜೇವಾಲಾ ಪ್ರತ್ಯೇಕ ಟೀಂ ಮಾಡಿಕೊಂಡು ಪಿಚ್ ರಿಪೋರ್ಟ್ ತಯಾರು ಮಾಡಿದ್ದಾರೆ. ಟಿಕೆಟ್ ವಿಚಾರದಲ್ಲಿ ಈ ಸಲ ಎಚ್ಚರಿಕೆ ಹೆಜ್ಜೆ ಇಡಲು ಕಾಂಗ್ರೆಸ್ ಹೈಕಮಾಂಡ್ ಮಹಾ ಪ್ಲ್ಯಾನ್ ಮಾಡಿದ್ದು, ಯಾರ ಬೆಂಬಲಿಗನೇ ಇರಲಿ, ಯಾರೇ ಲಾಬಿ ಮಾಡಲಿ. ರಿಪೋರ್ಟ್ ಆಧಾರವೇ ಫೈನಲ್ ಎಂಬ ಸಂದೇಶ ರವಾನೆ ಮಾಡುವುದೇ ಈ ಪ್ರತ್ಯೇಕ ಸರ್ವೇಯ ಉದ್ದೇಶ ಎನ್ನಲಾಗಿದೆ. ಇದರಿಂದಾಗಿ ಡಿಕೆಶಿ ಹಾಗೂ ಸಿದ್ದು ಬಣದ ಅಭ್ಯರ್ಥಿಗಳಿಗೆ ನಡುಕ ಉಂಟಾಗಿದೆ. ಹೈಕಮಾಂಡ್ ರಿಪೋರ್ಟ್ನಲ್ಲಿ ಯಾರ ಹಣೆಬರಹ ಹೇಗಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ. ಇದನ್ನೂ ಓದಿ: ಕೇಸರಿ ಭದ್ರಕೋಟೆಗೆ ಚಾಣಕ್ಯ: ಮಂಗಳೂರಿನಲ್ಲಿ ಶಾ ಚುನಾವಣಾ ರಣತಂತ್ರ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k