ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಸಿಬಿಐ ಕೇಸ್ (CBI Case) ಪೂರ್ವಾನುಮತಿ ವಾಪಸ್ ಪಡೆದ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
ಮಾಜಿಸಿ ಎಂ ಯಡಿಯೂರಪ್ಪ ಮಾತಾಡಿ, ಡಿಕೆಶಿ ಬಗ್ಗೆ ನಾನು ಹೇಳಿರೋದೆಲ್ಲ ನೂರಕ್ಕೆ ನೂರು ಸತ್ಯ. ಸಿದ್ದರಾಮಯ್ಯ (Siddaramaiah) ಎಲ್ಲ ಗೊತ್ತಿದ್ದೂ ತಿರುಚುವ ಕೆಲಸ ಮಾಡಿದ್ದಾರೆ ಅಂತ ಬಾಂಬ್ ಸಿಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಅಶೋಕ್ (R Ashok) ಮಾತಾಡಿ, ಸೋನಿಯಾ, ರಾಹುಲ್ ಒತ್ತಡದಿಂದಾಗಿ ಸಿದ್ದರಾಮಯ್ಯ ಒಪ್ಪಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಈ ತೀರ್ಮಾನ ಕಪ್ಪು ಚುಕ್ಕೆ ಅಂದಿದ್ದಾರೆ. ರೇಣುಕಾಚಾರ್ಯ (MP Renukacharya) ಮಾತಾಡಿ, ಡಿಕೆಶಿ ಪರ ವಕೀಲರಾಗಿದ್ದ ಶಶಿಕಿರಣ್ ಶೆಟ್ಟಿ ಅವರನ್ನೇ ಅಡ್ವೊಕೇಟ್ ಜನರಲ್ ಮಾಡಿದ್ದಾರೆ. ಚಾರ್ಜ್‍ಶೀಟ್ ಹಾಕೋ ಸಂದರ್ಭದಲ್ಲಿ ಕೇಸ್ ವಾಪಸ್ ಪಡೆದಿದ್ದಾರೆ. ಡಿಕೆಶಿ ಉದ್ದೇಶಪೂರ್ವಕವಾಗಿ ಸಂಪುಟ ಸಭೆಗೆ ಹಾಜರಾಗಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿಬಿಐ ತನಿಖೆಗೆ ಅನುಮತಿ ಕೊಡುವ ವಿಚಾರ ಸ್ಪೀಕರ್ ಅಧಿಕಾರದ ವ್ಯಾಪ್ತಿಗೆ ಬರಲ್ಲ: ಮಾಜಿ ಸ್ಪೀಕರ್ ಸ್ಪಷ್ಟನೆ
ಬಿಜೆಪಿ ಆರೋಪಗಳ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಸಚಿವ ಸಂಪುಟದ ನಿರ್ಧಾರವೇ ಅಂತಿಮ. ನಾವೇನೇ ಮಾಡಿದರೂ ಕೋರ್ಟ್ ಅಂತಿಮ ತೀರ್ಮಾನ ಮಾಡುತ್ತೆ ಅಂದಿದ್ದಾರೆ.