ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಾಂಬೆಯಿಂದ ಸುಪಾರಿ ಕಿಲ್ಲರ್ಸ್ ಬಂದಿದ್ರಾ? ಸ್ಪಾಟ್‍ನಲ್ಲಿ ಸಿಕ್ಕ ಸುಳಿವು ಇಟ್ಟುಕೊಂಡು ಅಖಾಡಕ್ಕೆ ಇಳಿದ ಎಸ್‍ಐಟಿ ತಂಡ ಈ ಅನುಮಾನ ವ್ಯಕ್ತಪಡಿಸಿದೆ.
ಗುಂಡು ಹಾರಿಸಿದ ಹಂತಕ ಥೇಟ್ ಸಿನಿಮಾ ಸ್ಟೈಲ್‍ನಲ್ಲೇ ವರ್ತಿಸಿದ್ದಾನೆ. ಕಳೆದ ಎರಡು ಮೂರು ದಿನಗಳಿಂದ ಅದೇ ಐಡಿಯಲ್ ಹೋಮ್ಸ್ ಪ್ರದೇಶದಲ್ಲಿ ಓಡಾಟ ಮಾಡಿರೋ ಹಂತಕರು, ಕಾದು ಕೂತು ಗುಂಡು ಹಾರಿಸಿದ್ದಾರೆ. ಘಟನೆ ನಡೆಯೋದಕ್ಕೂ ಮುನ್ನ ಇಬ್ಬರು ಗೌರಿ ಅವರ ಮನೆಯ ಮುಂದೆ ಕಾದು ಕೂತಿದ್ದರು ಎನ್ನಲಾಗಿದೆ.
ಗೌರಿ ಅವರು ಮನೆ ತಲುಪಿದ ಕೂಡಲೇ ಕಾದು ಕೂತಿದ್ದ ಸಂಚುಕೋರರು, ಗುಂಡು ಹಾರಿಸುವವನಿಗೆ ಮಾಹಿತಿ ಮುಟ್ಟಿಸಿದ್ದಾರೆ. ಆ ಬಳಿಕ ಬಂದ ಆ ಆಗಂತುಕ ಗುಂಡು ಹಾರಿಸಿ, ಸಾವು ಖಚಿತ ಪಡಿಸಿಕೊಂಡೇ ಮುಂದೆ ಹೋಗಿದ್ದಾನೆ. ಇದು ಮುಂಬೈ ಮೂಲದ ಸುಪಾರಿ ಕಿಲ್ಲರ್ಸ್ ಮೋಡ್ಸ್ ಅನ್ನುತ್ತೆ ಎಸ್‍ಐಟಿ ತಂಡ.
ಇಷ್ಟರ ನಡುವೆ ಗಾಂಧೀ ಬಜಾರ್‍ನಿಂದ ಬಂದ ಗೌರಿ ಲಂಕೇಶ್ ಅವರು ಮನೆಯ ಮುಂಭಾಗ ಕಾರಿನಲ್ಲಿ ನಿಲ್ಲಿಸಿಕೊಂಡು ಒಂದೆರಡು ನಿಮಿಷ ಕಾರಿನಲ್ಲಿ ಕೂತು ಮೊಬೈಲ್ ನೋಡಿದ್ದಾರೆ. ಅದ್ಯಾರಿಗೋ ಮೆಸೇಜ್ ಕೂಡ ಕಳುಹಿಸಿದ್ದಾರೆ ಎನ್ನುತ್ತಿದೆ ಎಸ್‍ಐಟಿ ತಂಡ.